ETV Bharat / state

ರಾಹುಲ್ ಗಾಂಧಿ ರಾಜೀನಾಮೆಯಿಂದ ಪರಮೇಶ್ವರ್​​ಗೆ ಆಘಾತ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ ನೀಡಿರುವುದರಿಂದ ತಮಗೆ ಆಘಾತವಾಗಿದೆ ಎಂದು ಪರಮೇಶ್ವರ್​ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದಿನ ವಾರ ದೆಹಲಿಗೆ ತೆರಳಿ ರಾಹುಲ್ ಅವರನ್ನ ಭೇಟಿ ಮಾಡುವುದಾಗಿ ಡಿಸಿಎಂ ಹೇಳಿದ್ದಾರೆ.

ರಾಹುಲ್ ರಾಜಿನಾಮೆ ಆಘಾತ ತಂದಿದೆ : : ಪರಮೇಶ್ವರ್
author img

By

Published : Jul 4, 2019, 3:32 PM IST

ಬೆಂಗಳೂರು: ರಾಹುಲ್ ಗಾಂಧಿ ನಮ್ಮ ಅಧ್ಯಕ್ಷರು. ಚುನಾವಣೆ ಫಲಿತಾಂಶದಿಂದ ಸಹಜವಾಗಿ ಅವರಿಗೆ ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಹುಲ್​ ಗಾಂಧಿ ಪಕ್ಷದ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದಾರೆ. ಮುಂದೆ ಕಾರ್ಯಕಾರಿಣಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡಬೇಕು. ರಾಹುಲ್ ಗಾಂಧಿ ಅವರೇ ಕಾರ್ಯಕಾರಿಣಿಯಾಗಿ ಮುಂದುವರೆಯಬೇಕು. ರಾಹುಲ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿರುವುದು ನಮಗೆ ಆಘಾತ ತಂದಿದೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ಅವರನ್ನ ಭೇಟಿ ಮಾಡ್ತೇನೆ ಎಂದು ಡಿಸಿಎಂ ಪರಮೇಶ್ವರ್​ ತಿಳಿಸಿದರು.

ಆನಂದ್ ಸಿಂಗ್ ಸಂಪರ್ಕಿಸುವ ಯತ್ನ ಮಾಡಿಲ್ಲ

ಶಾಸಕ ಆನಂದ್ ಸಿಂಗ್ ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ನಾನು ಮಾಡಿಲ್ಲ. ಒಂದು ಹಂತದವರೆಗೆ ಮನವೊಲಿಸಬಹುದು. ಆ ಹಂತ ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಸಿಎಂ ಅಮೆರಿಕ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್-ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ನಾನು ಮತ್ತು ಸಿಎಂ ಕುಮಾಸ್ವಾಮಿಯವರು ಶಾಸಕರನ್ನ ಕರೆದು ಅವರ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಮಾತುಕತೆ ನಡೆಸ್ತೇವೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ವಿ. ಆದ್ರೆ ಸಿ.ಎಲ್.ಪಿ ಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಆಗಲ್ಲ ಎಂದರು.

ಪ್ರತ್ಯೇಕವಾಗಿಯೇ ಶಾಸಕರ ಜೊತೆ ಮಾತನಾಡಲು ನಾನು ಮತ್ತೆ ಸಿಎಂ ನಿರ್ಧರಿಸಿದ್ದೇವೆ. ಶಾಸಕರು ಬಹಿರಂಗವಾಗಿ ಮಾಧ್ಯಮಗಳಿಗೆ ಮಾತಾಡಬಾರದು. ಅವರ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಏನೇ ಇದ್ದರು ನಮ್ಮ ಎದುರೇ ಹೇಳಿಕೊಳ್ಳಲಿ ಎಂದು ಪರಮೇಶ್ವರ್​ ಸೂಚಿಸಿದರು.

ಇನ್ನು ರಿವರ್ಸ್ ಆಪರೇಷನ್ ವಿಚಾರದ ಬಗ್ಗೆ ಮಾತನಾಡಿದ ಜಿ. ಪರಮೇಶ್ವರ್​ ಅವರು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಕೇಳಿ. ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಲ್ವಾ. ಅವರು ಹೇಳಿದ್ರೆ ಒಂದು ರೀತಿಯ ಅರ್ಥ ಇರುತ್ತೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

Intro:newsBody:ರಾಹುಲ್ ನಿರ್ಧಾರ ಆಘಾತ ತಂದಿದೆ, ಮುಂದಿನ ವಾರ ಭೇಟಿ ಮಾಡುತ್ತೇನೆ: ಪರಮೇಶ್ವರ್

ಬೆಂಗಳೂರು: ರಾಹುಲ್ ಗಾಂಧಿ ಅವರು ನಮ್ಮ ಅಧ್ಯಕ್ಷರು. ಚುನಾವಣೆ ಫಲಿತಾಂಶದಿಂದ ಸಹಜವಾಗಿ ಅವರಿಗೆ ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದಾರೆ. ಮುಂದೆ ಕಾರ್ಯಕಾರಿಣಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡ ಬೇಕು. ಕಾರ್ಯಕಾರಿಣಿ ರಾಹುಲ್ ಗಾಂಧಿ ಅವರೇ ಮುಂದುವರೆಯಬೇಕು ಎನ್ನುತ್ತಾರಾ ನೋಡಬೇಕು. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಮಗೆ ಆಘಾತ ತಂದಿದೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ರಾಹುಲ್ ಅವರನ್ನ ಭೇಟಿ ಮಾಡ್ತೇನೆ ಎಂದರು.
ಸಂಪರ್ಕಿಸುವ ಯತ್ನ ಮಾಡಿಲ್ಲ
ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ. ಒಂದು ಹಂತದವರೆಗೆ ಮನವೊಲಿಸಬಹುದು. ಆ ಹಂತ ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಸಿಎಂ ಬಂದ ಮೇಲೆ ಚರ್ಚೆ
ಸಿಎಂ ಅಮೇರಿಕಾ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್ ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ನಾನು ಸಿಎಂ ಇಬ್ಬರು ಒಬ್ನೊಬ್ಬರೇ ಶಾಸಕರನ್ನ ಕರೆದು ಅವರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸ್ತೇವೆ. ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ವಿ. ಆದ್ರೆ ಸಿಎಲ್.ಪಿ ಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಆಗಲ್ಲ. ಪ್ರತ್ಯೇಕವಾಗಿಯೇ ಶಾಸಕರ ಜೊತೆ ಮಾತಾಡಲು ನಾನು ಸಿಎಂ ನಿರ್ಧರಿಸಿದ್ದೇವೆ. ಶಾಸಕರು ಬಹಿರಂಗವಾಗಿ ಮಾಧ್ಯಮಗಳಿಗೆ ಮಾತಾಡಬಾರದು. ಅವರ ಸಮಸ್ಯೆಗಳು, ಭಿನ್ನಾಭಿಪ್ರಶಯಗಳನ್ನ ನಮ್ಮ ಎದುರೇ ಹೇಳಿಕೊಳ್ಳಲಿ ಎಂದರು.
ರಿವರ್ಸ್ ಆಪರೇಷನ್
ರಿವರ್ಸ್ ಆಪರೇಷನ್ ವಿಚಾರ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರನ್ನೇ ಕೇಳಿ. ಗುಂಡುರಾವ್ ಅವರು ಕೆಪಿಸಿಸಿ ಅಧ್ಯಕ್ಷರಲ್ವಾ. ಅವರು ಹೇಳಿದ್ರೆ ಒಂದು ರೀತಿಯ ಅರ್ಥ ಇರುತ್ತೆ ಎಂದು ಪರೋಕ್ಷವಾಗಿ ದಿನೇಶ್ ಗುಂಡುರಾವ್ ಗೆ ಟಾಂಗ್ ಕೊಟ್ಟರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.