ಬೆಂಗಳೂರು: ದೇಶದ ಐಕ್ಯತೆಗಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಭಾರೀ ಜನ ಬೆಂಬಲದೊಂದಿಗೆ ಪಾದಯಾತ್ರೆ ಈಗಾಗಲೇ 1000 ಕಿಮೀ ಪೂರೈಸಿದೆ. ಯಾತ್ರೆಯಲ್ಲಿ ಕೆಲ ಚಿತ್ರ ತಾರೆಯರು ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲೂ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ.
ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆ.7 ರಂದು ಆರಂಭವಾಗಿರುವ ಪಾದಯಾತ್ರೆ ಅ.15 ರಂದು ಬಳ್ಳಾರಿ ತಲುಪಿ 1,000 ಕಿ.ಮೀ. ಗುರಿ ತಲುಪಿದೆ. ಮಹತ್ವದ ಮೈಲಿಗಲ್ಲು ಮುಟ್ಟಿರುವ ಕಾಂಗ್ರೆಸ್ ಯಾತ್ರೆಯ ಹಿಂದಿನ ದಿನಗಳತ್ತ ಮುಖಮಾಡಿ ನೋಡಿದಾಗ ಯಾತ್ರೆಗೆ ಸಮಾಜದ ವಿವಿಧ ಕ್ಷೇತ್ರದ ಗಣ್ಯರ ಬೆಂಬಲ ನೀಡಿರುವುದು ಕಾಣಿಸುತ್ತದೆ. ಆದರೆ, ರಾಜಕಾರಣಿಗಳು ಕಮ್ ಚಿತ್ರರಂಗದ ಪ್ರಮುಖರು ಎಲ್ಲಿಯೂ ಕಾಣಿಸಿಲ್ಲ. ತಾರೆಯರ ಅನುಪಸ್ಥಿತಿಯ ನಡುವೆಯೂ ಯಾತ್ರೆ ಮಾತ್ರ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ.
-
LIVE: Yatris and Shri @RahulGandhi take another stride at the #BharatJodoYatra. Join us!https://t.co/mN5jMVZk8Q
— Karnataka Congress (@INCKarnataka) October 14, 2022 " class="align-text-top noRightClick twitterSection" data="
">LIVE: Yatris and Shri @RahulGandhi take another stride at the #BharatJodoYatra. Join us!https://t.co/mN5jMVZk8Q
— Karnataka Congress (@INCKarnataka) October 14, 2022LIVE: Yatris and Shri @RahulGandhi take another stride at the #BharatJodoYatra. Join us!https://t.co/mN5jMVZk8Q
— Karnataka Congress (@INCKarnataka) October 14, 2022
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯು ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುತ್ತಿದೆ. ಪಾದಯಾತ್ರೆ ಸುಮಾರು 150 ದಿನಗಳ ಕಾಲ ನಡೆಯಲಿದೆ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆ ಸಂಚರಿಸಲಿದೆ.
-
ಬದಲಾವಣೆಗೆ ಜನ ಬಯಸಿದೆ
— Karnataka Congress (@INCKarnataka) October 14, 2022 " class="align-text-top noRightClick twitterSection" data="
ಕರ್ನಾಟಕ ಮುನ್ನುಡಿ ಬರೆದಿದೆ
ದಿನದಿನಕ್ಕೂ ಹರಿದು ಬರುತ್ತಿರುವ ಅಪಾರ ಜನಸ್ತೋಮ ನಮ್ಮ ಹುರುಪು ಹೆಚ್ಚಿಸಿದೆ.
ಜಗ್ಗದೆ ಕುಗ್ಗದೆ ಸಾಗುತ್ತಿದೆ ನಮ್ಮ ಐಕ್ಯತಾ ಯಾತ್ರೆ #BharatJodoYatra pic.twitter.com/PJFkHrBadI
">ಬದಲಾವಣೆಗೆ ಜನ ಬಯಸಿದೆ
— Karnataka Congress (@INCKarnataka) October 14, 2022
ಕರ್ನಾಟಕ ಮುನ್ನುಡಿ ಬರೆದಿದೆ
ದಿನದಿನಕ್ಕೂ ಹರಿದು ಬರುತ್ತಿರುವ ಅಪಾರ ಜನಸ್ತೋಮ ನಮ್ಮ ಹುರುಪು ಹೆಚ್ಚಿಸಿದೆ.
ಜಗ್ಗದೆ ಕುಗ್ಗದೆ ಸಾಗುತ್ತಿದೆ ನಮ್ಮ ಐಕ್ಯತಾ ಯಾತ್ರೆ #BharatJodoYatra pic.twitter.com/PJFkHrBadIಬದಲಾವಣೆಗೆ ಜನ ಬಯಸಿದೆ
— Karnataka Congress (@INCKarnataka) October 14, 2022
ಕರ್ನಾಟಕ ಮುನ್ನುಡಿ ಬರೆದಿದೆ
ದಿನದಿನಕ್ಕೂ ಹರಿದು ಬರುತ್ತಿರುವ ಅಪಾರ ಜನಸ್ತೋಮ ನಮ್ಮ ಹುರುಪು ಹೆಚ್ಚಿಸಿದೆ.
ಜಗ್ಗದೆ ಕುಗ್ಗದೆ ಸಾಗುತ್ತಿದೆ ನಮ್ಮ ಐಕ್ಯತಾ ಯಾತ್ರೆ #BharatJodoYatra pic.twitter.com/PJFkHrBadI
ಇದನ್ನೂ ಓದಿ: ಕಾಂಗ್ರೆಸ್ ಧ್ವಜ ಹಿಡಿದು ರಾಗಾ ಜೊತೆ ಓಡಿದ ಡಿಕೆ ಶಿವಕುಮಾರ್
ರಾಹುಲ್ ಜೊತೆ ಯಾರೆಲ್ಲ ಯಾತ್ರಿಗಳು: ಬೆಳಿಗ್ಗೆಯಿಂದ ಸಂಜೆಯವರೆಗೆ ರಾಹುಲ್ ಗಾಂಧಿ ಜೊತೆ ಇರುವ 60 ಯಾತ್ರಿಗಳಿಗೆ ವಿಶೇಷ ಕಾಳಜಿ ತೋರಿಸಲಾಗುತ್ತಿದೆ. ರಾಜಸ್ಥಾನದ ಸೀತಾರಾಮ್ ಲಾಂಬಾ, ಹಳ್ಳಿಯೊಂದರ 'ಸರ್ಪಂಚ್' ಆಗಿರುವ ಪಂಜಾಬ್‌ನ ಅಮೃತಸರದ ಮನೋಜ್ ಸಿಂಗ್, ಕೇರಳದ ಕೆ ಟಿ ಬಿನಿ, ಮಣಿಪುರದ ಪಕ್ಷದ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಕಿಮ್, ಭಾರತೀಯ ಯುವ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಾಹುಲ್ ರಾವ್ ಮತ್ತಿತರರನ್ನು ಒಳಗೊಂಡ ಆಂತರಿಕ ತಂಡ ರಾಹುಲ್ ಜೊತೆ ಬಲವಾಗಿ ನಿಂತಿದೆ. ಯಾತ್ರಿಗಳು ಬೆಳಿಗ್ಗೆ 4 ಗಂಟೆಗೆ ಏಳುತ್ತಾರೆ, ತಣ್ಣೀರಿನ ಸ್ನಾನ ಮಾಡಿ ಧ್ಜಜ ವಂದನೆ, ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಿ ಸಿದ್ಧರಾಗುತ್ತಾರೆ. ನಂತರ ಬೆಳಗ್ಗೆ 6.30 ರ ಸುಮಾರಿಗೆ ರಾಹುಲ್ ಅವರೊಂದಿಗೆ ರಸ್ತೆಗೆ ಇಳಿಯುತ್ತಾರೆ. ರಾತ್ರಿ 10.30ರ ಸುಮಾರಿಗೆ ಅವರು ಮಲಗುತ್ತಾರೆ. ರಾಹುಲ್ ಮತ್ತು ಟೀಂ ಜೊತೆ ಆಯಾ ಭಾಗದ ಜನರು ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು
ತಾಯಿ-ಸೋದರಿ ಬೆಂಬಲ: ರಾಹುಲ್ ಗಾಂಧಿಗೆ ಚಿತ್ರರಂಗದ ಗಣ್ಯರ ಬೆಂಬಲ ಸಿಗಲಿದೆ ಎಂಬ ನಂಬಿಕೆ ಇತ್ತು. ಆದರೆ ಕೇರಳ, ತಮಿಳುನಾಡು ಇದೀಗ ಕರ್ನಾಟಕದಲ್ಲಿ ಯಾತ್ರೆ ನಡೆಯುತ್ತಿದ್ದು, ಚಿತ್ರರಂಗದ ಗಣ್ಯರು ರಾಹುಲ್ ಜತೆ ಹೆಜ್ಜೆ ಹಾಕಿಲ್ಲ. ಮಂಡ್ಯದಲ್ಲಿ ಸಂಸದೆ ಹಾಗೂ ನಟಿ ಸುಮಲತಾ ಹೆಜ್ಜೆ ಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು. ಪಕ್ಷದ ಮಾಜಿ ಸಂಸದೆ ರಮ್ಯಾ, ಮಾಜಿ ಎಂಎಲ್ಸಿ ಡಾ. ಜಯಮಾಲಾ, ಮಾಜಿ ಸಚಿವೆ ಉಮಾಶ್ರಿ ಸೇರಿದಂತೆ ಹಲವರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.
ಸದ್ಯ ರಾಹುಲ್ ಪರ ಅವರ ತಾಯಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಡ್ಯದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದೀಗ ಅ.22 ರಂದು ರಾಯಚೂರಿನಲ್ಲಿ ಪಾದಯಾತ್ರೆ ಸಾಗುವ ದಿನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಇದು 1.25 ಲಕ್ಷ ಜನ ರಾಹುಲ್ ಜೊತೆ ಹೆಜ್ಜೆಹಾಕಿದ್ರು. ಮತ್ತು ಕರ್ನಾಟಕದಲ್ಲಿ ಶುಕ್ರವಾರದವರೆಗೆ 1.50 ಲಕ್ಷ ಜನರು ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಯಾತ್ರೆ ಆಂಧ್ರಪ್ರದೇಶವನ್ನು ಪ್ರವೇಶಿಸಿದಾಗ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆ ಭುವನಹಳ್ಳಿಯಲ್ಲಿ ಅ.7 ರಂದು ಪತ್ರಕರ್ತೆ ದಿ.ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಮತ್ತು ಸಹೋದರಿ ಕವಿತಾ ಲಂಕೇಶ್ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಭಿನ್ನಮತೀಯ ಶಾಸಕ ಎಸ್‌ಆರ್ ಶ್ರೀನಿವಾಸ್ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ರಂದೀಪ್ ಸುರ್ಜೇವಾಲ್, ಕೆಸಿ ವೇಣುಗೋಪಾಲ್ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಬಿಜೆಪಿ ಮತ್ತು ಆರ್ಎಸ್ಎಸ್ ವಿಚಾರಧಾರೆ ದೇಶ ವಿಭಜನೆ ಮಾಡುತ್ತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ದಿನದಿಂದ ದಿನಕ್ಕೆ ಹೆಚ್ಚಿನ ಜನ ಬೆಂಬಲದೊಂದಿಗೆ ಮುನ್ನುಗ್ಗುತ್ತಿದ್ದು, ಎದುರಾಳಿ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.