ETV Bharat / state

ಧರಣಿ ಮಾಡ್ತಿರೋದು ಕೇವಲ 20 ಮಂದಿ ಮಾತ್ರ, ಉಳಿದವರು ಕಾಣೆ : ಸಚಿವ ಆರ್.ಅಶೋಕ್ - ವಿಧಾನ ಪರಿಷತ್ ಕಲಾಪ

ಇವರದ್ದೇ ವೈಯಕ್ತಿಕ ಹಿಡನ್ ಅಜೆಂಡಾ ಇಲ್ಲಿ ಗೊತ್ತಾಗ್ತಿದೆ. ಜನರು, ರೈತರು, ಕೂಲಿ ಕಾರ್ಮಿಕರು ನಮಗೆ ಏನಾದ್ರೂ ಮಾಡ್ತಾರೆ ಅಂತಾ ಕಾಯ್ತಿದ್ದಾರೆ. ಜನ ಅವರನ್ನ ಆಯ್ಕೆ ಮಾಡಿ ಇಲ್ಲಿಗೆ ಕಳಿಸಿದ್ದು, ಅವರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಆರೋಪಿಸಿದರು..

ಆರ್.ಅಶೋಕ್
ಆರ್.ಅಶೋಕ್
author img

By

Published : Feb 21, 2022, 1:26 PM IST

ಬೆಂಗಳೂರು : ಧರಣಿ ಮಾಡ್ತಿರೋದು ಕೇವಲ 20 ಜನ ಮಾತ್ರ. ಉಳಿದವರು ಕಾಣೆಯಾಗಿದ್ದಾರೆ ಎಂದು ಸಚಿವ ಆರ್ ಅಶೋಕ್ ಕಾಂಗ್ರೆಸ್ ಪ್ರತಿಭಟನೆಗೆ ಟಾಂಗ್ ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸದನದ ಬಗ್ಗೆ ಮಾತನಾಡುವಾಗ ಜನರ ಸಮಸ್ಯೆಗಿಂತ ನಮ್ಮ ಸಮಸ್ಯೆ ಬಗೆಹರಿಸಬೇಕು ಅಂತಾ ಹೇಳಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತಿದೆ. ವಿಧಾನಮಂಡಲ ಇರುವುದು ಜನರಿಗಾಗಿ.

ಇವರದ್ದೇ ವೈಯಕ್ತಿಕ ಹಿಡನ್ ಅಜೆಂಡಾ ಇಲ್ಲಿ ಗೊತ್ತಾಗ್ತಿದೆ. ಜನರು, ರೈತರು, ಕೂಲಿ ಕಾರ್ಮಿಕರು ನಮಗೆ ಏನಾದ್ರೂ ಮಾಡ್ತಾರೆ ಅಂತಾ ಕಾಯ್ತಿದ್ದಾರೆ. ಜನ ಅವರನ್ನ ಆಯ್ಕೆ ಮಾಡಿ ಇಲ್ಲಿಗೆ ಕಳಿಸಿದ್ದು, ಅವರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧದ ಮುಂಭಾಗ ಮಾತನಾಡಿದ ಸಚಿವ ಆರ್.ಅಶೋಕ್

ಕಾಂಗ್ರೆಸ್ ಹಿಡನ್ ಅಜೆಂಡಾ ಅಂತ್ಯವಾಗಬೇಕು. ಜನರು ಇವರಿಗೆ ಛೀಮಾರಿ ಹಾಕ್ತಿದ್ದಾರೆ. ಈಗ ಸ್ಪೀಕರ್ ಅವರ ಬಳಿ ಕೂಡ ಮಾತನಾಡ್ತೇನೆ. ಕಲಾಪ ಸುಗಮವಾಗಿ ನಡೆಯಬೇಕು. ಯಾರಿಗೋ ಹೆದರಿ ಅಧಿವೇಶನ ಮೊಟಕು ಮಾಡಲ್ಲ. ಜನರಿಗಾಗಿ ಅಧಿವೇಶನ ಕರೆದಿರೋದು. ಕಾಂಗ್ರೆಸ್​ನವರಿಗಾಗಿ ಅಲ್ಲ. ಅಧಿವೇಶನದಲ್ಲಿ ಜನರ ಸಮಸ್ಯೆ ಬಗೆಹರಿಯಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.