ಬೆಂಗಳೂರು: ಯುವಕರು ಕೃಷಿಯಿಂದ ವಿಮುಖರಾದ್ರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮಾನವ ಸಂಪನ್ಮೂಲವನ್ನು ಯಶಸ್ವಿಯಾಗಿ ಬಳಸಿ ಕೃಷಿಗೆ ಪ್ರಾಧಾನ್ಯತೆ ನೀಡಬೇಕು. ಅಲ್ಲದೆ ಉದ್ಯೋಗ ಸೃಷ್ಟಿ ಅಂತ ಬೊಬ್ಬೆ ಹೊಡೆಯುವ ಜನರಿಗೆ ಕೃಷಿ ಉತ್ತಮ ಕ್ಷೇತ್ರ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ಕೃಷಿ ಮೇಳದ ಎರಡನೇ ದಿನ ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಮಿಸಿದ್ದರು. ಕೇಂದ್ರ ಸಚಿವ ಸದಾನಂದಗೌಡರ ಭಾಷಣದ ಮಧ್ಯೆ ಎದ್ದುನಿಂತ ಇಬ್ಬರು ರೈತರು, ಕೇಂದ್ರ ಸರ್ಕಾರ ಹಾಲು ಆಮದು ಮಾಡಿಕೊಳ್ಳುತ್ತಿದೆಯಾ, ಹೀಗಾದ್ರೆ ರೈತರ ಗತಿಯೇನು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ರೈತನಿಗೆ ಹಿತಾಸಕ್ತಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಯಾವ ಕೆಲಸವನ್ನೂ ಮಾಡೋದಿಲ್ಲ. ಹಾರಿಕೆಯ ಸುದ್ದಿಗಳಿಗೆ ಕಿವಿ ಕೊಡಬೇಡಿ. ಜನರ ಸಲಹೆ ಸ್ವೀಕರಿಸಿಯೇ ನೀತಿ ಮಾಡುತ್ತೇವೆ. ಏನೇ ಗೊಂದಲವಿದ್ದರೂ, ನನ್ನ ಬಳಿ ಬಂದು ಮಾತಾಡಿ ಎಂದು ಸಮಾಧಾನಪಡಿಸಿದರು.
ಬಳಿಕ ಮಾತನಾಡಿದ ಅವರು, ಯುವಕರು ಕೃಷಿಯಿಂದ ವಿಮುಖರಾದರೆ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮಾನವ ಸಂಪನ್ಮೂಲವನ್ನು ಯಶಸ್ವಿಯಾಗಿ ಬಳಸಿ ಕೃಷಿಗೆ ಪ್ರಾಧಾನ್ಯತೆ ನೀಡಬೇಕು ಎಂದರು. ಅಲ್ಲದೇ ಉದ್ಯೋಗ ಸೃಷ್ಟಿ ಅಂತ ಬೊಬ್ಬೆ ಹೊಡೆಯುವ ಜನರಿಗೆ ಕೃಷಿ ಉತ್ತಮ ಕ್ಷೇತ್ರ ಎಂದರು.
ಹೀಗಾಗಿ ಸರ್ಕಾರ ರೈತಮುಖಂಡರು ಹಾಗೂ ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನಿಸಬೇಕು. 'ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟ್ನಶಿಪ್ ಅಡಿಯಲ್ಲಿ 16 ದೇಶಗಳು ಒಪ್ಪಂದ ಮಾಡಿಕೊಳ್ಳಲು ಚರ್ಚೆ ನಡೀತಿವೆ. ಈಗಾಗಲೇ 27 ಸಭೆಗಳಾಗಿವೆ. ನವೆಂಬರ್ 4 ನೇ ತಾರೀಕು ಅಂತಿಮ ಆಗಬಹುದು. ಅಂತಿಮ ಆದ್ರೆ ನಮ್ಮ ದೇಶದ ಕೃಷಿ ಉತ್ಪನ್ನ, ಸಂಬಾರ ಪದಾರ್ಥಗಳು, ಗುಡಿ ಕೈಗಾರಿಕೆಗಳು ಡೈರಿ ಪ್ರಾಡಕ್ಟ್ಸ್ ಮೇಲೆ ದೊಡ್ಡ ಹೊಡೆತ ಬೀಳಬಹುದು ಎಂಬ ಚರ್ಚೆ ಇದೆ. ಅಂಕಿ ಅಂಶ ಪ್ರಕಾರ 10 ಕೋಟಿ ಜನ ಹೈನುಗಾರಿಕೆಯಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ 77 ಲಕ್ಷ ಲೀಟರ್ ಹಾಲನ್ನು ನಿತ್ಯ ಉತ್ಪಾದಿಸುತ್ತಿದ್ದೇವೆ. 25 ಲಕ್ಷ ಜನ ಹೈನುಗಾರಿಕೆ ಮಾಡ್ತಿದಾರೆ ಎಲ್ಲರೂ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ದ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯನಾ ಎಂದರು.
ಇದೇ ವೇಳೆ, ಕೃಷಿ ವಿವಿಗಳು ಹೆಚ್ಚಾಗಿ ಸಂಶೋಧನೆ ಹಾಗೂ ವಿಸ್ತರಣೆಗೆ ಒತ್ತು ಕೊಡಬೇಕು ಎಂದರು. ಬರಗಾಲ ಹಾಗೂ ಪ್ರವಾಹಕ್ಕೆ ಸರಿಹೊಂದುವ ಕೃಷಿ ಅಭಿವೃದ್ಧಿಪಡಿಸಬೇಕು ಎಂದರು. ನಮ್ಮ ದೇಶ ಹಸಿವಿನ ಸೂಚ್ಯಂಕದಲ್ಲಿ 102 ನೇ ಸ್ಥಾನದಲ್ಲಿದೆ. ಪಾಕ್, ಬಾಂಗ್ಲಾ ನಮಗಿಂತ ಮೇಲ್ಮಟ್ಟದಲ್ಲಿ ಇದಾರೆ ಎಂದು ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಬಗ್ಗೆ ಪರೋಕ್ಷವಾಗಿ ಟೀಕಿಸಿದರು.