ETV Bharat / state

ರಾಜ್ಯದಲ್ಲಿ ಮತ್ತಷ್ಟು ಏರಿದ ಕೊರೊನಾ ಸೋಂಕಿತರ ಸಂಖ್ಯೆ: ಇನ್ಮುಂದೆ ಕ್ವಾರಂಟೈನ್​​​​ ಅವಧಿ 28 ದಿನ! - corona latest update

ಹಲವು ಜನರಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯ ನಂತರವೂ ಕೊರೊನಾ ಲಕ್ಷಣ ಕಂಡು ಬರುತ್ತಿದ್ದು, ಇನ್ಮುಂದೆ ಕ್ವಾರಂಟೈನ್​ ಅವಧಿಯನ್ನು 28 ದಿನಗಳಿಗೆ ವಿಸ್ತರಿಸಲಾಗಿದೆ.

Quarantine
ಕ್ವಾರಂಟೈನ್​
author img

By

Published : Apr 13, 2020, 7:03 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಇಂದು ಹೊಸ 15 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 247ಕ್ಕೆ ಏರಿಕೆಯಾಗಿದೆ. ಅವುಗಳ ಪೈಕಿ 6 ಜನ ಮೃತಪಟ್ಟಿದ್ದರೆ, 60 ಜನ ಡಿಸ್ಜಾರ್ಜ್ ಆಗಿದ್ದಾರೆ.

ಇನ್ನು ಕೊರೊನಾ ಸೋಂಕು ಏರಿಕೆಯಾಗುತ್ತಲೇ ಇದ್ದು, ಇಷ್ಟು ದಿನ‌ ಕೊರೊನಾ ಶಂಕಿತರನ್ನ 14 ದಿನಗಳ ಕ್ವಾರಂಟೈನ್ ಮಾಡಲಾಗ್ತಿತ್ತು. ಆ ದಿನಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಅಂದರೆ ಅಂತಹವರನ್ನ ಕ್ವಾರಂಟೈನ್​​ನಿಂದ ಮುಕ್ತಿ ನೀಡಲಾಗುತ್ತಿತ್ತು.

ಆದರೆ ಇನ್ಮುಂದೆ ಕ್ವಾರಂಟೈನ್ ಅವಧಿ 28 ದಿನ ಇರಲಿದೆ. 14 ದಿನಗಳ ಕ್ವಾರಂಟೈನ್ ಸಾಲುತ್ತಿಲ್ಲ. ಹಲವು ಶಂಕಿತರಲ್ಲಿ 14 ದಿನಗಳಾದ ನಂತರ ರೋಗ ಲಕ್ಷಣ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲಾಗಿದೆ.

ದೆಹಲಿಯ ತಬ್ಲಿಘಿ ಜಮಾತ್​ಗೆ ಹೋದವರಲ್ಲಿ 40 ಜನರಿಗೆ ಪಾಸಿಟಿವ್

ಇಲ್ಲಿಯವರೆಗೆ ತಬ್ಲಿಘಿ ಜಮಾತ್​ನಲ್ಲಿ ಭಾಗಿಯಾದ ಸುಮಾರು 1,330 ಮಂದಿಯನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 40 ಪಾಸಿಟಿವ್ ಪ್ರಕರಣ ವರದಿ ಆಗಿದೆ. 1,255 ಜನರ ವರದಿ ನೆಗೆಟಿವ್ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಯಾಕಂದ್ರೆ ಸಾಕಷ್ಟು ಮಂದಿ ಮಾಹಿತಿ ಕೊಟ್ಟಿಲ್ಲ. ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಜನರು ಹೋಗಿ ಬಂದಿರುವ ಮಾಹಿತಿ ಸಿಕ್ತಿದೆ. ಅವರನ್ನ ಹುಡುಕುವ, ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೀತಿದೆ ಅಂತ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯಕ್ಕೆ ರ್ಯಾಪಿಡ್ ಟೆಸ್ಟ್ ಕಿಟ್​ಗಳು ಬರುವುದು ಮತ್ತಷ್ಟು ತಡ

ಇನ್ನು ರಾಜ್ಯಕ್ಕೆ ಇಂದು ಬರಬೇಕಿದ್ದ ರ್ಯಾಪಿಡ್ ಟೆಸ್ಟ್ ಕಿಟ್​ಗಳು ತಡವಾಗಿದೆ. ಇದರಿಂದ ಹೆಚ್ಚು ಜನರ ಪರೀಕ್ಷೆ ಮಾಡಲು ಸಾಧ್ಯವಿದೆ. ಕೇವಲ 20 ನಿಮಿಷಗಳಲ್ಲಿ ರಿಸಲ್ಟ್ ನೀಡುವ ರ್ಯಾಪಿಡ್ ಕಿಟ್​ಗಳು ಇನ್ನೂ ಒಂದು ವಾರದೊಳಗೆ ಬರುವ ಸಾಧ್ಯತೆ ಇದೆ. ಅಷ್ಟರೊಳಗೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಆತಂಕವಿದೆ.

ಜಿಲ್ಲಾವಾರು ಮಾಹಿತಿ

ಬೆಂಗಳೂರು - 77 ಪ್ರಕರಣ
ಮೈಸೂರು - 48 ಪ್ರಕರಣ
ದಕ್ಷಿಣ ಕನ್ನಡ - 12 ಪ್ರಕರಣ
ಬೆಳಗಾವಿ - 17 ಪ್ರಕರಣ
ಉತ್ತರ ಕನ್ನಡ - 9 ಪ್ರಕರಣ
ಚಿಕ್ಕಬಳ್ಳಾಪುರ - 9 ಪ್ರಕರಣ
ಕಲಬುರಗಿ - 13 ಪ್ರಕರಣ
ಬೆಂಗಳೂರು ಗ್ರಾಮಾಂತರ - 05 ಪ್ರಕರಣ
ಬೀದರ್ - 13 ಪ್ರಕರಣ
ದಾವಣಗೆರೆ - 3 ಪ್ರಕರಣ
ಉಡುಪಿ - 3 ಪ್ರಕರಣ
ಬಳ್ಳಾರಿ - 6 ಪ್ರಕರಣ
ಕೊಡಗು - 1 ಪ್ರಕರಣ
ಧಾರವಾಡ - 6 ಪ್ರಕರಣ
ತುಮಕೂರು - 1 ಪ್ರಕರಣ
ಬಾಗಲಕೋಟೆ - 9 ಪ್ರಕರಣ
ಮಂಡ್ಯ - 8 ಪ್ರಕರಣ
ಗದಗ - 1 ಪ್ರಕರಣ
ವಿಜಯಪುರ - 6 ಪ್ರಕರಣ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.