ETV Bharat / state

ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಸ್ತಬ್ಧ: ಸಾರ್ವಜನಿಕ ಸಾರಿಗೆ ಹೇಗೆ ಬಳಕೆಯಾಗ್ತಿದೆ ಗೊತ್ತೇ? - public transport in corona time

ಬೆಂಗಳೂರಿನಲ್ಲಿ ಮೊದಲಿನಷ್ಟು ವಾಹನ‌‌ ಓಡಾಟ ಇರದೇ ಇರುವ ಕಾರಣ ಟ್ರಾಫಿಕ್ ಜಾಂ‌ ಅನ್ನೋದು ಅಷ್ಟೊಂದು ಕಂಡು ಬರ್ತಿಲ್ಲ. ಸದ್ಯ ಅಗತ್ಯ ಸೇವೆ ಹೊರತುಪಡಿಸಿ ಅನಗತ್ಯ ಓಡಾಟ ಮಾಡುವುದಕ್ಕೆ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

public transport in corona time
ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಸ್ಥಬ್ದ
author img

By

Published : Jul 11, 2020, 4:21 PM IST

ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಎಲ್ಲಿ ನೋಡಿದ್ರೂ ಟ್ರಾಫಿಕ್ ಕಿರಿಕಿರಿ. ಸದ್ಯ ಕೊರೊನಾ‌ ಸೋಂಕು ಹೆಚ್ಚಾಗ್ತಿರುವ ಕಾರಣ ಬೆಂಗಳೂರಿನಲ್ಲಿ ವಾಸ ಮಾಡುವ ಜನ ತಮ್ಮ ಊರಿನತ್ತ ಗಂಟುಮೂಟೆ ಕಟ್ಕೊಂಡು ಹೋಗ್ತಿದ್ದಾರೆ. ಇನ್ನು ಕೆಲವರು ಐಟಿಬಿಟಿ ಕಂಪನಿಯ ಕೆಲಸವನ್ನು ಮನೆಯಲ್ಲಿಯೇ ಇದ್ದುಕೊಂಡು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.

ಹೀಗಾಗಿ‌ ಮೊದಲಿನಷ್ಟು ವಾಹನ‌‌ ಓಡಾಟ ಇರದೇ ಇರುವ ಕಾರಣ ಟ್ರಾಫಿಕ್ ಜಾಂ‌ ಅನ್ನೋದು ಅಷ್ಟೊಂದು ಕಂಡು ಬರ್ತಿಲ್ಲ. ಸದ್ಯ ಅಗತ್ಯ ಸೇವೆ ಹೊರತುಪಡಿಸಿ ಅನಗತ್ಯ ಓಡಾಟ ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ರಸ್ತೆಗೆ ವಾಹನಗಳು ಇಳಿಯುವುದರ ಸಂಖ್ಯೆ ಕೂಡ‌‌ ಕಡಿಮೆಯಾಗಿದೆ.

ಮತ್ತೊಂದೆಡೆ‌ ಪಬ್ಲಿಕ್ ಟ್ರಾನ್ಸ್​​ಪೋರ್ಟ್ ಮೆಟ್ರೋ ಹಾಗೂ ಬಿಎಂಟಿಸಿ ಬಸ್, ಕ್ಯಾಬ್, ರೈಲುಗಳಿಗೆ ಜನ ಬರ್ತಿದ್ರು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಮೆಟ್ರೋ ವನ್ನ ಸಂಪೂರ್ಣವಾಗಿ ಕ್ಲೋಸ್ ಮಾಡಿದೆ. ಹಾಗೆ ಬಿಎಂಟಿಸಿ, ಕೆಎಸ್​​ಆರ್​​ಟಿಸಿ‌ ಬಸ್ ಇದ್ರೂ ‌ಕೂಡ ಒಂದು‌ ಸೀಟಿನಲ್ಲಿ ಒಬ್ಬರು ಕುಳಿತುಕೊಂಡು ಟ್ರಾವೆಲ್ ಮಾಡಬೇಕಾಗಿದೆ. ಇನ್ನು ಕೊರೊನಾ‌ ಭೀತಿಯಿಂದ ಜನರು ಅತೀ ಹೆಚ್ಚಾಗಿ ತಮ್ಮ ತಮ್ಮ ವಾಹನಗಳನ್ನು‌ ಬಳಕೆ‌ ಮಾಡ್ತಿದ್ದಾರೆ.‌ ಮನೆಯಲ್ಲಿ ವಾಹನ ಇಲ್ಲದ ವ್ಯಾಪಾರಿಗಳು ಅತೀ‌ ಕಡಿಮೆ‌ ಮಂದಿ ಪಬ್ಲಿಕ್ ಟ್ರಾನ್ಸ್​​ಪೋರ್ಟ್​​ಗೆ ಡಿಪೆಂಡ್ ಆಗಿದ್ದಾರೆ.

ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಸ್ಥಬ್ದ

ಮತ್ತೊಂದೆಡೆ, ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರ‌ ಪಾಡು ಕೇಳೋದೆ ಬೇಡ. ಕೊರೊನಾ ಇರುವ ಕಾರಣ ಕ್ಯಾಬ್ ಹಾಗೂ ಆಟೋವನ್ನ ಹತ್ತುವುದಕ್ಕೆ ಜನ‌‌ ಭಯಪಡ್ತಿದ್ದಾರೆ. ಚಾಲಕನ ತಲೆಯ ಹಿಂಬದಿಯ ಸೀಟ್ ಬಳಿ ಸೀಲ್ಡ್ ಅಳವಡಿಕೆ ಮಾಡಿದರೂ ಕೂಡ ಮೊದಲಿನಷ್ಟು ಜನ ಬರ್ತಿಲ್ಲ. ಹೀಗಾಗಿ‌ ದಿನದ ದುಡ್ಡಿಗೆ ಪರದಾಟ ಮಾಡ್ತಿದ್ದಾರೆ. ಮತ್ತೊಂದೆಡೆ‌‌‌ ಕೆಲ ಸಾರ್ವಜನಿಕರು ಅನಿವಾರ್ಯ ಕಾರಣಕ್ಕೆ ಕ್ಯಾಬ್, ಆಟೋ ಮೇಲೆ ಡಿಪೆಂಡ್ ಆದಾಗ ದುಡ್ಡು ಬೇಕಾ ಬಿಟ್ಟಿ ತಗೋತಾರೆ ಅನ್ನೋ ಆರೋಪ‌ ಕೂಡ ಕೇಳಿ‌ ಬಂದಿದೆ.

ಇನ್ನೂ ಆಟೋ ಚಾಲಕರಾದ ಅಂಥೋನಿ ಹೇಳುವ ಪ್ರಕಾರ, ಕೊರೊನಾದಿಂದಾಗಿ ಯಾರು ಆಟೋದಲ್ಲಿ ಪ್ರಯಾಣ ಮಾಡ್ತಿಲ್ಲ. ಸರ್ಕಾರ ಆಟೋ ಗ್ಯಾಸ್, ಪೆಟ್ರೋಲ್ ಜಾಸ್ತಿ ಮಾಡಿದೆ. ಅದರಲ್ಲು ಬೆಂಗಳೂರು ಬಿಟ್ಟು ಕೆಲವರು ಹೋಗಿದ್ದು ಅರ್ಧ ಸಿಟಿ ಖಾಲಿ ಆಗಿದೆ. ಹೀಗಾಗಿ ಆಟೋ ಚಾಲನೆ ಮಾಡ್ತಾ ತಿರುಗುವುದಕ್ಕೆ ಆಗಲ್ಲಂತ ಟೀ ತರಕಾರಿ ಮಾರಾಟ ಮಾಡಿ ಮನೆಯವರ ಹೊಟ್ಟೆ ತುಂಬಿಸ್ತಿದ್ದೀವಿ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಸದ್ಯ ಜಿಲ್ಲೆಗಳಿಗೆ ತೆರಳಲು ಕೆಎಸ್​​ಆರ್​ಟಿಸಿ ಬಸ್‌ ಬಿಟ್ಟಿದ್ದು, ಹಾಗೂ ನಗರದಲ್ಲಿ ಬಿಎಂಟಿಂಸಿ ಟ್ರಾವೆಲ್ ನಡೆದಿದೆ. ಆದರೆ ಬಸ್​​ಗಳಲ್ಲಿ ಎರಡು ಸೀಟಿನಲ್ಲಿ‌ ಒಬ್ಬರು ‌ಮಾತ್ರ ಕುಳಿತುಕೊಳ್ಳುವ ಕಾರಣ ಒಂದು‌ ಸೀಟ್ ಹಾಗೆ ಖಾಲಿಯಾಗಿ ಇದ್ದು ಇಲಾಖೆಗೆ ಕೂಡ ನಷ್ಟ ಉಂಟಾಗಿದೆ. ಜನ ಕೂಡ ಅಷ್ಟೊಂದು ಮೊದಲಿನಷ್ಟು ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಅನ್ನು ಇಷ್ಟಪಟ್ಟು ಬಳಕೆ ಮಾಡ್ತಿಲ್ಲ.

ಮತ್ತೊಂದೆಡೆ ಮೆಟ್ರೋ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಲಾಕ್​​ಡೌನ್‌ ಮುನ್ನ 4.20 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದರು. ಹೀಗಾಗಿ ನಿತ್ಯ 1 ಕೋಟಿ ಟಿಕೆಟ್ ರೆವೆನ್ಯೂ ಸಂಗ್ರಹವಾಗ್ತಿತ್ತು. ಆದರೆ ಮಾರ್ಚ್ 22 ರಂದು ಜನತಾ ಕರ್ಫೂನಿಂದ ಮೆಟ್ರೋ ಸಾರ್ವಜನಿಕವಾಗಿ ಸ್ಥಗಿತಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಮೆಟ್ರೋ ಓಪನ್ ಆಗದೇ ಇದ್ದು ಬಹುತೇಕ ನಷ್ಟದಲ್ಲಿದೆ ಮೆಟ್ರೋ.

ಕೊರೊನಾ ಬರುವ ಮೊದಲು‌ ಲಕ್ಷ ಲಕ್ಷ ವಾಹನ ರಸ್ತೆಗೆ ಇಳಿದು ಸಂಪೂರ್ಣ ಟ್ರಾಫಿಕ್ ಜಾಂ ಆಗೋದು. ಆದ್ರೆ ಸದ್ಯ ರಸ್ತೆ ಸಿಗ್ನಲ್ ಬಳಿ‌ ನಿಂತು ದಿನನಿತ್ಯ ಟ್ರಾಫಿಕ್​​ನ್ನ ಕಂಟ್ರೋಲ್ ಮಾಡುವ ಪೊಲೀಸರೇ ಹೇಳುವ ಪ್ರಕಾರ ಸಿಗ್ನಲ್ ಬಳಿ ನೂರಕ್ಕಿಂತ ಹೆಚ್ಚು ವಾಹನ ಸೇರ್ತಿತ್ತು. ಆದರೆ ಸದ್ಯ ಸಿಗ್ನಲ್​​ಗಳ ಬಳಿ ವಾಹನಗಳ ದಟ್ಟನೆ ಅಷ್ಟೊಂದು ಇಲ್ಲ. ಹಾಗೆ ರಾತ್ರಿ 8 ರಿಂದ ಸಿಟಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದು,‌ ಅನಿವಾರ್ಯ ಕೆಲಸಕ್ಕೆ ಮಾತ್ರ ಓಡಾಟ ಮಾಡ್ತಿದ್ದಾರೆಂದು ತಿಳಿಸಿದ್ದಾರೆ.

ಇನ್ನು ಜನಪರ ಹೋರಾಟಗಾರ ರವಿ ಕೃಷ್ಣಾರೆಡ್ಡಿ ಮಾತನಾಡಿ, ಜನ ಕೆಲಸ‌ ಕಳೆದುಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ‌ಬೆಲೆ ಏರಿಕೆ ಮಾಡಿದೆ. ಹೀಗಾಗಿ ಜನ ಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ ಎಂದರು. ಸದ್ಯ ಓಡಾಟ ಮಾಡೋದೆ ಹೆದರಿಕೆಯಾಗಿದೆ. ಪಬ್ಲಿಕ್ ಟ್ರಾನ್ಸ್​​ಪೋರ್ಟ್​​ ಬಳಕೆ ಮಾಡೋದಕ್ಕೆ ಹೆದರಿಕೆಯಾಗುವ ಪರಿಸ್ಥಿತಿ ಉಂಟಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ‌ತಮ್ಮ ತಮ್ಮ ವಾಹನಗಳಿಗೆ ಡಿಪೆಂಡ್ ಆಗಿದ್ದೀವಿ. ಆದರೆ ಸದ್ಯ ಪೆಟ್ರೋಲ್ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.

ಕಳೆದ ಏಪ್ರಿಲ್ ತಿಂಗಳಿನಿಂದ‌ ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ‌ ಲಾಕ್‌ಡೌನ್ ಮತ್ತು ಅನ್ ಲಾಕ್ ಡೌನ್ ಅನ್ನ ಸರ್ಕಾರ ಹೇರಿದೆ. ಈ ಸಂದರ್ಭದಲ್ಲಿ ಬಹುತೇಕ ಜನ ಖಾಸಗಿ ಪ್ರಯಾಣ ಹಾಗೂ ಬಹುತೇಕರು ತಮ್ಮ ಕೆಲಸಕ್ಕಾಗಿ ಖಾಸಗಿ ವಾಹನ ಅವಲಂಬಿಸಿ ಬಸ್ ಓಡಾಟ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ಮಾಡಿರುವುದು ಜನರ ಮೇಲೆ ಭಾರ ಹೇರಿದ ಹಾಗೆ ಆಗಿದೆ ಎಂದರು.

ಬೀದಿ ವ್ಯಾಪಾರಿಗಳ ಸಂಘಟನೆ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪೆಟ್ರೋಲ್ ದರ ಲೀ 83 ರೂಪಾಯಿ, ಡಿಸೆಲ್ ಬೆಲೆ ಕೂಡ 70 ರೂಪಾಯಿ ಆಗಿದೆ. ಇದು ಬೀದಿ ಬದಿ ವ್ಯಾಪಾರ ‌ಮಾಡುವವರ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ತರಕಾರಿ ಹಾಕುವ ಲಾರಿ ಮಾಲೀಕರು ಪೆಟ್ರೋಲ್ ಏರಿಕೆಯಾಗ್ತಾ ಇದ್ದ ಹಾಗೆ ನಮ್ಮಿಂದ ಹಣ ಜಾಸ್ತಿ ತಗೊಳ್ತಾ ಇದ್ದಾರೆ. ಬೀದಿ ಬದಿ ವ್ಯಾಪಾರ ಮೊದಲೇ ಕಡಿಮೆಯಾಗ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಸೂಕ್ತ ಕ್ರಮ‌ಕೈಗೊಳ್ಳಬೇಕೆಂದು ಮನವಿ‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.