ETV Bharat / state

ನೆರೆ ಸಮಸ್ಯೆಗೆ ತಾತ್ಕಾಲಿಕ ಬೇಡ, ಶಾಶ್ವತ ಪರಿಹಾರ ಕಲ್ಪಿಸಿ : ಎಸ್ ಆರ್ ಪಾಟೀಲ್ - ನೆರೆ ಸಮಸ್ಯೆ

ಈ ಬಾರಿ ನೆರೆಯಿಂದ 9,400 ಕೋಟಿ ರೂ. ಹಾನಿಯಾಗಿದೆ ಎಂದಿದ್ದೀರಿ. ಇನ್ನೂ ಹಣ ಬಿಡುಗಡೆಯಾಗಿಲ್ಲ. 25 ಸಂಸದರನ್ನು ಆಯ್ಕೆ‌ ಮಾಡಿದ್ದಾರೆ. ಇವರು ರಾಜ್ಯದ ಸಮಸ್ಯೆಗಳನ್ನು ಏಕೆ ಪ್ರಸ್ತಾಪಿಸುತ್ತಿಲ್ಲ. ನೆರೆ ಪೀಡಿತ ಪ್ರದೇಶದ ರೈತರ ಸಾಲ‌ಮನ್ನಾ ಮಾಡುತ್ತೇವೆ ಎಂದು ಈಗ ಟ್ರ್ಯಾಕ್ಟರ್ ಜಪ್ತಿ ಮಾಡುತ್ತಿದ್ದೀರಿ. ಇದಕ್ಕೆ ಸರ್ಕಾರದ ಉತ್ತರ ಏನು?.

Provide a permanent solution to the problem of Floods: SR Patil
ನೆರೆ ಸಮಸ್ಯೆಗೆ ತಾತ್ಕಾಲಿಕವಲ್ಲ, ಶಾಶ್ವತ ಪರಿಹಾರ ಕಲ್ಪಿಸಿ: ಎಸ್.ಆರ್.ಪಾಟೀಲ್
author img

By

Published : Sep 21, 2020, 8:54 PM IST

ಬೆಂಗಳೂರು : ಮಳೆಯಿಂದಾಗಿ ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಹಾನಿಯುಂಟಾಗಿದೆ. ನೆರೆ ಸಮಸ್ಯೆಗೆ ತಾತ್ಕಾಲಿಕವಲ್ಲ, ಶಾಶ್ವತ ಪರಿಹಾರ ಕಲ್ಪಿಸಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದಾರೆ.

ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನೆರೆಯಿಂದಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಒಂದು ಮಳೆಗಾಲದ ಅವಧಿಯಲ್ಲಿ ಎರಡು ಮೂರು ಬಾರಿ ನೆರೆ ಸಮಸ್ಯೆ ಕಾಡಿದೆ. ಕಳೆದ ಬಾರಿ ನೆರೆ ಬಂದಾಗಲೇ ಸಮಸ್ಯೆಯ ಗಮನ ಸೆಳೆದಿದ್ದೆವು. ಆದರೂ ಸರ್ಕಾರ ಎಚ್ಚೆತ್ತಿಲ್ಲ. 24 ಜಿಲ್ಲೆ ನೆರೆ ಸಮಸ್ಯೆಗೆ ತುತ್ತಾಗಿದೆ. ರಾಜ್ಯದ ಬಹುತೇಕ ಜಿಲ್ಲೆ ಸಮಸ್ಯೆಗೆ ಒಳಗಾಗಿವೆ.

134 ತಾಲೂಕುಗಳು ಸಮಸ್ಯೆಗೆ ತುತ್ತಾಗಿದ್ದು, 913 ಹಳ್ಳಿಗಳು ಮುಳುಗಿವೆ. 500 ಪ್ರಾಣಿಗಳು, 105 ಮಂದಿ ಜನರ ಪ್ರಾಣ ಹೋಗಿದೆ. 20,439 ಕಿ.ಮೀ ರಸ್ತೆ ಹಾಳಾಗಿದೆ. ಒಟ್ಟಾರೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಹಾನಿ ಎಲ್ಲಾ ವಿಭಾಗದಲ್ಲೂ ಆಗಿದೆ. ಮಳೆ ಇದೇ ರೀತಿ ಇನ್ನೂ ಮೂರು ದಿನ ಸುರಿಯುವ ಮಾಹಿತಿಯಿದೆ. ಇನ್ನೂ ಎರಡು, ಮೂರರಷ್ಟು ನಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.

ಮಳೆ ಹಾನಿಗೆ ಪರಿಣಾಮಕಾರಿ ಕ್ರಮವಾಗಬೇಕು. ಇದು ಕಷ್ಟಸಾಧ್ಯ ಎನ್ನುವುದು ಗೊತ್ತು. ಆದರೆ, ಸರ್ಕಾರ ಸ್ವಲ್ಪ ಶ್ರಮವಹಿಸಬೇಕು. ಈ ಬಾರಿ ಹಾನಿ ಹೆಚ್ಚಾಗಿದೆ. 9,400 ಕೋಟಿ ರೂ. ಹಾನಿಯಾಗಿದೆ ಎಂದಿದ್ದೀರಿ. ಇನ್ನೂ ಹಣ ಬಿಡುಗಡೆಯಾಗಿಲ್ಲ. 25 ಸಂಸದರನ್ನು ಆಯ್ಕೆ‌ ಮಾಡಿದ್ದಾರೆ. ಇವರು ರಾಜ್ಯದ ಸಮಸ್ಯೆಗಳನ್ನು ಏಕೆ ಪ್ರಸ್ತಾಪಿಸುತ್ತಿಲ್ಲ. ನೆರೆ ಪೀಡಿತ ಪ್ರದೇಶದ ರೈತರ ಸಾಲ‌ಮನ್ನಾ ಮಾಡುತ್ತೇವೆ ಎಂದು ಈಗ ಟ್ರ್ಯಾಕ್ಟರ್ ಜಪ್ತಿ ಮಾಡುತ್ತಿದ್ದೀರಿ. ಇದಕ್ಕೆ ಸರ್ಕಾರದ ಉತ್ತರ ಏನು ಎಂದರು.

ಸಚಿವ ಆರ್. ಅಶೋಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜೊತೆ ನಾವು ಆನ್ಲೈನ್ ಮೂಲಕ ಸಮಾಲೋಚಿಸಿದ್ದೇವೆ. ಸಾಕಷ್ಟು ಮಾಹಿತಿ ಪಡೆದಿದ್ದಾರೆ. ಕೋವಿಡ್ ಸಮಸ್ಯೆ ಇದ್ದ ಹಿನ್ನೆಲೆ ಅವರು ಬಂದಿಲ್ಲ. ಅನ್ಯತಾ ಮಾತು ಬೇಡ. ಕೇಂದ್ರದಿಂದ ತಂಡ ಕಳಿಸಿದ್ದರು. ಮಾತನಾಡಿದ್ದೇವೆ. ಕೇಂದ್ರದ ಸಹಕಾರ ಸಿಗಲಿದೆ ಎಂದರು.

ಪ್ರತಿಪಕ್ಷ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹಾಗೂ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿಪಕ್ಷ ಒತ್ತಡ ಇದ್ದು, ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮುಂದೆ ನಿಲ್ಲುವ ಧೈರ್ಯ ಬರಲಿದೆ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕರು, ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಸ್ವರ್ಗವೇ ಧರೆಗಿಳಿಸಬಹುದಿತ್ತು ಎಂದರು. ಮಾತು ಮುಂದವರೆಸಿದ ಹೊರಟ್ಟಿ, ಅಲ್ಲಿ ಬಿಜೆಪಿ ಸದಸ್ಯರು ಮಾತ್ರ ಇಲ್ಲ. ನಮ್ಮವರು, ನಿಮ್ಮವರು ಎಲ್ಲಾ ಇದ್ದಾರೆ ಎಂದರು.

ನೆರೆ ವಿವಾಚರವಾಗಿ ಮಾತನಾಡಿದ ಹೊರಟ್ಟಿ, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಕೊಡುತ್ತೇವೆ ಎಂದಿದ್ದೀರಿ. ಯಾರಿಗೂ ತಲುಪಿಲ್ಲ. ಬೆಳೆ ಹಾಳಾಗಿದೆ. ದೊಡ್ಡ ರೈತರಿಗೆ ಸಮಸ್ಯೆ ಆಗಲ್ಲ. ಆದರೆ, ಸಣ್ಣ ರೈತರಿಗೆ ಸಮಸ್ಯೆ ಆಗಲಿದೆ. ಎತ್ತರ ಪ್ರದೇಶದಲ್ಲಿ ಮನೆ ನಿರ್ಮಿಸಿ, ಜನರಿಗೆ ನೀಡಬೇಕು. ಜನರ ಅಗತ್ಯ ಆಧರಿಸಿ ಅವರಿಗೆ ಬೇಕಿರುವ ಮಾದರಿಯ ಮನೆ ಕಟ್ಟಿಸಿಕೊಡಿ. ರೈತರಿಗೆ ತಕ್ಷಣಕ್ಕೆ ಅಗತ್ಯವಿರುವ ಪರಿಹಾರ ನೀಡಿ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಎಸ್ ಆರ್ ಪಾಟೀಲ್, ನೆರೆಯಿಂದಾಗಿ 45 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ನಷ್ಟ ಇನ್ನಷ್ಟು ಹೆಚ್ಚಲಿದೆ. ಈ ಬಗ್ಗೆ ಗಮನ ಹರಿಸಿ. ತಾತ್ಕಾಲಿಕ ಪರಿಹಾರ ಬೇಡ, ಶಾಶ್ವತ ಪರಿಹಾರ ಕಲ್ಪಿಸಿ. ನೆರೆ ಪೀಡಿತ ಪ್ರದೇಶವನ್ನು ಶಾಶ್ವತವಾಗಿ ಮೇಲಕ್ಕೇರಿಸಿ. ಎಲ್ಲಾ ಹಳ್ಳಿಗಳನ್ನು ಎತ್ತರದ ಸ್ಥಳಕ್ಕೆ ವರ್ಗಾಯಿಸಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.