ಬೆಂಗಳೂರು: ರಾಜ್ಯದ ಮೂಲೆ ಮೂಲೆಯಿಂದ ನಾಲ್ಕೈದು ಸಾವಿರ ಅಕ್ಷರ ದಾಸೋಹ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಫ್ರೀಡಂ ಪಾರ್ಕ್ಗೆ ಹೋಗದಂತೆ ಪೊಲೀಸರು ತಡೆದ ಕಾರಣ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಕುಳಿತು ಧರಣಿ ಮುಂದುವರಿಸಿದ್ದಾರೆ. ಸುಡುವ ಮಧ್ಯಾಹ್ನದ ಬಿಸಿಲಿನಲ್ಲಿ ಮಹಿಳೆಯರು ಕುಳಿತಿದ್ರೂ, ಸಂಬಂಧಪಟ್ಟ ಸಚಿವರಾಗಲಿ, ಅಧಿಕಾರಿಗಳಾಗಲಿ ಇತ್ತ ಬಂದಿಲ್ಲ. ಮುಂಜಾನೆ ಏಳುಗಂಟೆಯಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಸ್ಥಳಕ್ಕೆ ಯಾರೊಬ್ಬರೂ ಬಂದಿಲ್ಲ.
ಬಿಸಿಲು ತಡೆಯಲಾಗದೇ ಮಹಿಳೆಯರು ಅಲ್ಲಲ್ಲೇ ರಸ್ತೆ ಮೇಲೆಯೇ ಮಲಗಿದ್ದಾರೆ. ಇನ್ನು ಕೆಲವರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದ್ರೂ, ಸಚಿವ ಸುರೇಶ್ ಕುಮಾರ್ ಯಾರೊಬ್ಬರ ಕರೆಯನ್ನೂ ಸ್ವೀಕರಿಸುತ್ತಿಲ್ಲ.
ಅನುಮತಿ ನಿರಾಕರಣೆ ನಡುವೆಯೂ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆಗೆ ಸಿದ್ಧತೆ
ವಿಧಾನಸೌಧದಲ್ಲಿ ಇಂದು ನಡೆಯಬೇಕಿದ್ದ ಬಜೆಟ್ ಪೂರ್ವ ಸಭೆ ಕೂಡ ಸಚಿವರು ರದ್ದು ಮಾಡಿದ್ದಾರೆ. ಕನ್ನಡಿಗರಿಗೆ ಮೀಸಲಾತಿ ಸಂಬಂಧಿಸಿದಂತೆ, ಇಂದು ಕಾರ್ಮಿಕ ಇಲಾಖೆ ರೂಪಿಸಿರುವ ಕರಡು ಸಮಾಲೋಚನೆ ಸಭೆ ನಡೆಯಬೇಕಿತ್ತು. ಈ ಸಭೆ ರದ್ದು ಮಾಡಿದ್ರೂ, ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಈವರೆಗೂ ಸ್ಥಳಕ್ಕೆ ಬಂದಿಲ್ಲ.ಕನಿಷ್ಠ ಕೂಲಿ 2,700 ರೂಪಾಯಿಯಲ್ಲಿ ಜೀವನ ಸಾಗಿಸಲು ಕಷ್ಟವಾಗ್ತಿದೆ, ಕನಿಷ್ಠ ವೇತನ ಜಾರಿ ಮಾಡಿ ಎಂದು ಸಾವಿರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿದ್ದಾರೆ.