ETV Bharat / state

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರದ ವಿರುದ್ಧ ವಕೀಲರ ಪ್ರತಿಭಟನೆ

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಮೋಟಾರು ವಾಹನ ಕಾಯ್ದೆ 1988 ಅನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘದಿಂದ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಕೀಲರ ಪ್ರತಿಭಟನೆ
author img

By

Published : Sep 19, 2019, 11:46 PM IST

ಬೆಂಗಳೂರು: ಮೋಟಾರು ವಾಹನ ಕಾಯ್ದೆ 1988 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಬೆಂಗಳೂರು ವಕೀಲರ ಸಂಘದಿಂದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಲಾಯಿತು.

ವಾಹನ ಸವಾರರಿಗೆ ಅಪಘಾತಗಳಾದ ಸಂದರ್ಭದಲ್ಲಿ, ವಿಮಾ ಕಂಪನಿಗಳಿಗೆ ಅನುಕೂಲವಾಗುವಂತೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಕೀಲರ ಪ್ರತಿಭಟನೆ

ಅಪಘಾತವಾದರೆ ತಕ್ಷಣ ಪರಿಹಾರ ಸಿಗುವುದಿಲ್ಲ. ಅಲ್ಲದೆ ಅಪಘಾತಕ್ಕೆ ಚಾಲಕನೇ ಹೊಣೆಗಾರನಾದರೆ ಆತನ ಸ್ವಯಂ ನಿರ್ಲಕ್ಷ್ಯದ ಕಾರಣಕ್ಕೆ ವಿಮಾ ಕಂಪನಿಯಿಂದ ಪರಿಹಾರ ದೊರಕುವುದಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ತಂದ ಕಾಯ್ದೆ ತಿದ್ದುಪಡಿಯು ಜನರ ಹಿತದೃಷ್ಟಿಯಿಂದ ಮಾಡಿರುವುದಲ್ಲ. ವಿಮಾ ಕಂಪನಿಗಳ ಹಿತದೃಷ್ಟಿಯಿಂದ ಮಾಡಲಾಗಿದೆ. ಕಾಯ್ದೆ ತಿದ್ದುಪಡಿಗೆ ವಕೀಲರ ಸಂಘಟನೆಗಳಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ. ಏಕಾಏಕಿ ಜನರಿಗೆ ಮಾರಕವಾಗುವಂತಹ ತಿದ್ದುಪಡಿ ತಂದಿದೆ ಎಂದರು.

ಜನಸಮಾನ್ಯರ ವಿರೋಧಿ ಕಾಯ್ದೆಯಾಗಿದ್ದು, ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಎಲ್ಲಾ ಆಟೋ, ಲಾರಿ ಚಾಲಕರು ಹಾಗೂ ವಕೀಲರು ಉಗ್ರ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ರಂಗನಾಥ್ ಎಚ್ಚರಿಕೆ ನೀಡಿದರು.

Intro:ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರದ ವಿರುದ್ಧ ವಕೀಲರ ಪ್ರತಿಭಟನೆ

ಬೆಂಗಳೂರು- ಮೋಟಾರು ವಾಹನ ಕಾಯ್ದೆ 1988 ಕ್ಕೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಬೆಂಗಳೂರು ವಕೀಲರ ಸಂಘ ಮೈಸೂರು ಬ್ಯಾಂಕ್ ಸರ್ಕಲ್ ನ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ವಾಹನ ಸವಾರರಿಗೆ ಅಪಘಾತಗಳಾದ ಸಂಧರ್ಭದಲ್ಲಿ, ವಿಮಾ ಕಂಪೆನಿಗಳಿಗೆ ಅನುಕೂಲವಾಗುವಂತೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಅಪಘಾತವಾದರೆ ತಕ್ಷಣ ಪರಿಹಾರ ಸಿಗುವುದಿಲ್ಲ. ಅಲ್ಲದೆ ಅಪಘಾತಕ್ಕೆ ಚಾಲಕನೇ ಹೊಣೆಗಾರನಾದರೆ ಆತನ ಸ್ವಯಂ ನಿರ್ಲಕ್ಷ್ಯದ ಕಾರಣಕ್ಕೆ ಪರಿಹಾರ ದೊರಕುವುದಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಕಾಯ್ದೆ ತಿದ್ದುಪಡಿ, ಜನರ ಹಿತದೃಷ್ಟಿಯಿಂದ ಮಾಡಿಲ್ಲ, ಕೇವಲ ಇನ್ಶೂರೆನ್ಸ್ ಕಂಪೆನಿಗಳ ಹಿತದೃಷ್ಟಿಯಿಂದ ಮಾಡಲಾಗಿದೆ. ಯಾವುದೇ ತಿದ್ದುಪಡಿಯನ್ನು ವಕೀಲರ ಸಂಘಟನೆಗಳಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸರ್ಕಾರ ಇವೆಲ್ಲವನ್ನೂ ಮರೆತಿದೆ. ಏಕಾಏಕಿ ಜನರಿಗೆ ಮಾರಕವಾಗುವಂತಹ ತಿದ್ದುಪಡಿ ತಂದಿದೆ ಎಂದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಂಗನಾಥ್, ಜನಸಮಾನ್ಯರ ವಿರೋಧಿ ಕಾಯ್ದೆಯಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಎಲ್ಲಾ ಆಟೋ, ಲಾರಿ ಚಾಲಕರು ಹಾಗೂ ವಕೀಲರು ಪ್ರತಿಭಟನೆ ನಡೆಸಲಿದ್ದೇವೆ. ಹೀಗಾಗಿ ಈ ತಿದ್ದುಪಡಿಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸೌಮ್ಯಶ್ರೀ
Kn_bng_01_advocate_protest_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.