ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷ ಆಗಿರುವುದು ಒಂದು ನೆಪ ಅಷ್ಟೇ. ಸಿದ್ದರಾಮೋತ್ಸವ ಅಂತಾ ನಾವು ಯಾರು ಹೆಸರು ಕೊಟ್ಟಿಲ್ಲ. ಆ ಹೆಸರಿನಿಂದ ಕಾರ್ಯಕ್ರಮ ಮಾಡುತ್ತಿಲ್ಲ. ಈ ಕಾರ್ಯಕ್ರಮ ಯಾವುದೇ ವ್ಯಕ್ತಿಯನ್ನು ವೈಭವೀಕರಿಸಲು ಅಲ್ಲ, ಆ ವ್ಯಕ್ತಿ ಹಿಂದೆ ಇರುವ ವಿಚಾರಗಳನ್ನು ಬಿಂಬಿಸಲು ಮಾತ್ರ ಕಾರ್ಯಕ್ರಮ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮ ಮುಂದಿನ ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಕಾರ್ಯಕ್ರಮ ಆಗಲಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಬಿ. ಎಲ್. ಶಂಕರ್ ಹೇಳಿದ್ದಾರೆ.
ಮಾಜಿ ಸಚಿವ, ಹಿರಿಯ ಮುಖಂಡ ಪಿ.ಜಿ. ಆರ್. ಸಿಂಧ್ಯಾ ಮಾತನಾಡಿ, ಸಿದ್ದರಾಮಯ್ಯ ಈ ರಾಷ್ಟ್ರದ ಓರ್ವ ವಿಶೇಷ ವ್ಯಕ್ತಿ. ನಿಜಲಿಂಗಪ್ಪ, ದೇವರಾಜ್ ಅರಸು ಈ ನಾಡಿನಿಂದ ರಾಷ್ಟ್ರಕ್ಕೆ ಪರಿಚಯ ಆಗಿದ್ರು. ಈ ನಾಯಕರ ಒಡನಾಟ ಕೂಡ ಸಿದ್ದರಾಮಯ್ಯರಿಗೆ ಇತ್ತು. ಜೆ ಪಿ ಚಳವಳಿ ಮೂಲಕ ಸಿದ್ದರಾಮಯ್ಯ ಹೋರಾಟ ಆರಂಭಿಸಿದ್ದರು. ಹಲವು ಏಳುಬೀಳುಗಳನ್ನು ಸಿದ್ದರಾಮಯ್ಯ ನೋಡಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವೆ, ಹಿರಿಯ ನಟಿ ಜಯಮಾಲ ಮಾತನಾಡಿ, ರಾಜ್ಯದ ಉದ್ದಗಲಕ್ಕೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ. ಅವರ ಜನ್ಮದಿನದಂದು ಅಮೃತ ಮಹೋತ್ಸವ ಆಚರಿಸುತ್ತಿರುವುದೇ ಪುಣ್ಯ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಈಗ ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವುದು ನಮಗೆಲ್ಲರಿಗೂ ಸಂಭ್ರಮ ತಂದಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ 75ನೇ ಜನ್ಮ ದಿನ: ಆ.3ರಂದು ದಾವಣಗೆರೆಯಲ್ಲಿ ಅದ್ದೂರಿ ಅಮೃತ ಮಹೋತ್ಸವ