ಬೆಂಗಳೂರು : ಪ್ರೊ. ದೇವನಾಥನ್ ಅವರನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಪ್ರೊಫೆಸರ್ ದೇವನಾಥನ್ ಅವರು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶಿಷ್ಟಾದ್ವೈತ ವೇದಾಂತದ ಪ್ರೊಫೆಸರ್ ಹಾಗೂ ತಿರುಪತಿಯ ವೇದ ವಿಶ್ವವಿದ್ಯಾಲಯದ ಪೂರ್ವ ಕುಲಪತಿಗಳಾಗಿದ್ದರು.
ಪ್ರೊ.ವಿ.ಗಿರೀಶ್ ಚಂದ್ರ ಕರ್ನಾಟಕ ಸಂಸ್ಕೃತ ವಿವಿಯ ಪ್ರಬಾರಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಶೋಧನಾ ಸಮಿತಿ ಶಿಫಾರಸು ಮೇರೆಗೆ ರಾಜ್ಯಪಾಲರು ಪ್ರೊ. ದೇವನಾಥನ್ರನ್ನು ಮುಂದಿನ ನಾಲ್ಕು ವರ್ಷಗಳಿಗೆ ವಿವಿಯ ಕುಲಪತಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.