ಬೆಂಗಳೂರು: ಸಾಮಾಜಿಕ ಜಾಲತಾಣ ಕ್ಲಬ್ಹೌಸ್ ಗ್ರೂಪ್ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾಕಿ ಭಾರತಕ್ಕೆ ಅಗೌರವ ತೋರಿಸಿದ್ದ ಗಂಭೀರ ಆರೋಪದಡಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 14 ರಂದು ಘಟನೆ ನಡೆದಿದೆ. ಪ್ರತಿಯೊಬ್ಬರೂ ಪಾಕಿಸ್ತಾನದ ಬಾವುಟವನ್ನು ಡಿಪಿಗೆ ಹಾಕುವಂತೆಯೂ ಕಿಡಿಗೇಡಿಗಳು ಪ್ರಚೋದಿಸಿದ್ದರು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, "ಪಾಕಿಸ್ತಾನ ಪರ ರಾಷ್ಟ್ರಧ್ವಜ ಡಿಪಿಯಲ್ಲಿ ಹಾಕಿರುವ ವಿಚಾರ ಗಮನಕ್ಕೆ ಬಂದಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಕ್ಲಬ್ ಹೌಸ್ ಸದಸ್ಯರು ತಮ್ಮ ಹೆಸರಿನ ಬದಲಾಗಿ ಅಡ್ಡ ಹೆಸರು ಬಳಸಿ ಕೃತ್ಯ ಎಸಗಿದ್ದಾರೆ. ಅದರ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸರ್ವಿಸ್ ಪ್ರವೈಡರ್‌ಗೆ ಅವರ ಮಾಹಿತಿ ಕೇಳಲಾಗಿದೆ. ನಮಗೆ ಕೆಲವು ಮಾಹಿತಿ ಸಿಕ್ಕಿದ್ದು ಪರಿಶೀಲನೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ :ಪ್ರಚೋದನಕಾರಿ ಬಟ್ಟೆ ಧರಿಸಿದ್ದರಿಂದ ಇದು ಲೈಂಗಿಕ ಕಿರುಕುಳ ಆಗುವುದಿಲ್ಲ.. ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ