ETV Bharat / state

Pro Kabaddi: ಗುಜರಾತ್ ಜೈಂಟ್ಸ್‌ ಹಾಗೂ ತಮಿಳು ತಲೈವಾಸ್ ರೋಚಕ ಕಾದಾಟ... ಕೊನೆಗೆ ಟೈ

Pro Kabaddi : ಗುಜರಾತ್‌ ಜೈಂಟ್ಸ್‌ ಮತ್ತು ತಮಿಳು ತಲೈವಾಸ್‌ ತಂಡಗಳ ರೋಚಕ ಕಾದಾಟ. ಪ್ರೋ ಕಬಡ್ಡಿ ಲೀಗ್‌ನ 2ನೇ ದಿನದ 2ನೇ ಪಂದ್ಯವೂ ಸಮಬಲದಲ್ಲಿ ಅಂತ್ಯಗೊಂಡಿದೆ.

Pro Kabaddi League
ಗುಜರಾತ್‌ ಜಯಂಟ್ಸ್‌ ಮತ್ತು ತಮಿಳು ತಲೈವಾಸ್‌ ತಂಡಗಳ ರೋಚಕ ಕಾದಾಟ
author img

By

Published : Oct 9, 2022, 8:00 AM IST

ಬೆಂಗಳೂರು: ಗುಜರಾತ್‌ ಜೈಂಟ್ಸ್‌ ಮತ್ತು ತಮಿಳು ತಲೈವಾಸ್‌ ತಂಡಗಳ ನಡುವಿನ ಪಂದ್ಯ 31-31ರಲ್ಲಿ ಸಮಬಲಗೊಳ್ಳುವುದರೊಂದಿಗೆ ಪ್ರೋ ಕಬಡ್ಡಿ ಲೀಗ್‌ನ (Pro Kabaddi) 2ನೇ ದಿನದ 2ನೇ ಪಂದ್ಯವೂ ಟೈನಲ್ಲಿ ಅಂತ್ಯವಾಗಿದೆ.

ದಿನದ ಮೊದಲ ಪಂದ್ಯದಲ್ಲೂ ಪಾಟ್ನಾ ಪೈರೇಟ್ಸ್‌ ಹಾಗೂ ಪುಣೇರಿ ಪಲ್ಟನ್‌ ತಂಡಗಳು ಸಮಬಲ ಸಾಧಿಸಿದ್ದವು. ಎರಡನೇ ಪಂದ್ಯದಲ್ಲಿ ತಮಿಳು ತಲೈವಾಸ್‌ ತಂಡ ನಾಯಕ ಪವನ್‌ ಶೆರಾವತ್‌ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ತೋರಿತು.

ಗುಜರಾತ್‌ ಜೈಂಟ್ಸ್‌ ಪರ ರಾಕೇಶ್‌ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ತಂಡದ ಯಶಸ್ಸಿಗೆ ನೆರವಾದರು. ನಾಯಕ ಚಂದ್ರನ್‌ ರಂಜಿತ್‌ ಜವಾಬ್ದಾರಿಯುತ ಆಟ ಗುಜರಾತ್‌ ಜೈಂಟ್ಸ್‌ ತಂಡವನ್ನು ಸೋಲಿನಿಂದ ಪಾರು ಮಾಡಿತು. ತಮಿಳು ತಲೈವಾಸ್‌ನ ನರೇಂದರ್‌ 10 ಅಂಕಗಳನ್ನು ಗಳಿಸಿ ಸಮಬಲದ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು.

Pro Kabaddi League
ಗುಜರಾತ್‌ ಜಯಂಟ್ಸ್‌ ಮತ್ತು ತಮಿಳು ತಲೈವಾಸ್‌ ತಂಡಗಳ ರೋಚಕ ಕಾದಾಟ

ಮುನ್ನಡೆ ಕಂಡುಕೊಂಡಿದ್ದ ತಲೈವಾಸ್‌: ತಲೈವಾಸ್‌ ತಂಡ ಒಂದು ಹಂತದಲ್ಲಿ ಮುನ್ನಡೆ ಕಂಡುಕೊಂಡಿತ್ತು. ಆದರೆ ಎದುರಾಳಿಯ ರೈಡಿಂಗ್‌ನಲ್ಲಿ ನಿರಂತರ ಅಂಕಗಳನ್ನು ನೀಡಿ ಜಯದ ಅವಕಾಶವನ್ನು ಕಳೆದುಕೊಂಡಿತು. ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಆಡುತ್ತಿರುವ ನರೇಂದರ್‌ ರೈಡಿಂಗ್‌ನಲ್ಲಿ ಸೂಪರ್‌ 10 ಸಾಧನೆ ಮಾಡಿ ತಂಡಕ್ಕೆ ನೆರವಾದರು. ಗುಜರಾತ್‌ ಜೈಂಟ್ಸ್‌ ತಂಡದ ರಾಕೇಶ್‌ ಕೂಡ ಸೂಪರ್‌ 10 ಸಾಧನೆ ಮಾಡಿದರು.

ದ್ವಿತಿಯಾರ್ಧದ ಆರಂಭದಲ್ಲೇ ಆಲೌಟ್‌: ಶೆರಾವತ್‌ ಉತ್ತಮ ಆಟಗಾರ. ಆದರೆ ಕಬಡ್ಡಿ ಸಂಘಟಿತ ಆಟವಾಗಿದ್ದು, ನಾಯಕನ ಅನುಪಸ್ಥಿತಿಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದ ತಲೈವಾಸ್‌ ಸಂಘಟಿತ ಹೋರಾಟ ನೀಡಿ ದ್ವಿತಿಯಾರ್ಧದ ಆರಂಭದಲ್ಲೇ ಗುಜರಾತ್‌ ಜೈಂಟ್ಸ್‌ ತಂಡವನ್ನು ಆಲೌಟ್‌ ಮಾಡಿ ಮುನ್ನಡೆ ಕಂಡಿತು.

ಶೆರಾವತ್‌ ಔಟ್‌, ತಲೈವಾಸ್‌ಗೆ ಆರಂಭಿಕ ಹಿನ್ನೆಡೆ: ಪ್ರಸಕ್ತ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರೆನಿಸಿರುವ ತಮಿಳು ತಲೈವಾಸ್‌ ತಂಡದ ನಾಯಕ ಪವನ್‌ ಶೆರಾವತ್‌ ಗಾಯಗೊಂಡು ಅಂಕಣದಿಂದ ಹೊರನಡೆದ ಕಾರಣ ಗುಜರಾತ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್‌ 16-18 ಅಂತರದಲ್ಲಿ ಹಿನ್ನೆಡೆ ಕಂಡಿತು. ನಾಯಕನ ಅನುಪಸ್ಥಿತಿಯಲ್ಲೂ ತಮಿಳು ತಂಡ ಉತ್ತಮ ಹೋರಾಟ ನೀಡಿತು.

ಮೊದಲ ಪಂದ್ಯದಿಂದ ವಂಚಿತರಾದ ಶೆರಾವತ್‌: ಕಾಲು ತಿರುಚಲ್ಪಟ್ಟ ಕಾರಣ ಪವನ್‌ ಶೆರಾವತ್‌ ತಂಡದ ಮೊದಲ ಪಂದ್ಯದಿಂದ ವಂಚಿತರಾದರು. ಶೆರಾವತ್‌ ಅನುಪಸ್ಥಿತಿಯಲ್ಲಿ ಗುಜರಾತ್‌ ನಾಯಕ ಚಂದ್ರನ್‌ ರಂಜಿತ್‌ (5) ಹಾಗೂ ರಾಕೇಶ್‌ (8) ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಿ ತಂಡದ ಮುನ್ನೆಡೆೆಗೆ ನೆರವಾದರು.

ನಾಯಕನ ಅನುಪಸ್ಥಿತಿಯಲ್ಲೂ ಫೈಟ್: ನಾಯಕನ ಅನುಪಸ್ಥಿತಿಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದ ತಮಿಳು ತಲೈವಾಸ್‌, ನರೇಂದರ್‌ ರೈಡಿಂಗ್‌ನಲ್ಲಿ 6 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಸಾಹಿಲ್‌ ಗುಲಿಯಾ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್‌: ಯುಪಿ ಯೋಧಾಸ್‌ ತಂಡಕ್ಕೆ ತಲೆಬಾಗಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.