ETV Bharat / state

ಪ್ರೊ ಕಬಡ್ಡಿ ಲೀಗ್: ದಬಾಂಗ್‌ ಡೆಲ್ಲಿ, ಯು ಮುಂಬಾಕ್ಕೆ ಜಯದ ಮುನ್ನಡೆ - 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಸೋಮವಾರ ಯು ಮುಂಬಾ ತಂಡ 30-23 ಅಂಕಗಳಿಂದ ಯುಪಿ ಯೋಧಾಸ್‌ ಪಡೆಯನ್ನು ಬಗ್ಗುಬಡಿಯಿತು.

Pro Kabaddi League
ದಬಾಂಗ್‌ ಡೆಲ್ಲಿ, ಯು ಮುಂಬಾಕ್ಕೆ ಜಯದ ಮುನ್ನಡೆ
author img

By

Published : Oct 11, 2022, 7:06 AM IST

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 4ನೇ ದಿನದ ಆಟದಲ್ಲಿ ನಾಯಕ ನವೀನ್‌ ಕುಮಾರ್‌ ಅದ್ಭುತ ರೈಡಿಂಗ್‌ ಸಾಧನೆಯ ಮೂಲಕ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆಸಿ ತಂಡ ಗುಜರಾತ್​ ಜೈಂಟ್ಸ್​ ವಿರುದ್ಧ 53-33 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಯುಪಿ ಯೋಧಾಸ್‌ ವಿರುದ್ಧ 30-23 ಅಂತರದಲ್ಲಿ ಜಯ ಗಳಿಸಿತು.

Pro Kabaddi League 2022
ಪ್ರೊ ಕಬಡ್ಡಿ ಲೀಗ್

ನಗರದ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಿನದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಎಕ್ಸ್‌ಪ್ರೆಸ್‌ 15 ರೈಡಿಂಗ್‌ ಅಂಕಗಳನ್ನು ಗಳಿಸಿ ಪ್ರೋ ಕಬಡ್ಡಿ ಲೀಗ್‌ ಇತಿಹಾಸಲ್ಲಿ 44ನೇ ಬಾರಿಗೆ ಸೂಪರ್‌ 10 ಸಾಧನೆ ಮಾಡಿದರು.

Pro Kabaddi League
ಪ್ರೊ ಕಬಡ್ಡಿ ಲೀಗ್

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್ 2022: ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ತಂಡದ ಪರ ಮಂಜಿತ್‌ ಕೂಡ 10 ರೈಡಿಂಗ್‌ ಅಂಕಗಳನ್ನು ಗಳಿಸಿ ಸೂಪರ್‌ 10 ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಟ್ಯಾಕಲ್‌ನಲ್ಲಿ ಕ್ರಿಷನ್‌ 7 ಅಂಕಗಳನ್ನು ಗಳಿಸಿ ಬೃಹತ್‌ ಜಯಕ್ಕೆ ನೆರವಾದರು. ಗುಜರಾತ್​ ಜೈಂಟ್ಸ್​ ಪರ ರಾಕೇಶ್‌ ಒಂಟಿಯಾಗಿ ಹೋರಾಟ ನಡೆಸಿದ ರೀತಿಯಲ್ಲಿ 15 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

Pro Kabaddi League
ಪ್ರೊ ಕಬಡ್ಡಿ ಲೀಗ್

ಪ್ರಥಮಾರ್ಧದಲ್ಲಿ ದಬಾಂಗ್‌ ಡೆಲ್ಲಿ ಮುನ್ನಡೆ: ನಾಯಕ ನವೀನ್‌ ಕುಮಾರ್‌ ಕೊನೆಯ ಕ್ಷಣದಲ್ಲಿ ಮಿಂಚಿನ ರೈಡಿಂಗ್‌ ಮಾಡುವ ಮೂಲಕ ದಬಾಂಗ್‌ ಡೆಲ್ಲಿ ತಂಡ ಗುಜರಾತ್​ ಜೈಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 21-17 ಅಂತರದಲ್ಲಿ ಮುನ್ನಡೆ ಕಂಡುಕೊಂಡಿದೆ.

Pro Kabaddi League
ಪ್ರೊ ಕಬಡ್ಡಿ ಲೀಗ್

ನವೀನ್‌ ಕುಮಾರ್‌ ಮೊದಲ ಪಂದ್ಯದಲ್ಲಿ ತೋರಿದ ಯಶಸ್ಸನ್ನು 2ನೇ ಪಂದ್ಯದಲ್ಲಿ ಕಾಣಲಿಲ್ಲ. ಮೊದಲ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದದ್ದೇ ಇದಕ್ಕೆ ಕಾರಣ. ಆರಂಭದ 8 ರೈಡ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 3 ಅಂಕಗಳು. ನಂತರ ನೈಜ ಪ್ರದರ್ಶನ ತೋರಿ 7 ಅಂಕಗಳನ್ನು ಸಂಪಾದಿಸಿದರು. ಜೊತೆಯಲ್ಲಿ ಗುಜರಾತ್‌ ತಂಡವನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಮಂಜೀತ್‌ 4 ಅಂಕಗಳ ಮೂಲಕ ತಂಡದ ಮುನ್ನಡೆಗೆ ನೆರವಾದರು.

Pro Kabaddi League
ಪ್ರೊ ಕಬಡ್ಡಿ ಲೀಗ್

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಗುಜರಾತ್‌ನ ತಂಡದ ಡಿಫೆನ್ಸ್‌ ವಿಭಾಗ ವಿಫಲ: ಟ್ಯಾಕಲ್‌ ವಿಭಾಗದಲ್ಲಿ ಕಿಶನ್‌ ಹಾಗೂ ವಿಶಾಲ್‌ ತಲಾ 3 ಅಂಕಗಳನ್ನು ಗಳಿಸಿದರು. ಗುಜರಾತ್​ ಜೈಂಟ್ಸ್ ಆರಂಭದಿಂದಲೂ ದಿಟ್ಟ ಹೋರಾಟ ನೀಡುತ್ತ ಸಮಬಲ ಸಾಧಿಸಿತ್ತು. ರಾಕೇಶ್‌ ಸೂಪರ್‌ 10 ಮೂಲಕ ತಂಡ ಉತ್ತಮ ಸವಾಲು ನೀಡುವಲ್ಲಿ ನೆರವಾದರು. ತಂಡದ ಡಿಫೆನ್ಸ್‌ ವಿಭಾಗ ನಿರೀಕ್ಷಿತ ಪ್ರಮಾಣದಲ್ಲಿ ಅಂಕ ಗಳಿಸದಿರುವುದು ಗುಜರಾತ್‌ನ ಮೊದಲಾರ್ಧದ ಹಿನ್ನಡೆಗೆ ಕಾರಣವಾಯಿತು.

Pro Kabaddi League
ಪ್ರೊ ಕಬಡ್ಡಿ ಲೀಗ್

ಯು ಮುಂಬಾಕ್ಕೆ ಜಯ: ಆಲ್​​ರೌಂಡ್‌ ಪ್ರದರ್ಶನ ತೋರಿದ ಯು ಮುಂಬಾ ತಂಡ ಯುಪಿ ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ 30-23 ಅಂತರದಲ್ಲಿ ಜಯದ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಡಬಾಂಗ್‌ ಡೆಲ್ಲಿ ವಿರುದ್ಧ ಸೋಲನುಭವಿಸಿತ್ತು. ಪ್ರಥಮಾರ್ಧದಲ್ಲಿ 14-9 ಅಂತರದಲ್ಲಿ ಮುನ್ನಡೆದ ಯು ಮುಂಬಾ ದ್ವಿತಿಯಾರ್ಧಲ್ಲೂ ಆ ಮುನ್ನಡೆಯನ್ನು ಕಾಯ್ದುಕೊಂಡಿತು. ಸುರೀಂದರ್‌ ಸಿಂಗ್‌ ನಾಯಕತ್ವದ ಯು ಮುಂಬಾ ತಂಡದ ಪರ ರೈಡರ್‌ ಜೈ ಭಗವಾನ್‌ 6 ಅಂಕಗಳನ್ನು ಗಳಿಸಿ ಯಶಸ್ವಿ ರೈಡರ್‌ ಎನಿಸಿದರು.

ಇದನ್ನೂ ಓದಿ: Pro Kabaddi: ಗುಜರಾತ್ ಜೈಂಟ್ಸ್‌ ಹಾಗೂ ತಮಿಳು ತಲೈವಾಸ್ ರೋಚಕ ಕಾದಾಟ... ಕೊನೆಗೆ ಟೈ

ಟ್ಯಾಕಲ್‌ನಲ್ಲಿ ಯು ಮುಂಬಾ 14 ಅಂಕಗ ಗಳಿಕೆ: ರಿಂಕು ಹಾಗೂ ಕಿರಣ್‌ ಮಗರ್‌ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಗುಮಾನ್‌ ಸಿಂಗ್‌ (5) ಅವರು ಕೂಡ ರೈಡಿಂಗ್‌ನಲ್ಲಿ ಮಿಂಚಿ ತಂಡದ ಜಯಕ್ಕೆ ನೆರವಾದರು. ಟ್ಯಾಕಲ್‌ನಲ್ಲಿ ಯು ಮುಂಬಾ 14 ಅಂಕಗಳನ್ನು ಗಳಿಸಿದ್ದು ಯುಪಿ ಯೋಧಾಸ್ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಪ್ರದೀಪ್‌ ನರ್ವಾಲ್​ಗೆ ಸಿಗದ ಯಶಸ್ಸು: ಯುಪಿ ಯೋಧಾ ತಂಡದ ಅನುಭವಿ ಆಟಗಾರ ಪ್ರದೀಪ್‌ ನರ್ವಾಲ್‌ ರೈಡಿಂಗ್‌ನಲ್ಲಿ ಯಶಸ್ಸು ಕಾಣಲಿಲ್ಲ. ಮಾಡಿದ 18 ರೈಡಿಂಗ್‌ನಲ್ಲಿ ಅವರು ಗಳಿಸಿದ್ದು ಕೇವಲ 5 ಅಂಕ. ಸಾಮಾನ್ಯವಾಗಿ ದ್ವಿತಿಯಾರ್ಧಲ್ಲಿ ತನ್ನ ನೈಜ ಆಟವನ್ನು ಪ್ರದರ್ಶಿಸುವ ನರ್ವಾಲ್‌ ಯು ಮುಂಬಾ ವಿರುದ್ಧ ಚೇತರಿಸಿಕೊಳ್ಳಲಿಲ್ಲ. ಅಶು ಸಿಂಗ್‌ ಹಾಗೂ ಸುಮಿತ್‌ ಟ್ಯಾಕಲ್‌ನಲ್ಲಿ ಒಟ್ಟು ಗಳಿಸಿದ 8 ಅಂಕಗಳು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಇದನ್ನೂ ಓದಿ: ಬದುಕು ಬದಲಿಸಿದ ಆರ್ಚರಿ; ಪ್ರೊ ಕಬಡ್ಡಿ ಟ್ರೈನರ್​ಆಗಿ ಯಶಸ್ಸಿನ ಹಾದಿಯಲ್ಲಿ ಕನ್ನಡಿಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.