ಬೆಂಗಳೂರು: ಸತೀಶ್ ಜಾರಕಿಹೊಳಿ ಸವಾಲನ್ನು ಬಿಜೆಪಿ ಸ್ವೀಕಾರ ಮಾಡಲಿ. ಬಿಜೆಪಿ ತಮ್ಮ ಹುಳುಕುಮುಚ್ಚಲು ಈ ವಿಷಯವನ್ನು ಮುಂದೆ ತಂದಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, "ಹಿಂದೂ ಪದ ನಮ್ಮ ದೇಶದ್ದಲ್ಲ. ಅದು ಹೊರಗಿನಿಂದ ಬಂದಿರುವುದು. ನಾನು ಬುಕ್ಸ್ ರೆಫರ್ ಮಾಡಿ ಹೇಳಿದ್ದೇನೆ. ಈ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಜಾರಕಿಹೊಳಿ ಹೇಳಿದ್ದಾರೆ. ಆದರೆ ಬಿಜೆಪಿಯವರು ಯಾಕೆ ಚರ್ಚೆಗೆ ಸಿದ್ಧರಿಲ್ಲ? ಎಂದು ಪ್ರಶ್ನಿಸಿದರು.
ಹಿಂದೂ ಪದ ಕುರಿತ ಜಾರಕಿಹೊಳಿ ಹೇಳಿಕೆ ಅವರ ವೈಯಕ್ತಿಕ. ಅವರು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಚರ್ಚೆ ಮಾಡಲಿ. ಬಿಜೆಪಿಗರಿಗೆ ಮನುಸ್ಮೃತಿ ಮೇಲೆ ನಂಬಿಕೆ ಇರುವುದು. ಅವರ ನೀತಿಗಳಲ್ಲಿ ಮನುಸ್ಮೃತಿ ಎದ್ದು ಕಾಣುತ್ತಿದೆ. ಸದನದೊಳಗೆ ಸ್ಪೀಕರ್ ಎದುರು ಆರ್ಎಸ್ಎಸ್ ನವರು ಅಂತ ಹೇಳಿಕೊಳ್ಳುತ್ತಾರೆ. ಇಂತಹ ವ್ಯವಸ್ಥೆ ಎಲ್ಲಿಯಾದರೂ ನೋಡಿದ್ದೇವಾ? ಎಂದು ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ