ETV Bharat / state

ಸಾರಿಗೆ ಸಚಿವರ ಎಚ್ಚರಿಕೆಗೆ ಖಾಸಗಿ ಬಸ್ ಮಾಲೀಕರು ಡೋಂಟ್ ಕೇರ್.. ಪ್ರಯಾಣಿಕರ ಸುಲಿಗೆಗೆ ಬೀಳದ ಬ್ರೇಕ್​ - ಪ್ರಯಾಣಿಕನ ಟಿಕೆಟ್ ಮೊತ್ತ

ದಂಡ ಮೊತ್ತವು ಅತ್ಯಂತ ಕಡಿಮೆ ಇರುವುದರಿಂದ ಒಂದು ಅಥವಾ ಎರಡು ಸೀಟಿನ ಮೊತ್ತ ದಂಡವಾಗಲಿ ಹೋಗಲಿ, ಉಳಿದ 30-35 ಸೀಟ್ ಮೊತ್ತ ಲಾಭವಾಗುತ್ತದೆ ಎಂದುಕೊಂಡು ಬಹುತೇಕ ಖಾಸಗಿ ಬಸ್‌ ಕಂಪನಿಗಳು ಸುಲಿಗೆಯನ್ನು ಮುಂದುವರೆಸುತ್ತಿವೆ.

Private bus owners dont care warning
ಸಾರಿಗೆ ಸಚಿವರ ಎಚ್ಚರಿಕೆಗೆ ಖಾಸಗಿ ಬಸ್ ಮಾಲೀಕರು ಡೊಂಟ್ ಕೇರ್
author img

By

Published : Oct 23, 2022, 9:21 PM IST

ಬೆಂಗಳೂರು: ಸಾರಿಗೆ ಸಚಿವರು ಖಾಸಗಿ ಬಸ್ ಮಾಲೀಕರಿಗೆ ಈ ಬಾರಿಯ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ದರ ವಸೂಲಿ ಮಾಡದಂತೆ ಕಠಿಣ ಸೂಚನೆ ನೀಡಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ಕೆಲ ಬಸ್‌ಗಳ ಮೇಲೆ ದಾಳಿ ನಡೆಸಿ ದಂಡಪ್ರಯೋಗ ಮಾಡುತ್ತಿದ್ದಾರೆ. ಈ ಕ್ರಮಗಳಿಂದ ಖಾಸಗಿ ಬಸ್ ಕಂಪನಿಗಳು ಎಚ್ಚೆತ್ತುಕೊಂಡು ದರ ಏರಿಕೆಯಿಂದ ಹಿಂದೆ ಸರಿಯಬಹುದು ಎನ್ನುವ ಪ್ರಯಾಣಿಕರ ನಿರೀಕ್ಷೆ ಹುಸಿಯಾಗಿದೆ. ಕನಿಷ್ಠ ಪ್ರಮಾಣದ ದಂಡ ಕಟ್ಟಿ ಬಹುತೇಕ ಪ್ರಯಾಣಿಕರ ಸುಲಿಗೆ ಮುಂದುವರೆಸಿವೆ ಎಂಬ ಆರೋಪಗಳು ಕೇಳಿಬಂದಿವೆ.

ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಮೂರು, ನಾಲ್ಕು, ಐದು ಪಟ್ಟು ಹೆಚ್ಚಿಸಿರುವ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಬೇಕಿರುವ ಸಾರಿಗೆ ಇಲಾಖೆ ಕಾಟಾಚಾರದ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಮಾರ್ಗದಲ್ಲಿ ಖಾಸಗಿ ಬಸ್‌ಗಳು ಟಿಕೆಟ್ ದರ 2000 ದಿಂದ ಗರಿಷ್ಠ 6000 ರವರೆಗೂ ಪಡೆಯುತ್ತಿವೆ. ಅಂತಹ ಬಸ್‌ಗಳಿಗೆ ಸಾರಿಗೆ ಇಲಾಖೆ ವಿಧಿಸುತ್ತಿರುವ ದಂಡವು 2000ರಿಂದ 5000 ಮಾತ್ರ. ಈ ಮೂಲಕ ಖಾಸಗಿ ಬಸ್‌ಗಳು ಒಬ್ಬ ಪ್ರಯಾಣಿಕನ ಟಿಕೆಟ್ ಮೊತ್ತವನ್ನು ಸಾರಿಗೆ ಇಲಾಖೆಗೆ ದಂಡದ ರೂಪದಲ್ಲಿ ಪಾವತಿಸಿದರೆ ಸಾಕು, ಆ ದಿನವಿಡೀ ಪ್ರಯಾಣಿಕರ ಸುಲಿಗೆಯನ್ನು ಮಾಡಬಹುದಾಗಿದೆ.

ದಂಡದ ಮೊತ್ತ ಅತ್ಯಲ್ಪ: ದಂಡ ಮೊತ್ತವು ಅತ್ಯಂತ ಕಡಿಮೆ ಇರುವುದರಿಂದ ಒಂದು ಅಥವಾ ಎರಡು ಸೀಟಿನ ಮೊತ್ತ ದಂಡವಾಗಲಿ ಹೋಗಲಿ, ಉಳಿದ 30-35 ಸೀಟ್ ಮೊತ್ತ ಲಾಭವಾಗುತ್ತದೆ ಎಂದುಕೊಂಡು ಬಹುತೇಕ ಖಾಸಗಿ ಬಸ್‌ ಕಂಪನಿಗಳು ಸುಲಿಗೆಯನ್ನು ಮುಂದುವರೆಸುತ್ತಿವೆ.

ದಂಡ ಕಟ್ಟಿದ ರಶೀದಿಯೇ ಸುಲಿಗೆಗೆ ರಹದಾರಿ: ಸಾರಿಗೆ ಇಲಾಖೆಯು ದಿನಕ್ಕೆ ಒಂದು ಬಾರಿ ದಂಡ ಹಾಕಬಹುದಾಗಿದೆ. ಒಮ್ಮೆ ದಂಡ ಕಟ್ಟಿದರೆ ಮುಂದಿನ 24 ಗಂಟೆವರೆಗೂ ದಂಡ ವಿಧಿಸುವಂತಿಲ್ಲ. ಈ ನಿಯಮವನ್ನೇ ಮಾಡಿಕೊಂಡಿರುವ ಖಾಸಗಿ ಬಸ್‌ಗಳು ಒಮ್ಮೆ ಪ್ರಯಾಣ ದರ ಹೆಚ್ಚು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸಿ ದಿನಪೂರ್ತಿ ಪ್ರಯಾಣಿಕರಿಂದ ಮೂರುಪಟ್ಟು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ಬೆಂಗಳೂರಿನಿಂದ ಬೀದರ್, ರಾಯಚೂರು, ಹುಬ್ಬಳಿ, ಧಾರವಾಡ ತೆರಳುವ ಖಾಸಗಿ ಬಸ್​ಗಳು ಅದೇ ದಿನ ರಾತ್ರಿ ಬೆಂಗಳೂರಿಗೆ ಹಿಂದಿರುಗುತ್ತವೆ. ಆಗ ಒಮ್ಮೆ ದಂಡ ಪಾವತಿಸಿ 2000 ರಶೀದಿ ಪಡೆದುಕೊಂಡು ಒಂದು ಸೀಟ್‌ಗೆ ಟಿಕೆಟ್‌ ದರ ಕನಿಷ್ಠ 2000 ಪಡೆಯುತ್ತಿವೆ.

ಪುನಾರಾವರ್ತನೆಯಾದರೆ ದಂಡದ ಮೊತ್ತ ಹೆಚ್ಚಳ: ಮೊದಲ ಬಾರಿ 2 ಸಾವಿರ ದಂಡ ಹಾಕಲಾಗುವುದು. ಆ ಬಳಿಕ ಮತ್ತೆ ಪುನಾರಾವರ್ತನೆಯಾದರೆ ದಂಡ ಮೊತ್ತ ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಮಾನ ಪ್ರಯಾಣದಷ್ಟೇ ದುಬಾರಿ ಖಾಸಗಿ ಬಸ್​ಗಳ ಟಿಕೆಟ್ ದರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.