ಬೆಂಗಳೂರು: ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಭೇಟಿ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿ ಭೇಟಿ ವೇಳೆ ಸುಮಾರು 20 ನಿಮಿಷ ಕಾಲ ಯಡಿಯೂರಪ್ಪ ಬಗ್ಗೆಯೇ ಮಾತಾಡಿದ್ದಾರೆ. ಯಡಿಯೂರಪ್ಪ ತ್ಯಾಗ, ಪರಿಶ್ರಮ, ಪಕ್ಷ ಸೇವೆ, ನಾಯಕತ್ವ ಗುಣಗಳನ್ನು ಹಾಡಿ ಹೊಗಳಿದ್ದಾರೆ ಎನ್ನಲಾಗಿದೆ.
ಪಿಎಂ ಮೋದಿ- ಸಿಎಂ ಬಸವರಾಜ್ ಬೊಮ್ಮಾಯಿ 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಿಎಂ ಬಗ್ಗೆ ಪ್ರಧಾನಿ ಮೋದಿ ಅವರೇ ಪ್ರಸ್ತಾಪ ಮಾಡಿದರು ಎನ್ನಲಾಗಿದೆ. ಈ ಮಾತು ಸುಮಾರು 20 ನಿಮಿಷಗಳ ಕಾಲ ಮುಂದುವರಿಯಿತು ಎಂದು ಹೇಳಲಾಗುತ್ತಿದೆ.
ಅವರು ಈ ವಯಸ್ಸಿನಲ್ಲಿಯೂ ಪಕ್ಷ ಕಟ್ಟುತ್ತೇನೆ ಎಂದು ಓಡಾಡುತ್ತಿದ್ದಾರೆ, ಅವರನ್ನ ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಬೊಮ್ಮಾಯಿ ಎದುರು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ನಾನು ಸಹ ಯಡಿಯೂರಪ್ಪ ಅವರಿಂದ ಹಲವು ವಿಚಾರಗಳನ್ನು ಕಲಿತಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಯಡಿಯೂರಪ್ಪ ಎಂಬ ಹೆಸರು - ಶಕ್ತಿ ಸಾಕು..ಅವರಿಗೆ ಸ್ಥಾನಮಾನದ ಅಪೇಕ್ಷೆ ಇಲ್ಲ: ಬಿ.ವೈ ರಾಘವೇಂದ್ರ