ETV Bharat / state

ರಾಜ್ಯದ 2 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಹಸಿರು ನಿಶಾನೆ

ನಾಳೆ ಕೊರೊನಾ ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಲಿದ್ದಾರೆ. ರಾಜ್ಯದ ಎರಡು ಕೇಂದ್ರಗಳು ಲಸಿಕೆ ವಿತರಣೆಗೆ ಸಿದ್ಧವಾಗಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ 100 ಮಂದಿ ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲಾಗುತ್ತದೆ.

author img

By

Published : Jan 15, 2021, 3:09 PM IST

prime-minister-modi-inaugurate-two-vaccination-centers-tomorrow
ರಾಜ್ಯದ ಎರಡು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಹಸಿರು ನಿಶಾನೆ

ಬೆಂಗಳೂರು: ನಾಳೆ ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10:30ಕ್ಕೆ ದೆಹಲಿಯಲ್ಲಿ ವರ್ಚುಯಲ್​ ಮೂಲಕ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎರಡು ವ್ಯಾಕ್ಸಿನೇಷನ್‌ ಕೇಂದ್ರಗಳಿಗೂ ಚಾಲನೆ ಸಿಗಲಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಲಸಿಕಾ ಕೇಂದ್ರಗಳು ವಿತರಣೆಗೆ ಸಜ್ಜಾಗುತ್ತಿವೆ. ಇಂದು ವಿಕ್ಟೋರಿಯಾ ವ್ಯಾಕ್ಸಿನೇಷನ್‌ ಸೆಂಟರ್​​​ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಗ್ರೂಪ್ ಡಿ ನೌಕರರು, ವೈದ್ಯರು, ನರ್ಸ್​​ಗಳು.. ಹೀಗೆ ಆರೋಗ್ಯ ಕಾರ್ಯಕರ್ತರು ಯಾರು ನೋಂದಣಿ ಮಾಡಿಕೊಂಡಿದ್ದಾರೋ ಅವರಲ್ಲಿ ನಾಳೆ 100 ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದರು.

ವಿಕ್ಟೋರಿಯಾ ಆಸ್ಫತ್ರೆ ಡೀನ್ ಡಾ. ಜಯಂತಿ ಪ್ರತಿಕ್ರಿಯಿಸಿ, ಆರೋಗ್ಯ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ ಮಾಡಬಹುದು ಎಂದು ಹೇಳಲಾಗ್ತಿದೆ. ಸಂವಾದ ಆಗುತ್ತೋ ಇಲ್ಲವೋ ಎಂಬುದು ಖಚಿತವಾಗಿಲ್ಲ. ಆದರೆ ಪ್ರಧಾನಿ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಈಗಾಗಲೇ ಆಗಿದೆ ಎಂದರು.

ನಮ್ಮಲ್ಲಿ 6 ಸೈಟ್​​ಗಳಲ್ಲಿ ಲಸಿಕೆ ಹಂಚಿಕೆ ಮಾಡಬೇಕೆಂದು ಗುರುತು ಮಾಡಿದ್ದಾರೆ. ಪಿಎಂ ಎಸ್​​​​ಎಸ್​​ವೈ ಸೆಂಟರ್​​​ನಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ. ಅಲ್ಲಿ ವಿಶ್ರಾಂತಿ ಕೊಠಡಿ, ಪರೀಕ್ಷಣಾ ಕೊಠಡಿ ಮತ್ತೆ ವ್ಯಾಕ್ಸಿನ್ ರೂಮ್ ಸಿದ್ಧಪಡಿಸಿದ್ದೇವೆ ಎಂದರು.

'ಮಕ್ಕಳಿಗೆ ಕೊಡೋದಿಲ್ಲ ಕೊವ್ಯಾಕ್ಸಿನ್'

18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತದೆ. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ವ್ಯಾಕ್ಸಿನ್ ನೀಡುವುದಿಲ್ಲ. ಅಲರ್ಜಿ ಸಿಂಪ್ಟಮ್ಸ್ ಇರುವವರೆಗೂ ಕೊರೊನಾ ಲಸಿಕೆ ನೀಡೋದಿಲ್ಲ.

ಕೊರೊನಾ ಪಾಸಿಟಿವ್ ಇದ್ದ ರೋಗಿಗಳಿಗೂ ಕೊಡೋದಿಲ್ಲ, ಬದಲಿಗೆ ಕೊರೊನಾ ಪಾಸಿಟಿವ್ ಆಗಿ 14 ದಿನಗಳ ಆಗುವವರೆಗೂ ಲಸಿಕೆ ನೀಡುವುದಿಲ್ಲ.
ಪ್ಲಾಸ್ಮಾ ಥೆರಪಿ ತೆಗೆದುಕೊಂಡವರಿಗೂ ವ್ಯಾಕ್ಸಿನ್ ನೀಡುವುದಿಲ್ಲ. ವ್ಯಾಕ್ಸಿನ್ ಮೊದಲ ಡೋಸ್ ನಂತರ ಎರಡನೇ ಡೋಸ್ ಕೂಡ ಅದೇ ಆಗಿರುತ್ತದೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಲಸಿಕೆ ನೀಡುವುದಿಲ್ಲ.

ಇದನ್ನೂ ಓದಿ: ಅಮಿತ್ ಶಾ ರಾಜ್ಯ ಭೇಟಿ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.