ETV Bharat / state

ಬೆಂಗಳೂರಲ್ಲಿ ಮೋದಿ ರೋಡ್ ಶೋ, ಎರಡೂವರೆ ಲಕ್ಷ ಜನರಿಂದ ಪುಷ್ಪವೃಷ್ಟಿ: ಎಸ್​​​​ಟಿ ಸೋಮಶೇಖರ್ - assembly election

ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್​ ಶೋ ಕುರಿತು ಎಸ್​​ಟಿ ಸೋಮಶೇಖರ್​​, ಕೆ. ಗೋಪಾಲಯ್ಯ ಮತ್ತು ಸಚಿವ ಮುನಿರತ್ನ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು.

prime-minister-modi-road-show-in-bengaluru
ಸಿಲಿಕಾನ್ ಸಿಟಿಯಲ್ಲಿ ಮೋದಿ ರೋಡ್ ಶೋ, ಎರಡೂವರೆ ಲಕ್ಷ ಜನರಿಂದ ಪುಷ್ಪ ಮಳೆ: ಎಸ್​​​​ಟಿ ಸೋಮಶೇಖರ್..!
author img

By

Published : Apr 29, 2023, 4:05 PM IST

ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು

ಬೆಂಗಳೂರು: ನೈಸ್ ರೋಡ್ ಜಂಕ್ಷನ್​​ನಿಂದ ಸುಮನಹಳ್ಳಿ ಸರ್ಕಲ್​ವರೆಗೂ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಎರಡೂವರೆ ಲಕ್ಷ ಜನರು ಮೋದಿ ಅವರಿಗೆ ಪುಷ್ಪವೃಷ್ಟಿಗೈದು ಸ್ವಾಗತ ಕೋರಿ ಡಬಲ್​​ ಎಂಜಿನ್ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ತಿಳಿಸಿದ್ದಾರೆ.

ರೋಡ್ ಶೋ ಕುರಿತು ಜಂಟಿ ಸಚಿವರ ಜೊತೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ಬರುತ್ತಿರುವುದಕ್ಕೆ ಸ್ವಾಗತಿಸುತ್ತೇವೆ. ಸುಮಾರು 9 ವಿಧಾನಸಭೆ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ. 5.5 ಕಿಲೋ ಮೀಟರ್ ವರೆಗೆ ರ್ಯಾಲಿ ನಡೆಯುತ್ತದೆ. ನಾಲ್ಕು ವಿಧಾನಸಭೆ ಕ್ಷೇತ್ರ ಕವರ್ ಆಗುತ್ತದೆ. ಎಲ್ಲಾ ಕಾರ್ಯಕರ್ತರಿಗೆ ಹಾಗೂ ನಾಗರಿಕರಿಗೆ ಮಾರ್ಗದರ್ಶನ ನೀಡಿದ್ದೇವೆ. ನೈಸ್ ರಸ್ತೆಯಿಂದ ಸುಂಕದ ಮಟ್ಟದವರೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒಂಬತ್ತು ಕ್ಷೇತ್ರದಿಂದ ಎರಡೂವರೆ ಲಕ್ಷ ಜನರನ್ನು ಸೇರಿಸುತ್ತೇವೆ, ಮೋದಿಯವರನ್ನು ಹತ್ತಿರದಿಂದ ನೋಡಲು ಜನರು ಕೇಳಿದ್ದರು. ಹೀಗಾಗಿ ಅವರಿಗಾಗಿ ಮೋದಿ ಅವರಿಗೆ ಪುಷ್ಪವೃಷ್ಟಿ ಮಾಡಲು ಬೆಂಗಳೂರಿನ ನಾಗರಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ನಾಲ್ಕು ಕ್ಷೇತ್ರಕ್ಕೆ ಆನೆ ಬಲ ಬಂದಂತಾಗಿದೆ ಎಂದರು. ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಮೋದಿ ಆಗಮನಕ್ಕೆ ಸ್ವಾಗತಿಸುತ್ತಿದ್ದೇವೆ. ಮೋದಿ ಅವರನ್ನು ಬಹಳ ಹತ್ತಿರದಿಂದ ನೋಡಲು ಈ ನಾಲ್ಕು ಕ್ಷೇತ್ರದ ಜನರಿಗೆ ಅವಕಾಶ ಇದೆ. ಮೋದಿ ಬಂದಿರುವ ಸ್ಥಳದಲ್ಲಿ ದೇಶ ಹಾಗೂ ರಾಜ್ಯ ಅಭಿವೃದ್ಧಿ ಆಗಲಿದೆ. ಇದೊಂದು ಅದ್ಬುತ ಕಾರ್ಯಕ್ರಮ ಎಂದರು.

ಸಚಿವ ಮುನಿರತ್ನ ಮಾತನಾಡಿ, 9 ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೋದಿ ಬರುತ್ತಿರುವುದು ಸಂತೋಷದ ವಿಚಾರ, ಸುಂಕದ ಕಟ್ಟೆಯಿಂದ 11 ಕಿಲೋ ಮೀಟರ್ ಮೆಟ್ರೋ ಡಿಪಿಆರ್ ಅನುಮೋದನೆ ಆಗಿದೆ. ಬಡವರು, ಮಧ್ಯಮ ವರ್ಗ ಇರುವ ಪಶ್ಚಿಮ ಕ್ಷೇತ್ರ ಈ ಭಾಗದಲ್ಲಿದೆ. ಈ ಚುನಾವಣೆ ಬಂದಾಗ ವಿಪಕ್ಷ ನಾನಾ ರೀತಿಯಲ್ಲಿ ನಾಟಕ ಆಡುತ್ತಿದೆ. ಯಶವಂತಪುರದ ನೈಸ್ ರಿಂಗ್ ರಸ್ತೆಯಿಂದ ಹಿಡಿದು ತಾವರಕೆರೆ ಜನರಿಗೆ ಬಹಳಷ್ಟು ಅನುಕೂಲ ಆಗಿದೆ. ಮೋದಿ ಬರುವುದಕ್ಕೆ ಎಲ್ಲರೂ ಆಗಮಿಸಿ ಭಾಗವಹಿಸಿ ಪ್ರಧಾನಿ ಅವರನ್ನು ಹತ್ತಿರದಿಂದ ನೋಡಲು ಅವಕಾಶ ಸಿಗುತ್ತಿದೆ. ಅಭಿವೃದ್ಧಿ ನೋಡಿ ನಮ್ಮ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ರು.

ಮೋದಿ ಮುಖ ನೋಡಿದರೆ ಬಿಜೆಪಿಗೆ ವೋಟ್ ಬರಲ್ಲ ಎಂಬ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿಕೆ‌ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ನಮಗೆ ಪವನ್ ಖೇರಾ ಅಂದರೆ ಯಾರು ಅಂತ ಹೇಳಿ..!? ಅವ್ರ ಹೆಸ್ರೆ ಕೇಳಿಲ್ಲ ನಾನು, ಪ್ರಧಾನಿ ಮೋದಿ ಎಲ್ಲಿ.. ? ಇವ್ನನ್ಯಾರೋ ಖೇರಾ ಎಲ್ಲಿ, ಯಾರಾದರೂ ಒಳ್ಳೆಯ ವ್ಯಕ್ತಿ ಬಗ್ಗೆ ಮಾತಾಡಿ. ಹೊಸ ವಿಚಾರ ಇದ್ದರೆ ಹೇಳಿ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ರು.

ಚುನಾವಣೆ ಬಳಿಕ ಸಿದ್ದರಾಮಯ್ಯ ಔಟ್ ಡೇಟ್ ಆಗ್ತಾರೆ: ಸಿದ್ದರಾಮಯ್ಯ ಕೂಡ ಹೀಗೆ ಹೇಳಿದ್ದರು ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮುನಿರತ್ನ, ಸಿದ್ದರಾಮಯ್ಯ ಬಗ್ಗೆ ಯಾಕ್ ಮಾತಾಡ್ತಿರಾ...? ಸಿದ್ದರಾಮಯ್ಯ ಔಟ್ ಡೇಟ್ ರ್ರೀ, ಮೇ 13ರ ಬಳಿಕ ಸಿದ್ದರಾಮಯ್ಯ ಔಟ್ ಡೇಟ್ ಆಗ್ತಾರೆ. ಸಿದ್ದರಾಮಯ್ಯ ಬಗ್ಗೆ ಯಾಕ್ ಮಾತಾಡ್ತಿರಾ ಬೇರೆ ವಿಚಾರ ಮಾತಾಡಿ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ರು.

ಕನಕಪುರದಲ್ಲಿ ಸಾಮ್ರಾಟ್​​ ಅಶೋಕ್ ಗೆಲ್ತಾರೆ: ಆರ್​​ ಅಶೋಕ್ ಕನಕಪುರದಲ್ಲಿ ಸರಿಯಾದ ರೀತಿಯಲ್ಲಿ ಕ್ಯಾಂಪೇನ್ ಮಾಡುತ್ತಿಲ್ಲ ಎನ್ನುವುದು ಸುಳ್ಳು, ಕನಕಪುರದಲ್ಲಿ ಸಾಮ್ರಾಟ್ ಅಶೋಕ್ ಗೆಲ್ತಾರೆ. ಅಶೋಕ್ ಯಾರು ಎಂದು ಎಲ್ಲರಿಗೂ ಗೊತ್ತು. ಮನೆ ಮನೆಗೆ ಪಾಂಪ್ಲೆಟ್ ಹಂಚುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹಲವೆಡೆ ರಸ್ತೆ ನಿರ್ಬಂಧ.. ಇಲ್ಲಿದೆ ಪರ್ಯಾಯ ಮಾರ್ಗಗಳ ವಿವರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.