ETV Bharat / state

ಬಡವರಿಗೆ ಜನರಿಕ್ ಔಷಧಗಳನ್ನೇ ಸೂಚಿಸಿ : ಸದಾನಂದ ಗೌಡ ಮನವಿ - ಸದಾನಂದ ಗೌಡ

ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳ ಮೇಲೆಯೇ ಅವಲಂಬಿತವಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

prescribe Generic Drugs to the Poor: An appeal to Sadananda Gowda
ಬಡವರಿಗೆ ಜನರಿಕ್ ಔಷಧಗಳನ್ನೇ ಸೂಚಿಸಿ
author img

By

Published : Jan 16, 2021, 2:19 AM IST

ಬೆಂಗಳೂರು : ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮೂತ್ರಪಿಂಡ ಕಸಿ ಕೇಂದ್ರ, ಆಸ್ಟಿಯೊಪೊರೋಸಿಸ್ ಕ್ಲಿನಿಕ್ ಮತ್ತು ಪೀಡಿಯಾಟ್ರಿಕ್ ಡರ್ಮಟಾಲಜಿ ವಿಭಾಗವನ್ನು ಕೇಂದ್ರ ಸಚಿವ ಸದಾನಂದ ಗೌಡ ಉದ್ಘಾಟಿಸಿದರು.

ಅಗತ್ಯವಿರುವವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಆಸ್ಪತ್ರೆ ಮಹತ್ತರ ಸೇವೆಯನ್ನು ಮಾಡುತ್ತಿದೆ. ಡಾ.ನವೀನ್ ಥಾಮಸ್ ಮತ್ತು ಅವರ ಸಮರ್ಪಿತ ತಂಡ ನೀಡಿದ ಪ್ರಾಮಾಣಿಕ ಪರಿಣಾಮಗಳನ್ನು ಶ್ಲಾಘಿಸಿದರು. ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳ ಮೇಲೆಯೇ ಅವಲಂಬಿತವಾಗಿದೆ ಎಂದರು.

ಸದಾನಂದ ಗೌಡ

ಈ ವಲಯದಲ್ಲಿ ಸ್ವಾವಲಂಬನೆ ಗಳಿಸಲು 3 ಬಲ್ಕ್ ಡ್ರಗ್ ಪಾರ್ಕ್ & 4 ಮೆಡಿಕಲ್ ಡಿವೈಸ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯಕ್ಕಾಗಿ ಕೇಂದ್ರವು ತಲಾ 1000 ಕೋಟಿ ರೂ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

ನಮ್ಮ ಕೇಂದ್ರ ಸರ್ಕಾರವು ದೇಶಾದ್ಯಂತ 7000 ಕ್ಕಿಂತ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮುಟ್ಟದ ಔಷಧಗಳನ್ನು ಒದಗಿಸುತ್ತಿದೆ. ವೈದ್ಯಮಿತ್ರರಲ್ಲಿ ನನ್ನ ಪ್ರೀತಿಪೂರ್ವಕ ಆಗ್ರಹವೆನೆಂದರೆ "ನಿಮ್ಮಲ್ಲಿ ಬರುವ ಆರ್ಥಿಕವಾಗಿ ದುರ್ಬಲರಾದ ರೋಗಿಗಳಿಗೆ ಜನರಿಕ್ ಔಷಧಗಳನ್ನೇ ಪ್ರಿಸ್ಕ್ರೈಬ್ ಮಾಡಿ ಎಂದು ವೈದ್ಯರಿಗೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.