ETV Bharat / state

ಹಳೆ ಸೀರೆಗಳಿಂದ ಹಗ್ಗ ತಯಾರಿ.. ದಿನಕ್ಕೆ 1 ಸಾವಿರ ರೂ. ಸಂಪಾದನೆ - 1 ಸಾವಿರ ರೂ.ಸಂಪಾದನೆ

ನಾಲ್ಕೈದು ಕುಟುಂಬಗಳು ಊರೂರಿಗೆ ತೆರಳಿ ಸಂಪಾದನೆ ಮಾಡಿದ ಬಳಿಕ ರಾತ್ರಿ ಒಂದೆಡೆ ಸೇರುತ್ತವೆ. ಈ ಯಂತ್ರದಿಂದ ಹಗ್ಗ ತಯಾರಿಸಲು ಮೂವರು ಬೇಕಾಗುತ್ತದೆ. ಒಬ್ಬರು ಯಂತ್ರ ತಿರುಗಿಸಿದರೆ, ಇನ್ನಿಬ್ಬರು ಹಗ್ಗವನ್ನು ಉರಿಗೊಳಿಸುತ್ತಾರೆ. ಒಂದು ಮಾರು ಹಗ್ಗ ತಯಾರಿಕೆಗೆ 15 ರಿಂದ 20 ರೂ.ಗಳನ್ನು ತೆಗೆದುಕೊಳ್ತಾರೆ.

ಸಂಪಾದನೆ
ಸಂಪಾದನೆ
author img

By

Published : Mar 5, 2021, 11:25 PM IST

ದೇವನಹಳ್ಳಿ: ಹಿಂದಿನ ಕಾಲದಲ್ಲಿ ಹಳೆಯ ಚೀಲ, ಹರಿದ ಚೀಲಗಳನ್ನು ಬಳಸಿ ಹಗ್ಗ ತಯಾರಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಚೀಲಗಳ ಜತೆಗೆ ಸೀರೆಗಳಲ್ಲೂ ಹಗ್ಗ ತಯಾರಿಸುವುದರ ಮೂಲಕ ನೂರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಹೌದು, ಮೂಲತಃ ರಾಯಚೂರಿನ ಲಿಂಗಸುಗೂರಿನ ನಿವಾಸಿಗಳಾದ ಇವರು, ದೇವನಹಳ್ಳಿ, ಬೆಂಗಳೂರು, ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳತ್ತ ವಲಸೆ ಬಂದಿದ್ದಾರೆ. ಚೀಲ, ಸೀರೆಗಳಿಂದ ಹಗ್ಗ ತಯಾರಿಸಿ ಬದುಕಿನ ಬಂಡಿ ಸಾಗಿಸುತ್ತಾರೆ. ಮಳೆಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಹೊತ್ತಿಗೆ ಕೃಷಿ ಚಟುವಟಿಕೆಗಳು ಮುಗಿದಿರುತ್ತವೆ. ಈ ಸಮಯದಲ್ಲಿ ಪುಟ್ಟ ಯಂತ್ರದ ಜತೆಗೆ ಸ್ಕೂಟರ್ ಏರಿ ಬರುವ ಕುಟುಂಬ, ಊರೂರಿಗೆ ತೆರಳಿ ಹಗ್ಗ ತಯಾರಿಸುವ ಕಾಯಕದಲ್ಲಿ ತೊಡಗಿರುತ್ತಾರೆ.

ಹಳೆ ಸೀರೆಗಳಿಂದ ಹಗ್ಗ ತಯಾರಿ

ನಾಲ್ಕೈದು ಕುಟುಂಬಗಳು ಊರೂರಿಗೆ ತೆರಳಿ ಸಂಪಾದನೆ ಮಾಡಿದ ಬಳಿಕ ರಾತ್ರಿ ಒಂದೆಡೆ ಸೇರುತ್ತವೆ. ಈ ಯಂತ್ರದಿಂದ ಹಗ್ಗ ತಯಾರಿಸಲು ಮೂವರು ಬೇಕಾಗುತ್ತದೆ. ಒಬ್ಬರು ಯಂತ್ರ ತಿರುಗಿಸಿದರೆ, ಇನ್ನಿಬ್ಬರು ಹಗ್ಗವನ್ನು ಉರಿಗೊಳಿಸುತ್ತಾರೆ. ಒಂದು ಮಾರು ಹಗ್ಗ ತಯಾರಿಕೆಗೆ 15 ರಿಂದ 20 ರೂ.ಗಳನ್ನು ತೆಗೆದುಕೊಳ್ತಾರೆ. ದಿನಕ್ಕೆ ಸುಮಾರು 1 ಸಾವಿರ ರೂಪಾಯಿ ಸಂಪಾದನೆ ಮಾಡ್ತಾರೆ. ಊರಿಗೆ ಮರಳುವ ವೇಳೆಗೆ ಖರ್ಚು ಕಳೆದು 20 ರಿಂದ 25 ಸಾವಿರ ರೂ.ಸಂಪಾದಿಸುತ್ತಾರೆ. ಕೃಷಿಕರು ಈ ಹಗ್ಗಗಳನ್ನು ಜಾನುವಾರುಗಳನ್ನು ಕಟ್ಟಲು ಬಳಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.