ETV Bharat / state

ಕೋವಿಡ್-19 ಲಸಿಕೆ ಪರಿಚಯಿಸಲು ಆರೋಗ್ಯ ಕಾರ್ಯಕರ್ತರ ಸಿದ್ಧತಾ ಚಟುವಟಿಕೆ ಆರಂಭ - private heath centres

ಲಸಿಕೆ ಪರಿಚಯದ ಆರಂಭಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಎಲ್ಲಾ ಆರೋಗ್ಯ ಕಾರ್ಯಕರ್ತರು ಫಲಾನುಭವಿಗಳಾಗಿರುತ್ತಾರೆ. ಆದ್ಯತೆಯ ಮೇರೆಗೆ ಇತರೆ ಗುಂಪುಗಳು ಮತ್ತು ಜನಸಂಖ್ಯೆಯನ್ನು ಹಂತ ಹಂತವಾಗಿ ಒಳಪಡಿಸಲಾಗುತ್ತದೆ. ಲಸಿಕೆಯ ವಿವರ ಮತ್ತು ಕೋವಿಡ್ -19 ಲಸಿಕೆ ಪರಿಚಯದ ದಿನಾಂಕವನ್ನು ಕೇಂದ್ರ ಸರ್ಕಾರದಿಂದ ತಿಳಿಸಲಾಗುತ್ತೆ.

preparations-are-being-carried-to-introduce-covid-19-medicine
ಕೋವಿಡ್-19 ಲಸಿಕೆ ಪರಿಚಯಿಸಲು ಆರೋಗ್ಯ ಕಾರ್ಯಕರ್ತರ ಸಿದ್ಧತಾ ಚಟುವಟಿಕೆಗಳು ಆರಂಭ
author img

By

Published : Oct 24, 2020, 6:53 AM IST

ಬೆಂಗಳೂರು: ಕೋವಿಡ್-19 ಲಸಿಕೆ ಪರಿಚಯಿಸಲು ಭಾರತ ಸರ್ಕಾರ ಯೋಜಿಸುತ್ತಿದ್ದು, ಈ ನಿಟ್ಟಿನಲ್ಲಿ ಪೂರ್ವಸಿದ್ಧತೆಯ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಪರಿಚಯದ ಆರಂಭಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಎಲ್ಲಾ ಆರೋಗ್ಯ ಕಾರ್ಯಕರ್ತರು ಫಲಾನುಭವಿಗಳಾಗಿರುತ್ತಾರೆ. ಆದ್ಯತೆಯ ಮೇರೆಗೆ ಇತರೆ ಗುಂಪುಗಳು ಮತ್ತು ಜನಸಂಖ್ಯೆಯನ್ನು ಹಂತ ಹಂತವಾಗಿ ಒಳಪಡಿಸಲಾಗುತ್ತದೆ. ಲಸಿಕೆಯ ವಿವರ ಮತ್ತು ಕೋವಿಡ್ -19 ಲಸಿಕೆ ಪರಿಚಯದ ದಿನಾಂಕವನ್ನು ಕೇಂದ್ರ ಸರ್ಕಾರದಿಂದ ತಿಳಿಸಲಾಗುತ್ತೆ.

ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ನೀಡಿದ ಮಾರ್ಗಸೂಚಿಗಳು ಮತ್ತು ಕಾರ್ಯತಂತ್ರಗಳ ಪ್ರಕಾರ ಆರೋಗ್ಯ ಕಾರ್ಯಕರ್ತರ ಸಿದ್ಧತೆ, ಚಟುವಟಿಕೆಗಳು ಮತ್ತು ದತ್ತಾಂಶ ಸಂಗ್ರಹಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿದೆ.

ರಾಜ್ಯದಲ್ಲಿ ಪ್ರಾರಂಭಿಸಲಾದ ಸಿದ್ಧತೆಗಳ ವಿವರ:

- ಕೊರೊನಾ ಲಸಿಕೆ ಪರಿಚಯ ಮತ್ತು ಸಿದ್ಧತೆ ಕುರಿತು ಅಕ್ಟೋಬರ್ 13ರಂದು ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆ ಸಭೆ ನಡೆಸಲಾಗಿದೆ.

-ಕೋವಿಡ್-19 ಲಸಿಕೆ ಪರಿಚಯಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಶೀತಲ ಸರಪಣಿ ವ್ಯವಸ್ಥೆಯನ್ನು ಕೋವಿಡ್-19 ಲಸಿಕೆಯ ಪರಿಚಯಕ್ಕೆ ಬಳಸಿಕೊಳ್ಳಲಾಗುತ್ತದೆ. ಶೀತಲ ಸರಪಣಿ ಸಿದ್ಧತೆ ಮತ್ತು ಬಲಪಡಿಸುವ ಮೌಲ್ಯಮಾಪನವನ್ನು ರಾಜ್ಯ ಮಟ್ಟದಲ್ಲಿ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ.

- ಅಕ್ಟೋಬರ್ 3ರೊಳಗೆ ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ದತ್ತಾಂಶ ಸಂಗ್ರಹಣೆಯನ್ನು ಪೂರ್ಣಗೊಳಿಸಲು ಭಾರತ ಸರ್ಕಾರ ಸೂಚನೆ ನೀಡಿದೆ.

- ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆ ಎಲ್ಲಾ ಜಿಲ್ಲೆಗಳು ಜಿಲ್ಲಾ ಮಟ್ಟದ ಅಭಿಶಿಕ್ಷಣನ್ನು ಪ್ರಾರಂಭಿಸಿವೆ. ಆರೋಗ್ಯ ಕಾರ್ಯಕರ್ತರ ದತ್ತಾಂಶಗಳ ವಿವರಗಳನ್ನು ಸಂಗ್ರಹಿಸಲು ಪ್ರಮಾಣಿತ ಟೆಂಪ್ಲೆಟ್‌ಗಳನ್ನು ಎಲ್ಲಾ ಆರೋಗ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

- ಆರೋಗ್ಯ ಕಾರ್ಯಕರ್ತರ ವರ್ಗಗಳಲ್ಲಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್ ಮತ್ತು ಮೇಲ್ವಿಚಾರಕರು, ವೈದ್ಯಾಧಿಕಾರಿಗಳು, ಆಯುಷ್ ವೈದ್ಯರು, ಆರೆ ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿ ಮತ್ತು ಸಂಶೋಧನಾ ಸಿಬ್ಬಂದಿ, ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಶುಶ್ರೂಷ ವಿದ್ಯಾರ್ಥಿಗಳು, ಸಹಾಯಕ ಸಿಬ್ಬಂದಿ, ಆಡಳಿತ ಸಿಬ್ಬಂದಿ ವರ್ಗ ಮತ್ತು ಆಸ್ಪತ್ರೆಗಳು, ಕಾಲೇಜುಗಳು, ಚಿಕಿತ್ಸಾಲಯಗಳು ಮತ್ತು ಪ್ರಯೋಗಾಲಯಗಳು ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿ ಕೆಲಸ ಮಾಡುವ ಇತರೆ ಆರೋಗ್ಯ ಸಿಬ್ಬಂದಿ ಒಳಗೊಂಡಿರುತ್ತಾರೆ.

- ಸಾರ್ವಜನಿಕ ಸಂಸ್ಥೆಗಳಾದ ವೈದ್ಯಕೀಯ ಕಾಲೇಜುಗಳು, ಎಲ್ಲಾ ಹಂತಗಳ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಕ್ಯಾನ್ಸರ್‌ ಸಂಸ್ಥೆಗಳು ಮತ್ತು ಆಸ್ಪತ್ರೆಗಳು, ಟಿಬಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಹೊಂದಿಕೊಂಡ ಔಷಧಾಲಯಗಳು, ಬುಡಕಟ್ಟು ಆರೋಗ್ಯ ಸೌಲಭ್ಯಗಳು, ಆಯುಷ್ ಆಸ್ಪತ್ರೆಗಳು ಮತ್ತು ಹೊಂದಿಕೊಂಡ ಔಷಧಾಲಯಗಳನ್ನು ಒಳಗೊಂಡಿರುತ್ತವೆ.

- ಪುರಸಭೆಗಳ ನಿಗಮಗಳು/ ಮಹಾನಗರ ಪಾಲಿಕೆಯ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆಗಳು, ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಅಡಿಯಲ್ಲಿರುವ ಆಸ್ಪತ್ರೆಗಳು ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಒಡೆತನದಲ್ಲಿರುವ ಆರೋಗ್ಯ ಸಂಸ್ಥೆಗಳು, ಎಲ್ಲಾ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಹೋಮ್‌ಗಳು, ಚಿಕಿತ್ಸಾಲಯಗಳು, ಎನ್‌ಜಿಒಗಳಿಂದ ನಿರ್ವಹಿಸಲ್ಪಡುವ ಪಾಲಿಕ್ಲಿನಿಕ್‌ಗಳೂ ಸೇರಿಕೊಂಡಿವೆ.

- ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ(ಕೆಪಿಎಂಇ) ಅಡಿ ನೋಂದಾಯಿಸಲಾದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನು ಆನ್‌ಲೈನ್ ಪೋರ್ಟಲ್ ಮತ್ತು ಎಸ್‌ಎಂಎಸ್ ಸಂದೇಶಗಳ ಮುಖಾಂತರ ಸಮಯೋಚಿತ ಮಾಹಿತಿ ಸಂಗ್ರಹಣೆಗಾಗಿ ತಲುಪಲಿದೆ.

- ಸರ್ಕಾರಿ ಮತ್ತು ಖಾಸಗಿಯ ಎಲ್ಲಾ ಆರೋಗ್ಯ ಸಂಸ್ಥೆಗಳ ಸಮಯೋಚಿತ ಮಾಹಿತಿ ಸಂಗ್ರಹಣೆಗಾಗಿ ರಾಜ್ಯವು ವಿವಿಧ ವೇದಿಕೆಗಳ ಮೂಲಕ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.

- ಐಎಂಎ, ಫಾನಾ, ಐಎಪಿ ಇತ್ಯಾದಿ ಸೇರಿದಂತೆ ಎಲ್ಲಾ ವೃತ್ತಿಪರ ಸಂಸ್ಥೆಗಳನ್ನು ಸಕ್ರಿಯವಾಗಿ ಒಳಗೊಳ್ಳಲಾಗುತ್ತಿದೆ.

- ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪಾಲುದಾರರಾದ ಡಬ್ಲ್ಯೂಹೆಚ್ಒ, ಯುಎನ್​ಡಿಪಿ ಮತ್ತು ಯುನಿಸೆಫ್ ಈ ಉಪಕ್ರಮದಲ್ಲಿ
ಸರ್ಕಾರಕ್ಕೆ ತಾಂತ್ರಿಕ ನೆರವು ನೀಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.