ETV Bharat / state

Preparation For KEA Exams: ಕೆಇಎಯಿಂದ 670 ಹುದ್ದೆ ನೇಮಕಾತಿ; ಸರ್ಕಾರಿ ಕೆಲಸಕ್ಕೆ ಅಭ್ಯರ್ಥಿಗಳ ತಯಾರಿ ಹೀಗಿರಲಿ! - ಸರ್ಕಾರದ ನೇಮಕಾತಿ ಅಧಿಸೂಚನೆ

ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಿರುವ ಗ್ರೂಪ್​ ಸಿ ಹುದ್ದೆಗಳಿಗೆ ತಯಾರಿ ನಡೆಸುವ ಮುನ್ನ ಈ ವಿಚಾರಗಳನ್ನು ಮರೆಯದಿರಿ

Preparation Tips for Karnataka Government job

author img

By

Published : Jun 30, 2023, 12:57 PM IST

Updated : Jun 30, 2023, 2:39 PM IST

ಸರ್ಕಾರಿ ಕೆಲಸ ಪಡೆಯುವುದು ಅನೇಕರ ಕನಸು. ಇದಕ್ಕಾಗಿ ಸರ್ಕಾರದ ನೇಮಕಾತಿ ಅಧಿಸೂಚನೆಗಳಿಗಾಗಿ ವರ್ಷಗಳಿಂದ ತಯಾರಿ ನಡೆಸುತ್ತಾ ಕಾದು ಕುಳಿತವರಿದ್ದಾರೆ. ಇದೀಗ ಕರ್ನಾಟಕ ಪರೀಕ್ಷ ಪ್ರಾಧಿಕಾರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಯಮ ನಿಯಮಿತ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಮೈಸೂರು ಸೇಲ್ಸ್​ ಇಂಟರ್​ ನ್ಯಾಷನಲ್​ ಲಿಮಿಟೆಡ್​​ನಲ್ಲಿ ಖಾಲಿ ಇರುವ ಒಟ್ಟು 607 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸಹಾಯಕರು ಮತ್ತು ಹಿರಿಯ ಸಹಾಯಕರು ಹುದ್ದೆಗಳು ಇವಾಗಿದೆ.

ಗ್ರೂಪ್​ ಸಿ ಶ್ರೇಣಿಯ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಪತ್ರಿಕೆಗಳನ್ನು ಒಳಗೊಂಡಿರಲಿದೆ. ಒಂದು ಸಾಮಾನ್ಯ ಜ್ಞಾನ ಪತ್ರಿಕೆ, ಮತ್ತೊಂದು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್​, ಕಂಪ್ಯೂಟರ್​ ಜ್ಞಾನವೊಳಗೊಂಡ ಪತ್ರಿಕೆ. ಮತ್ತೊಂದು ನಿರ್ದಿಷ್ಟ ಪತ್ರಿಕೆ. ಕಿರಿಯ ಸಹಾಯರ ಹುದ್ದೆಗಳಿಗೆ ಈ ನಿರ್ದಿಷ್ಟ ಪತ್ರಿಕೆಗಳು ಇರುವುದಿಲ್ಲ.

ಹೀಗಿರಲಿ ಅಭ್ಯಾಸ: ಪರೀಕ್ಷೆಯ ತಯಾರಿ ಆರಂಭಕ್ಕೂ ಮುನ್ನ ಕೆಇಎಯಿಂದ ನೀಡಲಾದ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅಧಿಸೂಚನೆಯನ್ನು ಗಮನಿಸಿ. ಇನ್ನು ನಿರ್ದಿಷ್ಟ ಪತ್ರಿಕೆಗೆ ಯಾವ ವಿಷಯಗಳ ಕುರಿತು ಅಭ್ಯಾಸ ಮಾಡಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ನೀವು ಕೆಇಎ ವೆಬ್​ಸೈಟ್​ನಲ್ಲಿ ಪಡೆಯಬಹುದಾಗಿರುವುದರಿಂದ. ಈ ವಿಚಾರಗಳ ಕುರಿತು ಹೆಚ್ಚು ಗಮನ ಹರಿಸಿ.

ಇರಲಿ ಸ್ಮಾರ್ಟ್​ ವರ್ಕ್​: ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಬಹುತೇಕ ನಾವು ಕಲಿತ ವಿಚಾರಗಳ ಕುರಿತು ಪ್ರಶ್ನೆಗಳಿರುತ್ತವೆ. ಇದಕ್ಕೆ ರಾಜ್ಯ ಸರ್ಕಾರದ 5ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ, ವಿಜ್ಞಾನ, ಇತಿಹಾಸ, ರಾಸಾಯನ ಶಾಸ್ತ್ರ ಸೇರಿದಂತೆ ಪ್ರಮುಖ ವಿಚಾರಗಳನ್ನು ಚೆನ್ನಾಗಿ ಅಧ್ಯಯನ ಮಾಡಿ. ಜೊತೆಗೆ ಇತ್ತೀಚಿಗಿನ ಕೆಲವು ಪ್ರಸಕ್ತ ವಿದ್ಯಾಮಾನ, ಸರ್ಕಾರದ ಹೊಸ ಯೋಜನೆಗಳು, ದಿನ ಪತ್ರಿಕೆ ಮಾಹಿತಿ ತಿಳಿಯುವುದು ಅವಶ್ಯ. ಎಲ್ಲವನ್ನೂ ಓದುವುದಕ್ಕಿಂತ ಪರೀಕ್ಷೆಗೆ ಅವಶ್ಯಕತೆ ಏನು. ಯಾವ ಮಟ್ಟಿನ ಓದು ಸಹಾಯಕವಾಗಲಿದೆ ಎಂಬ ಜ್ಞಾನ ಇರಬೇಕು. ಈ ರೀತಿಯ ಸ್ಮಾರ್ಟ್​ ವರ್ಕ್​ಗಳನ್ನು ಸ್ನೇಹಿತರ ಜೊತೆ ಸೇರಿ ಕೂಡ ನಡೆಸಬಹುದು.

ಈ ಹಿಂದಿನ ಪತ್ರಿಕೆಗಳ ಅಧ್ಯಯನ: ಕೆಪಿಎಸ್​ಸಿಯಲ್ಲಿ ಹಲವು ಪರೀಕ್ಷೆಗಳ ಹಿಂದಿನ ಪ್ರಶ್ನಾ ಪತ್ರಿಕೆಗಳು ಲಭ್ಯವಾಗುವ ಹಿನ್ನಲೆ ಪತ್ರಿಕೆಗಳು ಯಾವ ರೀತಿ ಇರುತ್ತದೆ ಎಂಬ ಕಲ್ಪನೆ ಬರುತ್ತದೆ. ಈ ಅಧಾರತದ ಮೇಲೆ ಹೇಗೆ ಅಭ್ಯಾಸ ಮಾಡಬೇಕು ಎಂದು ವೇಳಾಪಟ್ಟಿ ಸಿದ್ದಪಡಿಸಿ. ಸಾಧ್ಯವಾದಷ್ಟು ಹಿಂದಿನ ಪತ್ರಿಕೆಗಳನ್ನು ಗಮನಿಸುವುದರಿಂದ ಹೇಗೆ ಅಭ್ಯಾಸ ಮಾಡಬೇಕು ಎಂಬ ಅರಿವು ಮೂಡಲಿದೆ.

ಆನ್​ಲೈನ್​ ಬಳಕೆ: ಕಳೆದ 10 ವರ್ಷಗಳಿಗಿಂತಲೂ ಇದೀಗ ನಿಮಗೆ ಹುದ್ದೆಗೆ ತಯಾರಿ ನಡೆಸುವುದು ಸುಲಭ. ಕಾರಣ ಇದೀಗ ಅಂತರ್ಜಾಲ ನಿಮ್ಮ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ನೀಡುವ ಹಿನ್ನಲೆ ಇದರ ಸದ್ಬಳಕೆ ಮಾಡಿ. ಉದ್ಯೋಗ ತಯಾರಿ ಸಂಬಂಧ ಅನೇಕ ಉಚಿತ ಯೂಟ್ಯೂಬ್​ ವಿಡಿಯೋ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ದತೆಯ ಕೆಲವು ಜಾಲತಾಣಗಳು ಅಗಾಧ ಮಾಹಿತಿ ಒದಗಿಸುತ್ತವೆ. ಅದರ ಅನುಸಾರವಾಗಿಯು ಸಲಹೆ ಪಡೆದು ತಯಾರಿ ಆರಂಭಿಸಿ.

ಅಂಜಿಕೆ ಬೇಡ: ಯಾವುದೇ ಹುದ್ದೆಗೆ ತಯಾರಿ ನಡೆಸದೇ, ಇದೀಗ ತಯಾರಿ ಆರಂಭಿಸಿದರೂ ನೀವು ಯಶಸ್ಸು ಕಾಣಬಹುದು. ಇದಕ್ಕೆ ಅನುಗುಣವಾಗಿ ನೀವು ದಿನಚರಿ, ಓದುವ ಅಭ್ಯಾಸ, ತಯಾರಿ ನಡೆಸಬೇಕಾಗುತ್ತದೆ. ಯಾವುದೇ ಕೆಲಸವು ಪರಿಶ್ರಮ ಇಲ್ಲದೇ ಸಾಗುವುದಿಲ್ಲ ಎಂಬ ನಂಬಿಕೆ ಇರಲಿ. ಗುರಿ ನಿರ್ದಿಷ್ಟವಾಗಿದ್ದಾಗ ಯಾವುದು ಕೂಡ ಕಷ್ಟವಾಗುವುದಿಲ್ಲ ಎಂಬುದು ಮರೆಯದಿರಿ.

ಸಲಹೆ ಪಡೆಯಿರಿ: ಹುದ್ದೆ ಚಿಕ್ಕದಿರಲಿ ದೊಡ್ಡದಿರಲಿ ಅದಕ್ಕೆ ಶ್ರಮ ಮತ್ತು ಮಾರ್ಗ ದರ್ಶನದ ಅವಶ್ಯಕತೆ ಅವಶ್ಯ. ಈ ಹಿನ್ನಲೆ ಈ ಹುದ್ದೆಗೆ ಆಯ್ಕೆಯಾದ ಅಥವಾ ಈಗಾಗಲೇ ಹಲವು ಪರೀಕ್ಷೆಗಳನ್ನು ಎದುರಿಸಿದವರ ಸಲಹೆಯನ್ನು ಪಡೆಯಬಹುದುಆಗಿದೆ. ಅನುಸಾರ ಕೆಲವರ ಸಹಾಯ ಪಡೆದು ತಯಾರಿ ಆರಂಭಿಸಿ. ಜೊತೆಗೆ ಸಮಾನ ಹುದ್ದೆ ಆಸಕ್ತರೊಂದಿಗೆ ತಯಾರಿ ಕುರಿತು ಚರ್ಚೆ ನಡೆಸಿದೆ

ಸರ್ಕಾರಿ ಹುದ್ದೆಗಳಿಗೆ ಸ್ಪರ್ಧೆ ಹೆಚ್ಚಿರುವುದರಿಂದ ನಿಮ್ಮ ವರ್ಕ್​ ಸ್ಮಾರ್ಟ್​ ಜೊತೆಗೆ ಯಶಸ್ಸಿನ ಹಾದಿ ತೋರುವಂತೆ ಇರಬೇಕು. ಇದಕ್ಕೆ ಅನುಗುಣವಾಗಿ ಆನ್​ಲೈನ್​ ಅಥವಾ ಕೆಲವು ಸ್ಪರ್ಧಾತ್ಮಕ ಕೇಂದ್ರದಲ್ಲಿ ಅಣಕು ಪರೀಕ್ಷೆಯನ್ನು ಕೂಡ ಎದುರಿಸಬಹುದಾಗಿದೆ. ಇದರಿಂದ ಮೊದಲ ಬಾರಿ ಪರೀಕ್ಷೆ ಎದುರಿಸುವ ಅಥವಾ ಹುದ್ದೆ ತಯಾರಿ ಕೊರತೆಯ ಭಯ ನಿವಾರಣೆ ಆಗಲಿದೆ.

ವಿಶೇಷ ಸೂಚನೆ: ಕೆಇಎ ಅಧಿಸೂಚನೆ ಹೊರಡಿಸಿರುವ ವಿವಿಧ ಇಲಾಖೆಯ ಹುದ್ದೆಗಳಲ್ಲಿ ಕಿರಿಯ ಸಹಾಯಕರು ಹೊರತು ಪಡಿಸಿ, ಕೆಲವು ನಿರ್ಧಿಷ್ಟ ಹುದ್ದೆಗೆ ಸಾಮಾನ್ಯ ಪತ್ರಿಕೆ ಬದಲಾಗಿ ನಿರ್ಧಿಷ್ಟ ಪತ್ರಿಕೆ ಇರಲಿದೆ. ಈ ನಿರ್ದಿಷ್ಟ ಪತ್ರಿಕೆಯಲ್ಲಿ ಪ್ರಶ್ನಾವಳಿಗಳನ್ನು ಯಾವ ವಿಚಾರದ ಕುರಿತಾಗಿ ನೀಡಲಾಗುವುದು ಎಂಬ ಸಂಬಂಧ ಕೆಇಎ ಸಿ ಪಠ್ಯವನ್ನು ಪ್ರಕಟಿಸಿ. ಪ್ರತಿ ಇಲಾಖೆ ಅನುಸಾರವಾಗಿ ಈ ಪಠ್ಯ ಬಿಡುಗಡೆ ಮಾಡಲಾಗಿದ್ದು, ಇದರ ಅನುಸಾರವಾಗಿ ಅಭ್ಯಾಸ ಮಾಡುವುದರಿಂದ ನಿಮ್ಮ ಅಮೂಲ್ಯ ಸಮಯ ಉಳಿತಾಯವಾಗಲಿದೆ.

ಈ ಪಠ್ಯಗಳ ಮಾಹಿತಿಗೆ ಕೆಇಎ ಈ https://cetonline.karnataka.gov.in/kea/ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: KEA Recruitment: 670 ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Last Updated : Jun 30, 2023, 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.