ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ತಾಲೀಮು ನಡೆಸಲಾಯ್ತು. ತಾಲೀಮ್ ವೇಳೆ ನಗರ ಪೊಲೀಸ್ ಅಯುಕ್ತ ಭಾಸ್ಕರ್ ರಾವ್ ಹಾಗೂ ಬಿಬಿಎಂಪಿ ಕಮೀಷನರ್ ಮಂಜುನಾಥ ಪ್ರಸಾದ್, ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹಾಗೂ ಉಮೇಶ್, ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್, ಸಂಚಾರ ಆಯುಕ್ತ ರವಿಕಾಂತೇಗೌಡ, ನಗರದ ಡಿಸಿಪಿಗಳು, ಗಡಿ ರಕ್ಷಣಾ ತಂಡ, ಸಿಆರ್ಪಿಎಫ್ ಮಹಿಳಾ ತಂಡ, ಗೋವಾ ಸ್ಟೇಟ್ ಪೊಲೀಸ್ ತಂಡ, ಸ್ಟೇಟ್ ರಿಸರ್ವ್ ಪೊಲೀಸ್, ಕೆಎಸ್‌ಆರ್‌ಪಿ ಮಹಿಳಾ ತಂಡ, ಸಿಟಿ ಆರ್ಮ್ ಹೆಡ್ ಕ್ವಾರ್ಟರ್ಸ್,ಕೆಎಸ್‌ಐಎಸ್‌ಎಫ್, ಡಾಗ್ಸ್ ಸ್ಕ್ವಾಡ್, ಎನ್‌ಸಿಸಿ,ಎಕ್ಸೈಸ್ ತಂಡ,ಅಗ್ನಿಶಾಮಕ ತಂಡ,ಹೋಮ್ ಗಾರ್ಡ್ಸ್, ಟ್ರಾಫಿಕ್ ವಾರ್ಡನ್ ತಂಡ,ಭಾರತ್ ಸೇವಾದಳ,ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಚೈತನ್ಯ ಶಾಲೆ,ಅಪಲೋ ನ್ಯಾಷನಲ್ ಪಬ್ಲಿಕ್ ಸ್ಕೂಲ್,ಮಿತ್ರ ಅಕಾಡೆಮಿ,ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತಂಡಗಳು ಪರೇಡ್ನಲ್ಲಿ ಭಾಗಿಯಾಗಿದ್ರು.
ತಾಲೀಮು ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಾಲೀಮಿನಲ್ಲಿ ಹೆಚ್ಚಿನ ಶಿಸ್ತು ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ಸೆಲ್ಯೂಟ್, ಅಟೆನ್ಷನ್ ಬಗ್ಗೆ ಗಮನವಿರಬೇಕು ಎಂದು ಎಚ್ಚರಿಕೆ ನೀಡಿದ್ರು.
ಸ್ವಾತಂತ್ರ್ಯ ದಿನಾಚರಣೆ ದಿನ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನ ದಿನ ಯಾವ ರೀತಿ ಸಿದ್ದತೆಗೊಂಡಿದೆ ಎಂದು ಬಿಬಿಎಂಪಿ ಆಯುಕ್ತ ತಿಳಿಸಿದ್ರು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ರಾಜ್ಯಮಟ್ಟದ ಸಂಭ್ರಮವನ್ನ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡಿಂಗ್ ಮತ್ತು ಆಸನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿಗಳು ಬರಲಿದ್ದು, 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತೆ.
ನಂತರ ಪಥಸಂಚನದಲ್ಲಿ ಕೆಎಸ್‌ಆರ್‌ಪಿ, ಗೈಡ್ಸ್, ಎನ್‌ಸಿಸಿ, ಸೇವಾದದಳ, ಕವಾಯತು ಮತ್ತು ಬ್ಯಾಂಡ್ ಒಟ್ಟು 34 ತುಕಡಿಯಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1250 ಮಕ್ಕಳು ಭಾಗವಹಿಸಲಿದ್ದಾರೆ. ಅತಿ ಗಣ್ಯ ವ್ಯಕ್ತಿಗಳಿಗೆ 1200ಆಸನಗಳು, ಗಣ್ಯ ವ್ಯಕ್ತಿಗಳು ,ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳಿಗೆ 750 ಆಸನ, ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗೆ 2500 ಆಸನ, ಸಾರ್ವಜನಿಕರಿಗೆ 7000 ಆಸನ ವ್ಯವಸ್ಥೆ ಮಾಡಲಾಗಿದೆ ಎಂದ್ರು.