ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಅವರು ವಿದೇಶ ಪ್ರವಾಸ ಮಾಡಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ, ಇದರ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
![Prashanth Sambargi reaction after CM visits](https://etvbharatimages.akamaized.net/etvbharat/prod-images/kn-bng-06-peasant-sambaragi-reaction-video-7208083_22092020180444_2209f_02271_172.jpg)
ಸ್ಯಾಂಡಲ್ವುಡ್ ಡ್ರಗ್ ಕೇಸ್; ಸಿಎಂಗೆ ದಾಖಲೆ ನೀಡಲು ವಿಧಾನಸೌಧಕ್ಕೆ ಬಂದ ಪ್ರಶಾಂತ್ ಸಂಬರಗಿ
ವಿಧಾನಸೌಧದಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಆರ್ಟಿಐ ಮೂಲಕವೂ ಅವರ ಪ್ರವಾಸದ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಈ ಹಿಂದೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದಾಗಲೂ ಅವರು ಮಾಹಿತಿ ನೀಡಿಲ್ಲ. ಆಗ ಅವರು ಸಾಕಷ್ಟು ಬಾರಿ ಶ್ರೀಲಂಕಾದ ಕೊಲೊಂಬೊಗೆ ಹೋಗಿದ್ದಾರೆ ಎಂದರು.
![Prashanth Sambargi reaction after CM visits](https://etvbharatimages.akamaized.net/etvbharat/prod-images/kn-bng-06-prashant-sambaragi-reaction-script-7208083_22092020181924_2209f_1600778964_924.jpg)
ಪ್ರೋಟೋಕಾಲ್ ಪ್ರಕಾರವಾದ್ರೂ ಅವರು ಮಾಹಿತಿ ನೀಡಬೇಕಿತ್ತು. ಆದರೆ, ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೇ ಹೋಗಿದ್ದಾರೆ. ಶಾಸಕರಾಗಿ ಅವರು ಸ್ಪೀಕರ್ ಅವರಿಗಾದ್ರೂ ಮಾಹಿತಿ ನೀಡಬೇಕಿತ್ತು. ಇದರಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.