ETV Bharat / state

ಟಿಕೆಟ್ ಹಂಚಿಕೆ ನಿರ್ಧರಿಸಲು ಪ್ರಸನ್ನಕುಮಾರ್ ಯಾರು?; ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನೆ - Akhanda Srinivasa Murthy news

ಜಮೀರ ಅಣ್ಣ ಹುಲಿ ಇದ್ದಹಾಗೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಪಡುತ್ತಿದ್ದಾರೆ. ಪಕ್ಷ ಕಟ್ಟುವುದಕ್ಕೆ ಪ್ರಸನ್ನ ಕುಮಾರ್ ಕೈ ಜೋಡಿಸಿದ್ರೆ ಸ್ವಾಗತ. ಅದರ ಬದಲು ಅವನು ಇವನು ಅಂತ ಏಕ ವಚನದಲ್ಲಿ ಮಾತಾಡುವುದು ಸರಿಯಲ್ಲ. ನಿನ್ನೆ ಮೊನ್ನೆ ಬಂದು ಟಿಕೆಟ್ ನಿರ್ಧಾರ ಮಾಡಲು ಪ್ರಸನ್ನಕುಮಾರ್ ಯಾರು ಎಂದು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನಿಸಿದ್ದಾರೆ.

ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ
ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ
author img

By

Published : Mar 1, 2021, 6:28 PM IST

ಬೆಂಗಳೂರು: ನಿನ್ನೆ ಮೊನ್ನೆ ಬಂದು ಟಿಕೆಟ್ ನಿರ್ಧಾರ ಮಾಡಲು ಪ್ರಸನ್ನಕುಮಾರ್ ಯಾರು? ಟಿಕೆಟ್ ಕೊಡೋಕೆ ಅಧ್ಯಕ್ಷರು, ಸಿಎಲ್​ಪಿ ನಾಯಕರಿದ್ದಾರೆ ಎಂದು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸನ್ನಕುಮಾರ್ ನನ್ನ ವಿರುದ್ಧ ನೀಡಿರುವ ಹೇಳಿಕೆಯಲ್ಲಿ ಏಕವಚನ ಪದಪ್ರಯೋಗ ಮಾಡಿದ್ದಾರೆ. ಆಡಿಯೋ ಲೀಕ್ ವಿಚಾರ ಪ್ರಸ್ತಾಪ ಮಾಡಿ, ಇದನ್ನು ನಾನು ಮಾಧ್ಯಮದಲ್ಲಿ ನೋಡಿದೆ. ನನಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಸಮುದ್ರ ಇದ್ದಂತೆ. ಯಾರು ಬೇಕಾದ್ರು ಬರಬಹುದು. ಆದ್ರೆ ಅವರ ಕೆಲಸ ಮಾಡಲಿ. ಸುಮ್ಮನೆ ಹೇಳಿಕೆ ಕೊಡೋದು ಬೇಡ ಎಂದು ಮಾಜಿ ಶಾಸಕ ಪ್ರಸನ್ನ ಮೇಲೆ ಅಖಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನೆ

ಜಮೀರ ಅಣ್ಣ ಹುಲಿ ಇದ್ದಹಾಗೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಪಡುತ್ತಿದ್ದಾರೆ. ಪಕ್ಷ ಕಟ್ಟುವುದಕ್ಕೆ ಪ್ರಸನ್ನ ಕುಮಾರ್ ಕೈ ಜೋಡಿಸಿದ್ರೆ ಸ್ವಾಗತ. ಅದರ ಬದಲು ಅವನು ಇವನು ಅಂತ ಏಕ ವಚನದಲ್ಲಿ ಮಾತಾಡುವುದು ಸರಿಯಲ್ಲ. ಅವರು ಶಾಸಕರಾಗಿದ್ದವರು, ಅವರಿಗೆ ಇದು ಶೋಭೆ ತರಲ್ಲ ಎಂದರು.

ಸಿದ್ದರಾಮಯ್ಯ ಅವರ ಜೊತೆ ದೆಹಲಿಗೆ ಹೋಗಿ ದೂರು ಕೊಡುತ್ತೇನೆ. ಇಲ್ಲಿ ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಸಂಪತ್ ರಾಜ್ ಅಪರಾಧಿ ಅಂತ ಎಲ್ಲರಿಗೂ ಗೊತ್ತು. ಇದಕ್ಕೆ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗುತ್ತೇನೆ. ನಾನು ಒಂದು ಕ್ಷೇತ್ರದ ಶಾಸಕ, ನಾನು ಯಾಕೆ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲಿ. ನನ್ನ ಕ್ಷೇತ್ರದ ಜನ ನನ್ನ ಜೊತೆಗೆ ಇದ್ದಾರೆ. ಮುಂದೆಯೂ ನಾನೇ ನನ್ನ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಸಿದ್ದರಾಮಯ್ಯ ಅವರು ಶೇ 200 ರಷ್ಟು ನನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದಾರಂತೆ.

ಓದಿ:ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ.. ಏನಿರಲಿದೆ 'ಚರ್ಚಾ' ವಿಷಯ?

ನಾನು ಬಿಜೆಪಿಗೂ ಹೋಗಲ್ಲ ಎಲ್ಲಿಗೂ ಹೋಗಲ್ಲ. ಮಾತಾಡದಿದ್ರೆ ನಡೆಯಲ್ವಲ್ಲಣ್ಣ, ಅದಕ್ಕೆ ಮಾತಾಡುತ್ತಿದ್ದೇನೆ. ನಾನು ಸೈಲೆಂಟ್ ಆಗಿರುವುದಕ್ಕೆ ಹೀಗೆ ಆಗ್ತಿದೆ. ನನಗೆ ತೊಂದ್ರೆ ಕೊಡುತ್ತಿದ್ದಾರೆ. ಮೊದಲಿನಿಂದಲೂ ನಾನು ಸಾಫ್ಟ್ ಆಗಿದ್ದೀನಿ. ನಾನಾಯ್ತು ನನ್ನ ಕೆಲಸ ಆಯ್ತು ಅಂತ ಇದ್ದೀನಿ. ನನ್ನ ರಕ್ಷಣೆಗೆ ಸಿದ್ದರಾಮಯ್ಯ ಅವರು ಬರ್ಬೇಕು. ನನ್ನ ಕ್ಷೇತ್ರಕ್ಕೆ ಪರಮೇಶ್ವರ್‌ ಏಕೆ ಬರಬೇಕು? ನಾನು ಪುಲಿಕೇಶಿನಗರ ಕ್ಷೇತ್ರದ ಹಾಲಿ ಶಾಸಕ. ನಾನೇಕೆ ಕ್ಷೇತ್ರ ಬಿಟ್ಟು ಕೊಡಲಿ, ಪಕ್ಷದ ಅಧ್ಯಕ್ಷರು ಇದುವರೆಗೂ ನನ್ನ ಬೆಂಬಲಕ್ಕೆ ನಿಂತಿಲ್ಲ. ನಮ್ಮನ್ನ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಕರೆದುಕೊಂಡು ಬಂದಿದ್ದಾರೆ. ನಾನು ಜಮೀರ್ ಸಾಹೇಬ್ರು, ಚೆಲುವರಾಯಸ್ವಾಮಿ, ಬಾಲಕೃಷ್ಣ ಸೇರಿ ಹಲವರು ಸೇರಿ ಕಾಂಗ್ರೆಸ್ ಪಕ್ಷಕ್ಕೆ ಬಂದ್ವಿ, ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ್ವಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.