ETV Bharat / state

ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆ ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ

ರಾಜ್ಯದಲ್ಲಿ ಪ್ರಸಕ್ತ ವರ್ಷ ಮಳೆ ಕೊರತೆ ಭೀತಿ ಎದುರಾಗಿದೆ. ವಿದ್ಯುತ್ ಉತ್ಪಾದನೆ ಕುಂಠಿತವಾಗುವ ಆತಂಕ ಮೂಡಿದೆ. ಬರುವ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಖರೀದಿಸುವ ಅನಿವಾರ್ಯ ಎದುರಾಗುವ ಸಂಭವ ಗೋಚರಿಸಿದೆ.

Congress guarantee
ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆಯೇ ಎಸ್ಕಾಂಗಳಿಗೆ ವಿದ್ಯುತ್ ಖರೀದಿಯ ಹೊರೆ..
author img

By

Published : Jun 13, 2023, 7:21 PM IST

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಿಳಂಬವಾಗುತ್ತಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿಯಲು ಆರಂಭಿಸಿದೆ. ಕಳೆದ ಮೂರು ವರ್ಷಗಳಿಂದ ಉತ್ತಮ‌ ಮುಂಗಾರು ಕಂಡಿದ್ದ ಕರುನಾಡಿಗೆ ಈ ಬಾರಿ ಮಳೆಯ ಕೊರತೆಯ ಭೀತಿ ಇದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗುವ ಆತಂಕ ಉಂಟಾಗಿದ್ದು, ಮುಂದೆ ಹೆಚ್ಚಿನ ವಿದ್ಯುತ್ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಉಚಿತ ವಿದ್ಯುತ್ ಗ್ಯಾರಂಟಿ ಹೊರೆಯ ಮಧ್ಯೆ ಈ ಬಾರಿ ರಾಜ್ಯ ಸರ್ಕಾರದ ಮೇಲೆ ವಿದ್ಯುತ್ ಕೊರತೆ, ಹೆಚ್ಚು ವಿದ್ಯುತ್ ಖರೀದಿ ಹೊರೆಯ ತೂಗುಗತ್ತಿಯೂ ನೇತಾಡುತ್ತಿದೆ.

ಈ ಬಾರಿ ರಾಜ್ಯದಲ್ಲಿ ಆರಂಭಿಕ ಪೂರ್ವ ಮುಂಗಾರಿನ ಕೊರತೆ ಎದುರಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಾಗುತ್ತಿದೆ. ಹೀಗಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿಯೇ ಇತ್ತು. ಆದರೆ, ಈ ಸಲ ಪೂರ್ವ ಮುಂಗಾರು ಮಳೆ ಕೈಕೊಟ್ಟಿದೆ. ಇತ್ತ ಮುಂಗಾರು ಮಳೆಯ ಆಗಮನವೂ ವಿಳಂಬವಾಗಿದೆ. ಇದರಿಂದ ಈಗಾಗಲೇ ಜಲಾಶಯಗಳ ನೀರಿನ ಮಟ್ಟ ಕುಸಿತ ಕಾಣುತ್ತಿದೆ.‌

ಪ್ರಸ್ತುತ ಮಳೆಯ ಕೊರತೆ ಎದುರಾಗುವ ಆತಂಕ ಕಂಡುಬರುತ್ತಿದ್ದು, ವಿದ್ಯುತ್ ಉತ್ಪಾದನೆ‌ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಗೋಚರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ದುಪ್ಪಟ್ಟಾಗಿದೆ. ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ 243 MU ಇದೆ. ಇತ್ತ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿರುವ ಕಾರಣ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ ಕಡಿಮೆಯಾಗುವ ಆತಂಕ ಸೃಷ್ಟಿಯಾಗಿದೆ. ಜಲ ವಿದ್ಯುತ್ ಘಟಕಗಳಿಂದ ಉತ್ಪಾದನೆ ಕಡಿಮೆಯಾದರೆ, ಕಲ್ಲಿದ್ದಲು ವಿದ್ಯುತ್ ಘಟಕಗಳನ್ನೇ ಹೆಚ್ಚಿಗೆ ನೆಚ್ಚಿಕೊಳ್ಳುವ ಅನಿವಾರ್ಯತೆ ಇದೆ. ಜೊತೆಗೆ ವಿದ್ಯುತ್ ಅಭಾವ ಸರಿದೂಗಿದಲು ವಿದ್ಯುತ್ ಖರೀದಿಯ ಅನಿವಾರ್ಯತೆಯೂ ಎದುರಾಗಿದೆ. ಅಷ್ಟಕ್ಕೂ ಉಚಿತ ವಿದ್ಯುತ್ ಗ್ಯಾರಂಟಿ ಮಧ್ಯೆ ಎಸ್ಕಾಂಗಳ ಮೇಲಿನ ವಿದ್ಯುತ್ ಖರೀದಿಯ ಹೊರೆ ಏನಿದೆ ಎಂಬ ವರದಿ ಇಲ್ಲಿದೆ.

ವಿದ್ಯುತ್ ಖರೀದಿ ಅನಿವಾರ್ಯತೆ: ಈ ಬಾರಿ ಮಳೆ ಕೈಕೊಟ್ಟರೆ ಹೆಚ್ಚಿನ ವಿದ್ಯುತ್ ಖರೀದಿ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಕೊರತೆ ರಾಜ್ಯ ಸರ್ಕಾರವನ್ನು ಕಂಗೆಡಿಸುವಂತೆ ಮಾಡಿದೆ. ಮುಂಗಾರು ಕೊರತೆ ಇದೇ ರೀತಿ ಮುಂದುವರಿದರೆ ರಾಜ್ಯದ ವಿದ್ಯುತ್ ಉತ್ಪಾದನೆ ಕುಂಠತವಾಗಲಿದ್ದು, ವಿದ್ಯುತ್ ಕೊರತೆ ಎದುರಾಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಕೊರತೆ ಸರಿದೂಗಿಸಲು ಹೆಚ್ಚಿನ ವಿದ್ಯುತ್ ಖರೀದಿ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಮಾರಾಟ ಮಾಡುತ್ತಿತ್ತು.‌ ಇತ್ತ ವಿದ್ಯುತ್ ಖರೀದಿಯತ್ತ ಹೆಚ್ಚಿನ ಅನಿವಾರ್ಯ ಬಂದೊದಗಿರಲಿಲ್ಲ.‌

ಇಂಧನ ಇಲಾಖೆ ನೀಡಿದ ಅಂಕಿಅಂಶದಂತೆ 2018-19ರಲ್ಲಿ ರಾಜ್ಯ ಸರ್ಕಾರ 394.17 ಕೋಟಿ ವೆಚ್ಚದಲ್ಲಿ 966.09 ಎಂ.ಯು. ವಿದ್ಯುತ್ ಖರೀದಿಸಿತ್ತು. 2019-20ರಲ್ಲಿ ಒಟ್ಟು ರಾಜ್ಯದಲ್ಲಿ ಎಥೇಚ್ಚ ವಿದ್ಯುತ್ ಇದ್ದ ಕಾರಣ ಖರೀದಿ ಮಾಡಿರಲಿಲ್ಲ. 1920-21ರಲ್ಲಿ ತಾತ್ಕಾಲಿಕ ವಿದ್ಯುತ್ ಕೊರತೆ ನೀಗಿಸಲು 4.83 ಎಂ.ಯು. ವಿದ್ಯುತ್ ಮಾತ್ರ ಖರೀದಿ ಮಾಡಿತ್ತು. 2022-23ರಲ್ಲಿ ಸುಮಾರು 600 ಎಂ.ಯುಗೂ ಹೆಚ್ಚು ವಿದ್ಯುತ್ ಖರೀದಿ ಮಾಡಲಾಗಿತ್ತು. 2023-24 ಸಾಲಿನಲ್ಲಿ ಈವರೆಗೆ ಎಸ್ಕಾಂಗಳು ಸುಮಾರು 311 ಎಂ.ಯು ವಿದ್ಯುತ್ ಖರೀದಿ ಮಾಡಿದೆ.

ಖರೀದಿ ಹೊರೆ- ಬೆಸ್ಕಾಂ: ಏಪ್ರಿಲ್ 2022ರಲ್ಲಿ ಕೆಇಆರ್ ಸಿ ವಿದ್ಯುತ್ ಶುಲ್ಕ ಆದೇಶದಲ್ಲಿ ಬೆಸ್ಕಾಂಗೆ 20,983.74 ಕೋಟಿ ರೂ.ವೆಚ್ಚದ ವಿದ್ಯುತ್ ಖರೀದಿ ವೆಚ್ಚಕ್ಕೆ ಅನುಮೋದನೆ ನೀಡಿತ್ತು.‌ ಇದೇ ಹಣಕಾಸು ವರ್ಷ 2024 ಪ್ರಸ್ತಾವನೆಯಲ್ಲಿ ಬೆಸ್ಕಾಂ ಕೆಇಆರ್ ಸಿ ಮುಂದೆ ಒಟ್ಟು 24,187.36 ಕೋಟಿ ರೂ. ವಿದ್ಯುತ್ ಖರೀದಿಯ ಪ್ರಸ್ತಾವನೆ ಇಟ್ಟಿದೆ.

ಮೆಸ್ಕಾಂ: ಏಪ್ರಿಲ್ 2022ರಲ್ಲಿ ಕೆಇಆರ್​ಸಿ ತನ್ನ ವಿದ್ಯುತ್ ಶುಲ್ಕ ಆದೇಶದಲ್ಲಿ ಮೆಸ್ಕಾಂಗೆ 2810.04 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಗೆ ಅನುಮೋದನೆ ನೀಡಿತ್ತು. ಇದೇ ಹಣಕಾಸು ವರ್ಷ 2024ರಲ್ಲಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಮೆಸ್ಕಾಂ ವಿದ್ಯುತ್ ಖರೀದಿ ವೆಚ್ಚ 3,787.41 ಕೋಟಿ ರೂ. ಎಂದು ಉಲ್ಲೇಖಿಸಿದೆ.

ಚೆಸ್ಕಾಂ: ಏಪ್ರಿಲ್ 2022ರಲ್ಲಿ ಕೆಇಆರ್​ಸಿ ವಿದ್ಯುತ್ ಶುಲ್ಕ ಆದೇಶದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂ. (ಚಸ್ಕಾಂ)ಗೆ 4095.73 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಖರೀದಿಗೆ ಅನುಮೋದನೆ ನೀಡಿತ್ತು. ಪ್ರಸಕ್ತ ಹಣಕಾಸು ವರ್ಷ 2024ರ ಚಸ್ಕಾಂ ಸಲ್ಲಿಸಿದ ಪ್ರಸ್ತಾವನೆಯಲ್ಲಿ 4,603.20 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಯ ಮಾಹಿತಿ ನೀಡಿದೆ.

ಹೆಸ್ಕಾಂ: ಏಪ್ರಿಲ್ 2022ರಲ್ಲಿ ಕೆಇಆರ್​ಸಿ ತನ್ನ ವಿದ್ಯುತ್ ಶುಲ್ಕ ಆದೇಶದಲ್ಲಿ ಹೆಸ್ಕಾಂಗೆ 7,865.42 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಗೆ ಸಮ್ಮತಿ ನೀಡಿತ್ತು. ಈಗ ಹಣಕಾಸು ವರ್ಷ 2024ರಲ್ಲಿ ಹೆಸ್ಕಾಂ 7,709.80 ಕೋಟಿ ರೂ. ವಿದ್ಯುತ್ ಖರೀದಿ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಜೆಸ್ಕಾಂ: ಏಪ್ರಿಲ್ 2022ರಲ್ಲಿ ಕೆಇಆರ್​ಸಿ ತನ್ನ ವಿದ್ಯುತ್ ಶುಲ್ಕ ಆದೇಶದಲ್ಲಿ ಜೆಸ್ಕಾಂಗೆ 4,971.54 ಕೋಟಿ ರೂ. ವಿದ್ಯುತ್ ಖರೀದಿಗೆ ಅನುಮೋದನೆ ನೀಡಿತ್ತು. ಇದೇ ಹಣಕಾಸು ವರ್ಷ 2024ರಲ್ಲಿ ಜೆಸ್ಕಾಂ ಸುಮಾರು 6,188.53 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದೆ.

ಇದನ್ನೂ ಓದಿ: Electricity Bill: ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಗೊಂದಲ ಇದೆ - ಸಚಿವ ಸತೀಶ್​ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.