ETV Bharat / state

ಆಗಸ್ಟ್​ನಿಂದ ಮನೆ ಬೆಳಗಲಿದೆ ಗೃಹಜ್ಯೋತಿ.. 200 ಯೂನಿಟ್​ ಮೀರಿದ್ರೆ ಸಂಪೂರ್ಣ ಬಿಲ್ ಕಟ್ಟಿ​ - ಸಚಿವ ಜಾರ್ಜ್​ - ಬೆಸ್ಕಾಂ ಅಧಿಕಾರಿಗಳ ಜೊತೆ ಇಂಧನ ಸಚಿವ ಜಾರ್ಜ್​ ಸಭೆ

ಉಚಿತ ವಿದ್ಯುತ್ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಜೊತೆ ಇಂಧನ ಸಚಿವ ಕೆ ಜೆ ಜಾರ್ಜ್​ ಸಭೆ ನಡೆಸಿದ್ದಾರೆ. ​

ಕೆ ಜೆ ಜಾರ್ಜ್
ಕೆ ಜೆ ಜಾರ್ಜ್
author img

By

Published : Jun 7, 2023, 12:24 PM IST

Updated : Jun 7, 2023, 2:59 PM IST

ಬೆಂಗಳೂರು: ಕಾಂಗ್ರೆಸ್​ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಉಚಿತ ವಿದ್ಯುತ್​ನ 'ಗೃಹಜ್ಯೋತಿ' ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆ ಉಚಿತ ವಿದ್ಯುತ್ ಯೋಜನೆಯ ಸಾಧಕ ಬಾಧಕಗಳ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್​ ಅವರು ಇಂದು ಬೆಸ್ಕಾಂ ಅಧಿಕಾರಿಗಳ ‌ಜೊತೆ ಕೆ ಆರ್ ಸರ್ಕಲ್‌ನಲ್ಲಿರುವ ಬೆಳಕು ಭವನದ ಕಟ್ಟಡದಲ್ಲಿ ಸಭೆ ಕೈಗೊಂಡಿದ್ದರು. ಸಭೆಯಲ್ಲಿ ಬೆಸ್ಕಾಂ ಎಂ ಡಿ ಮಹಾಂತೇಶ್ ಬೀಳಗಿ ಹಾಗೂ ತಾಂತ್ರಿಕ ನಿರ್ದೆಶಕ ಎಚ್ ರಮೇಶ್ ಇನ್ನಿತರರು ಭಾಗಿಯಾಗಿದ್ದರು.

ಸಭೆ ಬಳಿಕ ಮಾಧ್ಯಮಗೋಷ್ಟಿ ನಡೆಸಿದ ಸಚಿವರು, "ಗೃಹ ಜ್ಯೋತಿ ಯೋಜನೆ‌ ಅನೌನ್ಸ್ ಮಾಡಿದ್ದೇವೆ. ಅಗಸ್ಟ್ ನಿಂದ ಈ‌ ಯೋಜನೆ‌ಯ ಲಾಭ ಸಿಗಲಿದೆ. 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆಯಾದರೆ ಸಂಪೂರ್ಣ ಬಿಲ್‌ ಕಟ್ಟಬೇಕು. ಉಚಿತ ವಿದ್ಯುತ್ ಪಡೆಯಲು ರಿಜಿಸ್ಟ್ರೇಷನ್ ಅಗತ್ಯ. ಸೇವಾ ಸಿಂಧೂ ಪೋರ್ಟಲ್​ ನಲ್ಲಿ ಗೃಹಜ್ಯೋತಿ ಆಯ್ಕೆಯಲ್ಲಿ ಮೊದಲು ಅಧಾರ್ ನಂಬರ್ ನಮೂದು ಮಾಡಬೇಕು. ಅಗತ್ಯ ದಾಖಲೆ ಅಪ್ಲೋಡ್ ಮಾಡಬೇಕು. ಆಧಾರ್ ಲಿಂಕ್‌ ಆಗಿರುವ ನಂಬರಿಗೆ ಮೆಸೇಜ್ ಬರಲಿದೆ. ಇಷ್ಟು ಮಾಡಿ ಪೋರ್ಟಲ್ ಅಪ್ರೂವ್ ಸಕ್ಸಸ್ ಫುಲ್ ಆದರೆ ಉಚಿತ ವಿದ್ಯುತ್​ ಗೆ ಅರ್ಹರು ಎಂದರು.

ಇನ್ನು ಬಾಡಿಗೆದಾರರು ಉಚಿತ ವಿದ್ಯುತ್ ಪಡೆಯಲು‌ ಇನ್ನೆರಡು ದಿನಗಳಲ್ಲಿ ಗೈಡ್ ಲೈನ್ಸ್ ಜಾರಿಯಾಗಲಿದೆ. ಬಾಡಿಗೆದಾರರೂ ಕೂಡ ಉಚಿತ ವಿದ್ಯುತ್ ಪಡೆಯಲು ರಿಜಿಸ್ಟರ್ ಮಾಡಬಹುದು. ರೆಂಟಲ್ ಎಗ್ರಿಮೆಂಟ್, ವೋಟರ್ ಐಡಿ ಅಥವಾ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ನೀಡಬಲ್ಲ ದಾಖಲೆ ಬೇಕು. ಬೋಗಸ್ ರೆಂಟಲ್ ಅಗ್ರಿಮೆಂಟ್ ಮಾಡಿ ಅರ್ಜಿ ಹಾಕಿ ಸಾಬೀತಾದರೆ ಉಚಿತ ವಿದ್ಯುತ್ ರದ್ದು.

ಬೇರೆ ರಾಜ್ಯದಿಂದ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿದ್ದರೂ ಕೂಡ ಉಚಿತ ವಿದ್ಯುತ್ ಪಡೆಯಲು ಅರ್ಹರು. ಆಧಾರ್ ಕಾರ್ಡ್, ವೋಟರ್ ಐಡಿ ಮೂಲ‌ ವಿಳಾಸ ಅಂತಾರಾಜ್ಯ ಇದ್ದರೂ ಅಧಾರ್ ಕಾರ್ಡ್ ಹಾಗೂ ರೆಂಟಲ್ ಅಗ್ರಿಮೆಂಟ್ ಇದ್ದರೆ ಅಪ್ಲೈ ಮಾಡಬಹುದು' ಎಂದರು.

ಇನ್ನು ನಿನ್ನೆ ದಿನ ರಾಜ್ಯ ಸರ್ಕಾರ 'ಗೃಹಜ್ಯೋತಿ' ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ.

ಯೋಜನೆ ಸೌಲಭ್ಯ ಪಡೆಯುವುದು ಹೇಗೆ?: ಗೃಹ ಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯಡಿಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಗೃಹಜ್ಯೋತಿ ಯೋಜನೆ ಷರತ್ತು : ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ.

  • ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್​ನ್ನು ನಮೂದಿಸಲಾಗುತ್ತದೆ. 200 ಯೂನಿಟ್​ ಬಳಕೆ ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್​ ಪಾವತಿಸಬೇಕು.
  • ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್​ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡಲಾಗುತ್ತದೆ ಹಾಗೂ ಗ್ರಾಹಕರು net bill ಅನ್ನು ಪಾವತಿಸಬೇಕು.
  • ಅರ್ಹ ಯುನಿಟ್/ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್​​ ನೀಡಲಾಗುತ್ತದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಪ್ರತಿ ಫಲಾನುಭವಿಯು ತನ್ನ customer ID/Account ID ಕಡ್ಡಾಯವಾಗಿ ಆಧಾರ್​​ಗೆ ಜೋಡಣೆ ಮಾಡಬೇಕು. ಪ್ರಸ್ತುತ ಜಾರಿಯಲ್ಲಿರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳೂ ಈ ಯೋಜನೆಯಲ್ಲಿ ಸೇರಬಹುದು.
  • 2023ರ ಜೂನ್ 20ರ ಅಂತ್ಯಕ್ಕೆ (ಜೂನ್​ನಲ್ಲಿ ಬಳಸಿದ ವಿದ್ಯುತ್​​ಗೆ ಜುಲೈನಲ್ಲಿ ನೀಡುವ ವಿದ್ಯುತ್ ಬಿಲ್ ಸೇರಿದಂತೆ) ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತದೆ.
  • ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
  • ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮೀಟರ್ ಇದ್ದಲ್ಲಿ ಒಂದು ಮೀಟರ್​ಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 'ಗೃಹ ಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ : ಮಾರ್ಗಸೂಚಿ ಹೀಗಿದೆ

Last Updated : Jun 7, 2023, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.