ಬೆಂಗಳೂರು: ಜನ ಹೊಸದನ್ನು ಬಯಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡುವಂತೆ ಕೇಳಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ ಮತದಾನದದ ನಂತರ ಪ್ರತಿಕ್ರಿಯಿಸಿದರು.
ಇನ್ನು ಇದಕ್ಕೂ ಮೊದಲು ಮತಗಟ್ಟೆಯಲ್ಲಿ ಪವರ್ ಕಟ್ ಆದ ಬಗ್ಗೆ ಮಾತಾನಾಡಿದ ಅವರು, ಬೆಸ್ಕಾಂನವರು ಸ್ವಲ್ಪ ಎಚ್ಚರ ವಹಿಸಬೇಕಿತ್ತು. ನಿಮ್ಮ ಕ್ಯಾಮೆರಾ ಲೈಟ್ಗಳು ಇರಲಿಲ್ಲ ಅಂದಿದ್ರೆ ಬಹಳ ಕಷ್ಟ ಆಗ್ತಿತ್ತು. ಕೊರೊನಾ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಮತದಾನ ಮಾಡಿ. ಎಲ್ಲರೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತ ಚಲಾವಣೆ ಮಾಡಿ ಎಂದು ಅವರು ತಿಳಿಸಿದರು.
ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ: ಜ್ಞಾನಜ್ಯೋತಿ ನಗರದ ಹೆಚ್.ಎಂ.ಆರ್ ಕಾನ್ವೆಂಟ್ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮತದಾನ ಆರಂಭವಾದ ಬೆಳಗ್ಗೆ 7ರಿಂದ 5 ಬೂತ್ಗಳಲ್ಲಿಯೂ ನಿರಂತರ ಮತದಾನವಾಗುತ್ತಿದೆ. ಕೊರೊನಾ ನಡುವೆಯೂ ಮತದಾನಕ್ಕೆ ಜ್ಞಾನಜ್ಯೋತಿ ನಗರದ ಮಂದಿ ಆಸಕ್ತಿ ತೋರಿದ್ದಾರೆ. ಯುವಕರು, ವಯೋವೃದ್ಧರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.