ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ದರ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನೈಸ್ ರಸ್ತೆಯ ಟೋಲ್ ದರ ಹೆಚ್ಚಳದ ಶಾಕ್ ಎದುರಾಗಿತ್ತು. ಆದರೆ ಸದ್ಯ ಸಂಸ್ಥೆಯು ದರ ಏರಿಕೆಯನ್ನು ಮುಂದೂಡಿದ್ದರಿಂದ ಪ್ರಯಾಣಿಕರಿಗೆ ರಿಲೀಫ್ ಸಿಕ್ಕಿದೆ.
ಬೆಂಗಳೂರಿನ ನೈಸ್ ರಸ್ತೆ ಟೋಲ್ (ದರ/ಸುಂಕ)ವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ. ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ ಟೋಲ್ ದರ 45 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಮಂಗಳೂರಿನಲ್ಲಿ ಭಾರಿ ಮಳೆ- ಜನಜೀವನ ಅಸ್ತವ್ಯಸ್ಥ: ದೇವಸ್ಥಾನ, ಮನೆಗಳಿಗೆ ನುಗ್ಗಿದ ನೀರು
ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್ಗಳಿಗೆ 35, ಬೈಕ್ಗಳಿಗೆ 12 ರೂ., ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್ಗಳಿಗೆ 25ರೂ., ಬೈಕ್ಗಳ ಟೋಲ್ ದರ 8 ರೂ.ಗೆ ಏರಿಸುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು. ಆದ್ರೆ ಈ ದರ ಏರಿಕೆಯನ್ನು ಸಂಸ್ಥೆ ಮುಂದೂಡಿದೆ.