ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಮೂಲ್ಯ ಲಿಯೋನ್ ಪೊಲೀಸರು ನಡೆಸಿದ ವಿಚಾರಣೆ ವೇಳೆ ಕೆಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾಳೆ.
ಬಸವೇಶ್ವರ ನಗರ ಪೊಲೀಸರ ವಶದಲ್ಲಿದ್ದ ಅಮೂಲ್ಯ, ಆಯೋಜಕರು ಕರೆಯದೆ ನಾ ಹೇಗೆ ಕಾರ್ಯಕ್ರಮಕ್ಕೆ ಬರಲು ಆಗುತ್ತೆ? ಸಿಎಎ ಕುರಿತು ಸಭೆ ಇದೆ ಎಂದು ಜೆಡಿಎಸ್ ಸದಸ್ಯ ಇಮ್ರಾನ್ ಪಾಷ ಅವರ ಕಡೆಯ ವ್ಯಕ್ತಿಯೊಬ್ಬರು ಕರೆದಿದ್ದರು ಎಂದು ತಿಳಿಸಿದ್ದಾಳೆ.
ಅಲ್ಲದೇ ನನಗೆ ಭಾಷಣ ಮಾಡಲು ಅನುಮತಿ ಕೊಟ್ಟಿದ್ರು. ನಾನು ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದೆ. ಹಿಂದೆ ಈ ರೀತಿಯ ಸಭೆಗಳಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದೆ. ನಾನು ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳುವಾಗ ಆಯೋಜಕರು ಮೈಕ್ ತೆಗೆದುಕೊಂಡ್ರು. ಆದ್ರೆ ನನಗೆ ಸಂಪೂರ್ಣ ಭಾಷಣ ಮಾಡಲು ಅವಕಾಶ ಕೊಟ್ಟಿಲ್ಲ. ಅವಕಾಶ ಕೊಟ್ಟಿದ್ರೆ ನಾನು ಬೇರೆ ಏನೋ ಹೇಳುತ್ತಿದ್ದೆ ಎಂದಿದ್ದಾಳೆ.
ಆಗ ಎಲ್ಲರಿಗೂ ನಾನು ಏನನ್ನು ಹೇಳಬೇಕೆಂದಿದ್ದೆ ಎಂಬುದು ತಿಳಿಯುತ್ತಿತ್ತು. ಆದ್ರೆ ನನ್ನನ್ನು ಅರ್ಧಕ್ಕೆ ತಡೆದಿದ್ದರಿಂದ ಈ ರೀತಿ ಸಮಸ್ಯೆ ಆಗಿದೆ ಎಂದಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ ಆಯೋಜಕರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.