ETV Bharat / state

9 ತಿಂಗಳ ನಂತರ ಚಾಮರಾಜಪೇಟೆ ಮಗು ಕಳ್ಳಿಯ ಗುರುತು ಪತ್ತೆ! - ಆಟೋದಲ್ಲಿ ಬಂದು ಮಗುವನ್ನು ಕಳ್ಳತನ

2020ರ ಮೇ 29ರಂದು ಸುಮಾರು 3 ಗಂಟೆಗೆ ಹುಟ್ಟಿದ್ದ ಹುಸ್ನಾಬಾನು ಎಂಬಾಕೆಯ‌ ಗಂಡು ಮಗುವಿನ ಕಳ್ಳತನವಾಗಿತ್ತು.‌ ಆಟೋದಲ್ಲಿ ಬಂದು ಮಗುವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ಅಪರಿಚಿತ ಮಹಿಳೆಯ ಹುಡುಕಾಟಕ್ಕಾಗಿ ಇದುವರೆಗೂ 242 ಮಂದಿಯ ಹೇಳಿಕೆ ದಾಖಲು ಮಾಡಲಾಗಿತ್ತು.

portrait-of-a-child-thief-by-chamarajapete-news
9 ತಿಂಗಳ ನಂತರ ಸಿಕ್ಕ ಚಾಮರಾಜಪೇಟೆ ಮಗು ಕಳ್ಳಿಯ ಭಾವಚಿತ್ರ
author img

By

Published : Feb 9, 2021, 4:45 PM IST

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಒಂಬತ್ತು ತಿಂಗಳಾದರೂ ಕಳುವಾಗಿದ್ದ ಮಗುವಿನ‌ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರಲಿಲ್ಲ. ಇನ್ನು‌ ಮಗುವಿನ ಹುಡುಕಾಟಕ್ಕಾಗಿ ಪೊಲೀಸರು ಇದುವರೆಗೂ 242 ಜನರ ವಿಚಾರಣೆ ನಡೆಸಿದ್ದರು.‌ ಆದರೂ ಸಹ ಪೊಲೀಸರಿಗೆ ಯಾವುದೇ ಸಣ್ಣ ಮಾಹಿತಿ‌ ದೊರೆತಿರಲಿಲ್ಲ.

9 ತಿಂಗಳ ನಂತರ ಸಿಕ್ಕ ಚಾಮರಾಜಪೇಟೆ ಮಗು ಕಳ್ಳಿಯ ಗುರುತು ಪತ್ತೆ

ಓದಿ: ಡಿವೈಡರ್​​ಗೆ ಮರಳು ತುಂಬಿದ ಟ್ರಕ್ ಡಿಕ್ಕಿ: ಬೆಂಗಳೂರು-ಹೆಬ್ಬಾಳ ಮಾರ್ಗದಲ್ಲಿ ಟ್ರಾಫಿಕ್ ಜಾಮ್

2020ರ ಮೇ 29ರಂದು ಸುಮಾರು 3 ಗಂಟೆಗೆ ಹುಟ್ಟಿದ್ದ ಹುಸ್ನಾಬಾನು ಎಂಬಾಕೆಯ‌ ಗಂಡು ಮಗುವಿನ ಕಳ್ಳತನವಾಗಿತ್ತು.‌ ಆಟೋದಲ್ಲಿ ಬಂದು ಮಗುವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ಅಪರಿಚಿತ ಮಹಿಳೆಯ ಹುಡುಕಾಟಕ್ಕಾಗಿ ಇದುವರೆಗೂ 242 ಮಂದಿಯ ಹೇಳಿಕೆ ದಾಖಲು ಮಾಡಲಾಗಿತ್ತು. ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ್ದ ಮಹಿಳೆಯಿಂದ ಮಗುವಿನ ಕಳ್ಳತನವಾಗಿದೆ ಎಂಬುದು ಬಯಲಿಗೆ ಬಂದಿದೆ.

portrait-of-a-child-thief-by-chamarajapete-news
9 ತಿಂಗಳ ನಂತರ ಸಿಕ್ಕ ಚಾಮರಾಜಪೇಟೆ ಮಗು ಕಳ್ಳಿಯ ಭಾವಚಿತ್ರ

ನಂತರ ಪ್ರಕರಣವನ್ನ ಬಹಳ‌ ಗಂಭೀರವಾಗಿ ತೆಗೆದುಕೊಂಡಿದ್ದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ, ಮಗುವಿನ ತಾಯಿ, ಆಟೋ ಚಾಲಕ ಸೇರಿ ನಾಲ್ವರು ಕೊಟ್ಟ ಮಾಹಿತಿ ಹಿನ್ನೆಲೆ ಕಳ್ಳತನ‌ ಮಾಡಿದ್ದ ಅಪರಿಚಿತ ಮಹಿಳೆಯ ಚಿತ್ರ ತಯಾರು ಮಾಡಲಾಗಿತ್ತು.‌ ಯಾವುದೇ ಕ್ಲೂ ಇಲ್ಲದಿದ್ದಾಗ ಭಾವಚಿತ್ರದ ಆಧಾರದ ಮೇಲೆ ಪೊಲೀಸರು ತನಿಖೆಗಿಳಿದಿದ್ದರು. ಮಗುವಿನ ಪತ್ತೆಗೆ ಸುಮಾರು 20 ಪೊಲೀಸ್ ಅಧಿಕಾರಿಗಳ ತಂಡ ರಚನೆ ಮಾಡಲಾಗಿತ್ತು.‌ ತನಿಖೆ ವೇಳೆ ಭಾವಚಿತ್ರ ಬಿಡಿಸಿದ್ದ ಮಹಿಳೆಯ ಹಿನ್ನೆಲೆ‌ ದೊರಕಿದ್ದು, ಆಕೆ ಹೆಸರು ರೇಖಾ ಎಂದು ತಿಳಿದು ಬಂದಿದೆ.

ಇನ್ನು ತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಹಾಕಿದ ಪೋಲಿಸರು, ಮಗುವನ್ನು ಕಳ್ಳತನ ಮಾಡಿದ ದಿನ ಮತ್ತೆ ಎರಡು ಆಸ್ಪತ್ರೆಗಳಿಗೆ ಮಗು‌ ಕದಿಯಲು ಹೋಗಿದ್ದ ಕಳ್ಳಿ, ಮೂಡಲಪಾಳ್ಯ, ಬನ್ನೇರುಘಟ್ಟ ರಸ್ತೆಯಲ್ಲಿರೋ ಆಸ್ಪತ್ರೆಗಳಿಗೆ ಭೇಟಿ‌ ನೀಡಿದ್ದಳು. ಆದರೆ ಎರಡೂ ಆಸ್ಪತ್ರೆಗಳಲ್ಲಿ ಮಗು ಸಿಗದ ಕಾರಣಕ್ಕೆ ವಾಪಸ್ ಆಗಿದ್ದಾಳೆ.

ಒಟ್ಟಾರೆ ಮಗು ಕಳ್ಳಿಯಾದ ರೇಖಾಳ ಸ್ಕೆಚ್ ಮಾಡಿಸಿದ್ದೇ ಪೊಲೀಸರಿಗೆ ಸಿಕ್ಕಿದ ಮೇಜರ್ ಕ್ಲೂ. ಕೆಲವೇ ದಿನಗಳಲ್ಲಿ ಈ ಖತರ್ನಾಕ್​ ಕಳ್ಳಿಯನ್ನು ಬಂಧಿಸೋ ವಿಶ್ವಾಸವನ್ನು ಡಿಸಿಪಿ ಹರೀಶ್ ಪಾಂಡೆ ವ್ಯಕ್ತಪಡಿಸಿದ್ದಾರೆ.‌ ಈಗಾಗಲೇ ಮತ್ತಷ್ಟು ಮಕ್ಕಳನ್ನು ಈ ಅಪರಿಚಿತ ಮಹಿಳೆ ಕಳ್ಳತನ ಮಾಡಿರೋ ಶಂಕೆ ಇದ್ದು, ಸದ್ಯ ಪೊಲೀಸರಿಂದ ಮಗುವಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.