ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಹೈಡ್ರಾಮಾ ನಡೆದ ಹಿನ್ನೆಲೆಯಲ್ಲಿ, ಭದ್ರತಾ ಲೋಪವಾಗದಂತೆ ವಿಧಾನಸೌಧ ,ರಾಜಭವನ ಸುತ್ತ ಖಾಕಿ ಕಣ್ಗಾವಲು ಇಡಲಾಗಿದ್ದು, ವಿಧಾನಸೌಧ ಸುತ್ತಾ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಕೆಎಸ್ಆರ್ಪಿ ತುಕಡಿ, ಹೊಯ್ಸಳ , ಹೆಚ್ಚುವರಿ ಪೊಲೀಸ್ ಆಯುಕ್ತ, ಡಿಸಿಪಿ, ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಹೋಮ್ ಗಾರ್ಡ್ಸ್, ಟ್ರಾಫಿಕ್ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ವಿಧಾನಸೌಧದ ಸುತ್ತಮುತ್ತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿನ್ನೆ ಶಾಸಕ ಸುಧಾಕರ್ ರಾಜೀನಾಮೆ ನೀಡುವ ಸಮಯದಲ್ಲಿ ವಿಧಾನಸೌಧದಲ್ಲಿ ಕೋಲಾಹಲ ಸೃಷ್ಠಿಯಾಗಿತ್ತು. ಹೀಗಾಗಿ ಇಂದು ಕೆಲ ಅತೃಪ್ತ ಶಾಸಕರಾದ ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್, ಆನಂದ್ ನ್ಯಾಮೇಗೌಡ, ಶಿವಣ್ಣ, ಗಣೇಶ್ ಹುಕ್ಕೇರಿ ಹಾಗೂ ಮಹಾಂತೇಶ್ ಕೌಜಲಗಿ ರಾಜೀನಾಮೆ ಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಹೀಗಾಗಿ ವಿಧಾನಸೌಧ, ರಾಜಭವನ ಬಳಿ ಬಂದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭದ್ರತೆ ವಹಿಸಿ, ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.