ETV Bharat / state

ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಪೊಲೀಸ್ ಶಾಕ್... 70 ಬೈಕ್ ಸೀಜ್ - kannada news

ಮಧ್ಯರಾತ್ರಿ ವ್ಹೀಲಿಂಗ್ ಪುಂಡರಿಗೆ ಪೊಲೀಸರ ಶಾಕ್. ಡೆಡ್ಲಿ ವ್ಹೀಲಿಂಗ್ ಮಾಡಲು ಬಂದಿದ್ದ ಯುವಕರ 70 ಬೈಕ್ ಸೀಜ್.

ಮಧ್ಯರಾತ್ರಿ ವೀಲಿಂಗ್ ಪುಂಡರಿಗೆ ಪೊಲೀಸರ ಶಾಕ್, ಡೆಡ್ಲಿ ವೀಲಿಂಗ್ ಮಾಡಲು ಬಂದು ಸೀಜ್ ಆಯ್ತು 70 ಬೈಕ್
author img

By

Published : Apr 22, 2019, 12:09 AM IST

Updated : Apr 22, 2019, 8:10 AM IST

ಬೆಂಗಳೂರು: ಮಧ್ಯರಾತ್ರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಸಿಲಿಕಾನ್ ಸಿಟಿ ಯುವಕರ ಸುಮಾರು 70 ಬೈಕ್​ಗಳನ್ನ ಪೊಲಿಸರು ಸೀಜ್ ಮಾಡಿದ್ದಾರೆ.

ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಸಮುದಾಯದವೊಂದರ ಯುವಕರು ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದು ಸ್ಥಳೀಯರಿಗೆ ಕಾಟ ಕೊಡುತ್ತಿದ್ದರಂತೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು, ನಿನ್ನೆ ರಾತ್ರಿ ಸಹ ಇದೇ ರೀತಿ ಮಾಡಲು ಬಂದ ಯುವಕರಿಗೆ ಶಾಕ್ ನೀಡಿದ್ದಾರೆ.

ಮಧ್ಯರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಪೊಲೀಸರ ಶಾಕ್...

ಮಧ್ಯರಾತ್ರಿ ವೀಕೆಂಡ್ ಜೋಶ್​​ನಲ್ಲಿ ಯುವಕರು ಹೈವೆಯಲ್ಲಿ ವ್ಹೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ಕ್ವಾಟ್ಲೆ ಕೊಡುತ್ತಿದ್ದರು.

ಹೀಗಾಗಿ ಕಳೆದ ರಾತ್ರಿ ಬೆಂಗಳೂರು-ಚೆನ್ನೈನ ರಾಷ್ಟ್ರಿಯ ಹೆದ್ದಾರಿ 75 ರಲ್ಲಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಮತ್ತು ನಂದಗುಡಿ ಪೊಲೀಸರು, ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಪುಂಡರ 70 ಕ್ಕೂ ಅಧಿಕ ಬೈಕ್​ಗಳನ್ನ ಸೀಜ್ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ್ದಾರೆ.

ವ್ಹೀಲಿಂಗ್ ಮಾಡಲು ಬೈಕ್ ಕಳ್ಳತನ

ವ್ಹೀಲಿಂಗ್ ಬೈಕ್​ಗಳನ್ನ ಸೀಜ್ ಮಾಡಿದ್ದನ್ನ ತಿಳಿದು ನೋಡಲು ಬಂದ ಯುವಕನೋರ್ವನಿಗೆ ಕಳೆದ 8 ತಿಂಗಳ ಹಿಂದೆ ಬೆಂಗಳೂರಿನ ಟಿನ್ ಪ್ಯಾಕ್ಟರಿಯಲ್ಲಿ ಕಳುವಾಗಿದ್ದ ತನ್ನ ಆರ್ ಎಕ್ಸ್ ಬೈಕ್ ಸಿಕ್ಕಿದ್ದು, ಪುಲ್ ಖುಷಿಯಾಗಿದ್ದಾನೆ.

Intro:ಮಧ್ಯರಾತ್ರಿ ವೀಲಿಂಗ್ ಪುಂಡರಿಗೆ ಪೊಲೀಸರ ಶಾಕ್. ಡೆಡ್ಲಿ ವೀಲಿಂಗ್ ಮಾಡಲು ಬಂದು ಸೀಜ್ ಆಯ್ತು 70 ಬೈಕ್.

ಸಾವಿರಾರು ಮುಸ್ಲಿಂ ಸಮುದಾಯದ ಜನರು ನಿನ್ನೆ ರಾತ್ರಿ ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲ ಗ್ರಾಮದ‌ ಮಸೀದಿ ಯಲ್ಲಿ ಶಬ್ ಇ ಬರಾಟ್ ಹಬ್ಬವನ್ನು‌ ಆಚರಣೆ ಮಾಡಲು ಬಂದಿದ್ದಾರೆ, ಅದರಲ್ಲಿ‌ ನೂರಾರು ಸಿಲಿಕಾನ್ ಸಿಟಿಯ ಕೆಲ ಪುಂಡ ಯುವಕರಿಗೆ ವೀಕೆಂಡ್ ಬಂತು ಅಂದ್ರೆ ಸಾಕು ಎಲ್ಲಿಲ್ಲದ ಜೋಶ್ ಬಂದು ಬಿಡುತ್ತೆ. ಹೀಗಾಗೆ ಮಾಧ್ಯರಾತ್ರಿ ಲಾಂಗ್ ಡ್ರೈವ್ ಅಂತ ಹೊರಡೋ ಪುಂಡರು ಹೆದ್ದಾರಿಯಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಾ ಸವಾರರಿಗೆ ಕ್ವಾಟ್ಲೆ ಕೊಡ್ತಾರೆ. ಇನ್ನೂ ಕಳೆದ ರಾತ್ರಿ ಸಹ ಇದೇ ರೀತಿ ಕ್ವಾಟ್ಲೆ ಕೊಡಲು ಮುಂದಾಗಿದ್ದ ವೀಲಿಂಗ್ ಪುಂಡರಿಗೆ ಪೊಲೀಸರಿಗೆ ಶಾಕ್ ನೀಡಿದ್ದಾರೆ. .

ಹೈವೆಯಲ್ಲಿ ಡೆಡ್ಲಿ ವೀಲಿಂಗ್ ಮಾಡ್ತಾ ವಾಹನ ಸವಾರರಿಗೆ ಕ್ವಾಟ್ಲೆ ಕೊಟ್ಟ ವೀಲಿಂಗ್ ಪುಂಡರು..ಪೊಲೀಸರ ಕೈಗೆ ಸಿಕ್ಕಿ‌ಬಿದ್ದಿದ್ದಾರೆ.
ಪೊಲೀಸರು 70 ಕ್ಕೂ ಅಧೀಕ ವಿವಿಧ ಬಗೆಯ ಬೈಕ್ಗಳು ಸೀಜ್ ಮಾಡಿದ್ದಾರೆ.. ಬೈಕ್ ಬಿಡಿಸಿಕೊಳ್ಳಲು ಸ್ಟೇಷನ್ ಮುಂದೆ ಪರದಾಡಿದ ಯುವಕರು. ಅಂದಹಾಗೆ ಇವರೆಲ್ಲ ಯಾವುದೇ ಕಳ್ಳತನ ಅಥವಾ ಕೊಲೆ ಮಾಡಿ ಪೊಲೀಸರ ಅತಿಥಿಯಾಗೊರೂ ಯುವಕರಲ್ಲ. ಮಧ್ಯರಾತ್ರಿ ವೀಕೆಂಡ್ ಜೋಶ್ ನಲ್ಲಿ ಹೈವೆಯಲ್ಲಿ ವೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ಕ್ವಾಟ್ಲೆ ಕೊಟ್ಟು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರೂ ಪುಂಡರು. ವೀಕೆಂಡ್ ಬಂತು ಅಂದ್ರೆ ಸಾಕು ರಾಷ್ಟ್ರಿಯಾ ಹೆದ್ದಾರಿ 75 ರಲ್ಲಿ ವೀಲೀಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ವೀಲಿಂಗ್ ಪುಂಡರಿಗೆ ಬ್ರೇಕ್ ಹಾಕುವಂತೆ ಸ್ಥಳಿಯರು ಪೊಲೀಸರಿಗೆ ಹಲವು ಭಾರಿ ಮನಃವಿ ಮಾಡಿದ್ರು. ಹೀಗಾಗಿ ಕಳೆದ ರಾತ್ರಿ ಬೆಂಗಳೂರು ಚೈನೈನ ರಾಷ್ಟ್ರಿಯಾ ಹೆದ್ದಾರಿ 75 ರಲ್ಲಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಮತ್ತು ನಂದಗುಡಿ ಪೊಲೀಸರು ಮಧ್ಯರಾತ್ರಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಪುಂಡರ 70 ಕ್ಕೂ ಅಧಿಕ ದ್ವೀಚಕ್ರ ವಾಹನಗಳನ್ನ ಸೀಜ್ ಮಾಡುವ ಮುಖಾಂತರ ವೀಲಿಂಗ್ ಪುಂಡರಿಗೆ ಬಿಸಿ ಮುಟ್ಟಿಸಿದ್ದಾರೆ.

Body:ರಾತ್ರಿ ನಡೆಸಿದ ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ರಾಷ್ಟ್ರಿಯಾ ಹೆದ್ದಾರಿ 75 ರಲ್ಲಿ 70 ಕ್ಕೂ ಅಧೀಕ ಬೈಕ್ಗಳು ಸೀಜ್ ಆಗಿದ್ದು, ಎಲ್ಲಾ ಬೈಕ್ಗಳನ್ನ ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ. ಜತೆಗೆ ಪೊಲೀಸರು ವೀಲಿಂಗ್ ಬೈಕ್ಗಗಳನ್ನ ಸೀಜ್ ಮಾಡಿದ್ದನ್ನ ತಿಳಿದು ನೋಡಲು ಬಂದ ಯುವಕನೋರ್ವನಿಗೆ ಕಳೆದ 8 ತಿಂಗಳಿಂದೆ ಬೆಂಗಳೂರಿನ ಟಿನ್ ಪ್ಯಾಕ್ಟರಿಯಲ್ಲಿ ಕಳುವಾಗಿದ್ದ ಆರ್ ಎಕ್ಸ್ ಬೈಕ್ ಸಿಕ್ಕಿದ್ದು, ಪುಲ್ ಖುಷಿಯಾಗಿದ್ದಾನೆ. ಜತೆಗೆ ಬೈಕ್ ಅನ್ನ ಖದ್ದೀರೂ ಖದೀಮರು ಬೈಕ್ ನ ನಂಬರ್ ಪ್ಲೇಟ್ ಹೊರತುಪಡಿಸಿ ಬಣ್ಣದಿಂದ ಎಲ್ಲಾವನ್ನು ಸೈಲೀಶ್ ಆಗಿ ಬದಲಾಯಿಸಿದ್ದು, ಖಧೀಮರು ಕಳ್ಳತನ ಮಾಡಿ ಬೈಕ್ಗಳಲ್ಲಿ ಶೋಕಿ ಮಾಡ್ತಿದ್ದ ವಿಷಯವು ಬೆಳಕಿಗೆ ಬಂದಿದೆ.

Conclusion:ಒಟ್ಟಾರೆ ಹಲವು ಬಾರಿ ಹಲವು ರೀತಿಯಲ್ಲಿ ವೀಲಿಂಗ್ ಮಾಡದಂತೆ ಬುದ್ದಿ ಹೇಳಿದ್ರು ಬುದ್ದಿ ಕಲಿಯದ ಪುಂಡರಿಗೆ ಹೊಸಕೋಟೆ ಪೊಲೀಸರು ಬಿಸಿ ಮುಟ್ಟಿಸಿದ್ದು, ವೀಲಿಂಗ್ ನಲ್ಲಿ ಸಿಕ್ಕ ಬೈಕ್ಗಳ ದಾಖಲೆಗಳನ್ನ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದು, ಪೊಲೀಸರ ತನಿಖೇಯ ನಂತರ ಇನ್ಯಾವುದಾದ್ರು ಕಳ್ಳತನ ಬೈಕ್ಗಳಿವೆಯ ಅನ್ನೂದು ತಿಳಿಯಲಿದೆ.
Last Updated : Apr 22, 2019, 8:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.