ETV Bharat / state

5ನೇ ದಿನಕ್ಕೆ ಕಾಲಿಟ್ಟ ಲಾಕ್​ಡೌನ್​: ಬೆಂಗಳೂರಲ್ಲಿ 322 ವಾಹನ ಜಪ್ತಿ, ಮೂವರ ವಿರುದ್ಧ FIR​

ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ನಗರ ಪೋಲಿಸರು ಜನರು ಸುಖಾ‌ ಸುಮ್ಮನೆ ಮನೆಯಿಂದ ಹೊರಗೆ ಬಾರದಂತೆ ತಡೆಯಲು ಹಲವು ನಿಯಮಗಳನ್ನು ಸೂಚಿಸಿದ್ದರು. ನಿನ್ನೆಯ ರಂಜಾನ್ ಹಾಗೂ ಬಸವ ಜಯಂತಿ ಹಿನ್ನಲೆ ಜನರು ಓಡಾಡದಂತೆ ಮುಂಚಿತವಾಗಿಯೇ ಸೂಚನೆ ಕೊಟ್ಟಿದ್ದರು.

ಲಾಕ್​ಡೌನ್ ನಿಯಮ ಉಲ್ಲಂಘನೆ
ಲಾಕ್​ಡೌನ್ ನಿಯಮ ಉಲ್ಲಂಘನೆ
author img

By

Published : May 15, 2021, 2:59 AM IST

ಬೆಂಗಳೂರು: ಎರಡನೇ ಅಲೆಯ ಕೊರೊನಾ‌ ಎಲ್ಲೆಡೆ ರಣಕೇಕೆ ಹಾಕಿತ್ತಿದ್ದು, ಸೋಂಕು‌ ಹಬ್ಬುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ.

ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ನಗರ ಪೋಲಿಸರು ಜನರು ಸುಖಾ‌ ಸುಮ್ಮನೆ ಮನೆಯಿಂದ ಹೊರಗೆ ಬಾರದಂತೆ ತಡೆಯಲು ಹಲವು ನಿಯಮಗಳನ್ನು ಸೂಚಿಸಿದ್ದರು. ನಿನ್ನೆಯ ರಂಜಾನ್ ಹಾಗೂ ಬಸವ ಜಯಂತಿ ಹಿನ್ನಲೆ ಜನರು ಓಡಾಡದಂತೆ ಮುಂಚಿತವಾಗಿಯೇ ಸೂಚನೆ ಕೊಟ್ಟಿದ್ದರು.

ಲಾಕ್​ಡೌನ್​ ಸೂಚನೆಗಳನ್ನು ಧಿಕ್ಕರಿಸಿ ರಸ್ತೆಗಿಳಿದವರ ಮೇಲೆ ಪೊಲೀಸರು‌ ಕ್ರಮಕೈಗೊಂಡಿದ್ದಾರೆ. ಲಾಕ್​ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಪ್ರಕಟಣೆ ಬಿಡುಗಡೆ ಮಾಡಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 8ರವರೆಗೆ ಕಾರ್ಯಾಚರಣೆ ನಡೆಸಿ 5ನೇ ದಿನದ ಲಾಕ್‌ಡೌನ್‌ನಲ್ಲಿ ಒಟ್ಟು 322 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ದ್ವಿಚಕ್ರ ವಾಹನ- 292, ಆಟೋ-8 ಹಾಗೂ 22 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರ ವಿರುದ್ಧ ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆಯ ಪ್ರಕರಣ ಮಾಡಲಾಗಿದ್ದು, ಎನ್​ಡಿಎಂಎ ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.