ETV Bharat / state

ಕಂಟೇನ್ಮೆಂಟ್​​​​ ಝೋನ್​​ ನಾಗವಾರಕ್ಕೆ ಪೊಲೀಸ್​ ಅಧಿಕಾರಿಗಳ ಭೇಟಿ, ಪರಿಶೀಲನೆ

ಬೆಂಗಳೂರಿನ ನಾಗವಾರದಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

deedde
ಕಂಟೈನ್​ಮೆಂಟ್ ಝೋನ್​ ನಾಗವಾರಕ್ಕೆ ಪೊಲೀಸ್​ ಅಧಿಕಾರಿಗಳ ಭೇಟಿ, ಪರಿಶೀಲನೆ
author img

By

Published : May 21, 2020, 3:05 PM IST

ಬೆಂಗಳೂರು: ನಾಗವಾರದಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆ ಸದ್ಯ ಏರಿಯಾವನ್ನ ಕಂಟೇನ್ಮೆಂಟ್​​ ವಲಯವನ್ನಾಗಿ ಪರಿಗಣಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ಕೆ.ಜಿ.ಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನಾಗರವಾರ ವಾರ್ಡ್​ನಲ್ಲಿ ನಿನ್ನೆ ಹೊಸದಾಗಿ P-1270 ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದೆ. ಹೀಗಾಗಿ ಪೂರ್ವ ವಿಭಾಗದ ಡಿಸಿಪಿ ಡಾ‌. ಎಸ್.ಡಿ.ಶರಣಪ್ಪ ಭೇಟಿ ನೀಡಿ ‌ಕಂಟೇನ್ಮೆಂಟ್​ ವಲಯದಲ್ಲಿ‌ ಕೈಗೊಂಡಿರುವ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಪರಿಶೀಲನೆ ನ‌ಡೆಸಿದ್ದಾರೆ. ಹಾಗೆಯೇ ಜನರು ವಿನಾ ಕಾರಣ ಓಡಾಟ ನಡೆಸಬಾರದೆಂದು‌ ಎಚ್ಚರಿಕೆ ನೀಡಿದ್ದಾರೆ.

ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ ಸೀಲ್‌ ಡೌನ್ ಮಾಡಿ ಸೋಂಕಿತ ವ್ಯಕ್ತಿಯಿಂದ 3 ಪ್ರಾಥಮಿಕ ಸಂಪರ್ಕಿತರು ಹಾಗೂ 50 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಜನರ ಓಡಾಡಕ್ಕೆ ಬ್ರೇಕ್ ಹಾಕಲು ‌ಹಾಗೂ ಜಾಗೃತಿ ಮೂಡಿಸಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.