ಬೆಂಗಳೂರು: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಹೊತ್ತಿರುವ ಪೊಲೀಸರು, ರಸ್ತೆಯಲ್ಲಿ ಅಪಘಾತಕ್ಕೆ ಸಿಲುಕಿ ಒದಾಡುತ್ತಿದ್ದ ಯುವತಿಯನ್ನ ಕಂಡರೂ ಆಸ್ಪತ್ರೆಗೆ ಕರೆದೊಯ್ಯದೆ ಅಮಾನವೀಯತೆ ಮರೆದಿದ್ದಾರೆ ಎನ್ನಲಾಗಿದೆ.
ಕೆ.ಆರ್.ಮಾರ್ಕೆಟ್ ಮೇಲುಸೇತುವೆ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರು ಆಚಾನಕ್ಕಾಗಿ ಬಿದ್ದು ತ್ರೀವ ಗಾಯಗೊಂಡಿದ್ದರು. ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಕೆಳಗೆ ಬಿದಿದ್ದ ಯುವತಿಯನ್ನು ಉಪಚರಿಸಿದ್ದಾರೆ. ಅನಂತರ ಆಕೆಯನ್ನ ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಅದೇ ಮಾರ್ಗದಲ್ಲಿ ಪೊಲೀಸರು ಕುಳಿತಿದ್ದ ಸರ್ಕಾರಿ ಕಾರು ಬಂದಿದೆ. ಸಾರ್ವಜನಿಕರು ಅಪಘಾತದ ಬಗ್ಗೆ ತಿಳಿಸಿ ಯುವತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿಕೊಂಡರೂ ಆ ಪೊಲೀಸರು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ತೆರಳಿದ್ದಾರೆ ಎನ್ನಲಾಗಿದೆ.
-
#Bengaluru: A woman rider meets with accident on Sirsi Circle flyover and is injured. A senior police officer’s car, which was passing that way, refuses to shift her to nearby hospital. #Outrage. @BalooET @deepolice12 @CPBlr pic.twitter.com/CMd4ot2bcs
— Rakesh Prakash (@rakeshprakash1) October 14, 2019 " class="align-text-top noRightClick twitterSection" data="
">#Bengaluru: A woman rider meets with accident on Sirsi Circle flyover and is injured. A senior police officer’s car, which was passing that way, refuses to shift her to nearby hospital. #Outrage. @BalooET @deepolice12 @CPBlr pic.twitter.com/CMd4ot2bcs
— Rakesh Prakash (@rakeshprakash1) October 14, 2019#Bengaluru: A woman rider meets with accident on Sirsi Circle flyover and is injured. A senior police officer’s car, which was passing that way, refuses to shift her to nearby hospital. #Outrage. @BalooET @deepolice12 @CPBlr pic.twitter.com/CMd4ot2bcs
— Rakesh Prakash (@rakeshprakash1) October 14, 2019
ಇನ್ನು ಈ ಅಮಾನವೀಯ ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಪೊಲೀಸರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
KA.01.G.5958 ನಂಬರ್ನ ಡಸ್ಟರ್ ಕಾರ್ ಇದಾಗಿದ್ದು, ಎಸ್ಪಿಯೊಬ್ಬರಿಗೆ ನೀಡಿರುವ ಕಾರು ಎಂದು ತಿಳಿದು ಬಂದಿದೆ. ಅಪಘಾತ ಆದಾಗ ಕಾರ್ನಲ್ಲಿ ಪೊಲೀಸರು ಇದ್ರಾ? ಅಥವಾ ಇರಲಿಲ್ವಾ ಎಂಬ ಬಗ್ಗೆ ಸಂಚಾರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಇದುವರೆಗೂ ಯಾರೂ ದೂರು ದಾಖಲಿಸಿಲ್ಲ.