ಬೆಂಗಳೂರು: ಮಹಾನಗರದಲ್ಲಿ ಜನತಾ ಕರ್ಫ್ಯೂನಿಂದ ಅದೆಷ್ಟು ಜನರು ದಿಕ್ಕು ತೋಚದಾಗಿದ್ದಾರೆ. ಬಡವರಂತೂ ಎರಡು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಆದರೆ ಈ ಮಧ್ಯೆ ಹಸಿದ ಹೊಟ್ಟೆಗೆ ಅನ್ನ ನೀಡುವ ಮೂಲಕ ಎಸಿಪಿಯೊಬ್ಬರು ಅನ್ನದಾತರಾಗಿದ್ದಾರೆ.
ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ಮಾನವೀಯ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ತಂಡ ರಚಿಸಿ ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರಿಗೆ ಹಾಗೂ ನಿರ್ಗತಿಕರಿಗೆ ಅಹಾರ ಪೊಟ್ಟಣ ಹಾಗೂ ರೇಷನ್ ಕಿಟ್ ನೀಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಓದಿ:ಕೋವಿಡ್ ಪೀಡಿತರಿಗೆ ರಾಜ್ಯ ಸರ್ಕಾರದ ಶಾಕ್: ಚಿಕಿತ್ಸಾ ವೆಚ್ಚ ಹೆಚ್ಚಿಸಿ ಆದೇಶ
ಸದ್ಯ ಕೊರೊನಾ ಕರ್ಫ್ಯೂನಿಂದ ಶ್ರಮಿಕ ವರ್ಗ ತಲ್ಲಣಗೊಂಡಿದೆ. ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ರೈಲ್ವೆ ನಿಲ್ದಾಣ ಹಾಗೂ ಆಸ್ಪತ್ರೆಗಳಿಗೆ ತೆರಳಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ದುಡಿಯುವ ಯುವಕರ ಗುಂಪು ಸೇರಿಸಿಕೊಂಡು ಇವರು ಆಹಾರ ಪೊಟ್ಟಣ ವಿತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.