ETV Bharat / state

ಪೊಲೀಸರಿಂದ ಲಾಠಿ ಪ್ರಹಾರ : ಮಾನವ ಹಕ್ಕು ಉಲ್ಲಂಘನೆ ತಡೆಗೆ ಆಗ್ರಹಿಸಿದ ವಕೀಲ

author img

By

Published : May 10, 2021, 10:30 PM IST

ಸರ್ಕಾರ ಸಾರ್ವಜನಿಕರಿಗೆ ಅಗತ್ಯ ಆಶ್ರಯ, ಆಹಾರ, ಕುಡಿಯುವ ನೀರು, ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲು ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಜನರ ಅಗತ್ಯ ಸಂಚಾರಕ್ಕೂ ನಿರ್ಬಂಧ ವಿಧಿಸುವ ಮೂಲಕ, ಹಿಂಸಿಸುವ ಮೂಲಕ ತೊಂದರೆ ಕೊಡುತ್ತಿದ್ದಾರೆ..

Police Lathi charge
ಪೊಲೀಸರಿಂದ ಲಾಠಿ ಪ್ರಹಾರ

ಬೆಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ನೆಪದಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ.

ಇದನ್ನು ತಡೆಗಟ್ಟಿ ಎಂದು ಕೋರಿ ಸರ್ಕಾರ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವ ವಕೀಲರೊಬ್ಬರು, ಇದನ್ನೇ ಮುಂದುವರೆಸಿದರೆ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ನಗರದ ವಕೀಲ ಎಸ್. ಉಮಾಪತಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪತ್ರದಲ್ಲಿ, ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿಲ್ಲ. ಅಗತ್ಯ ಸೇವೆ ಮತ್ತು ಚಿಕಿತ್ಸೆಗಳಿಗೆ ಸಂಚರಿಸಲು ಅವಕಾಶ ಕೊಟ್ಟಿದೆ. ಹಾಗಿದ್ದೂ ಪೊಲೀಸರು, ಜನರು ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆಯುವ ಮುನ್ನವೇ ದಾಳಿ ಮಾಡುತ್ತಿದ್ದಾರೆ.

ನಾಗರಿಕರ ವಯಸ್ಸು, ಲಿಂಗ, ಸ್ಥಿತಿ ಯಾವುದನ್ನೂ ಲೆಕ್ಕಿಸದೆ ಹಲ್ಲೆ ಮಾಡುತ್ತಿದ್ದಾರೆ. ಇದನ್ನು ದೃಶ್ಯ ಮಾಧ್ಯಮಗಳು ಯತಾವತ್ತಾಗಿ ಬಿತ್ತರಿಸುತ್ತಿವೆ. ಜನರು ಈಗಾಗಲೇ ಕೋವಿಡ್ ಸೋಂಕಿನಿಂದಾಗಿ ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇದನ್ನು ನಾಗರಿಕರ ಮೇಲೆ ಲಾಠಿ ಬೀಸುವ ಮುನ್ನ ಪೊಲೀಸರು ಅರ್ಥ ಮಾಡಿಕೊಳ್ಳಬೇಕಿದೆ.

ಆದರೆ, ಪೊಲೀಸರು ಮಾತ್ರ ಜನ ಯಾವ ಕಾರಣಕ್ಕಾಗಿ ಹೊರಗೆ ಬಂದಿದ್ದಾರೆ ಎಂಬುದನ್ನು ತಿಳಿಯದೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವರ ಮೇಲೆ ದಾಳಿ ಮಾಡುವ ಪೊಲೀಸರು ಕಾರುಗಳಲ್ಲಿ ಸಂಚರಿಸುವವರನ್ನು ಪ್ರಶ್ನಿಸುತ್ತಿಲ್ಲ. ಇಂತಹ ತಾರತಮ್ಯ ತೋರುವ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆಯಡಿ ರೂಪುಗೊಂಡಿರುವ ಸಕ್ಷಮ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಪೊಲೀಸರಿಗೆ ಕೆಲ ಅಧಿಕಾರ ನೀಡಲಾಗಿದೆ. ಐಪಿಸಿ ಸೆಕ್ಷನ್ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51ರಿಂದ 60ರ ಅಡಿ ಮಾತ್ರ ಪೊಲೀಸರು ಅಧಿಕಾರ ಚಲಾಯಿಸುವ ಅಧಿಕಾರ ಹೊಂದಿದ್ದಾರೆಯೇ ಹೊರತು, ಮಾರ್ಗಸೂಚಿಗಳನ್ನು ಜಾರಿ ಮಾಡುವ ನೆಪದಲ್ಲಿ ಅನಾಗರಿಕವಾಗಿ ವರ್ತಿಸಲು ಯಾವುದೇ ಅಧಿಕಾರವಿಲ್ಲ.

ಸಿಆರ್​ಪಿಸಿ ಸೆಕ್ಷನ್ 144ರ ಪ್ರಕಾರ ಲಾಠಿ ಪ್ರಹಾರ ಮಾಡುವ ಮತ್ತು ದೈಹಿಕವಾಗಿ ಹಲ್ಲೆ ನಡೆಸುವ ಯಾವುದೇ ಅಧಿಕಾರವಿಲ್ಲ. ಪೊಲೀಸರ ಈ ನಡೆ ಸಂವಿಧಾನದ ವಿಧಿ 21ರಡಿ ಬರುವ ಜೀವಿಸುವ ಹಕ್ಕಿನ ಮೇಲೆ ಹಾಗೂ ಮಾನವ ಹಕ್ಕುಗಳ ಮೇಲಿನ ದೌರ್ಜನ್ಯವಾಗಿದೆ. ಹೀಗಾಗಿ, ಪೊಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ್ದಾರೆ.

ಸರ್ಕಾರ ಸಾರ್ವಜನಿಕರಿಗೆ ಅಗತ್ಯ ಆಶ್ರಯ, ಆಹಾರ, ಕುಡಿಯುವ ನೀರು, ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲು ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಜನರ ಅಗತ್ಯ ಸಂಚಾರಕ್ಕೂ ನಿರ್ಬಂಧ ವಿಧಿಸುವ ಮೂಲಕ, ಹಿಂಸಿಸುವ ಮೂಲಕ ತೊಂದರೆ ಕೊಡುತ್ತಿದ್ದಾರೆ.

ಆದ್ದರಿಂದ ಪೊಲೀಸರ ಅಮಾನವೀಯ ನಡವಳಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶಿಸಬೇಕು. ಒಂದು ವೇಳೆ ಇಂತಹುದೇ ದೌರ್ಜನ್ಯ ಮುಂದುವರೆಸಿದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.