ಬೆಂಗಳೂರು : ಕೊರೊನಾ ಹಿನ್ನೆಲೆ ಬಹಳ ಸರಳವಾಗಿ ಈ ವರ್ಷ ಬೆಂಗಳೂರಲ್ಲಿ ಹೊಸ ವರ್ಷಚಾರಣೆ ಆಚರಣೆ ಮಾಡಲು ಸರ್ಕಾರ ನಿರ್ಧಾರಿಸಿತ್ತು. ಹೀಗಾಗಿ 144 ಸೆಕ್ಷನ್ ಜಾರಿ ಮಾಡಿ ಖಾಕಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದರಿಂದಾಗಿ, ಎಲ್ಲೆಯೂ ಕೂಡ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, "ಹೊಸವರ್ಷದ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ನಮ್ಮ ಅಧಿಕಾರಿಗಳು, ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದ್ದಾರೆ.
ಬಹಳ ಶಾಂತಿಯುತವಾಗಿ ಸಂಭ್ರಮಾಚರಣೆ ನಗರದಲ್ಲಿ ನಡೆದಿದೆ. ಕೋವಿಡ್ ಪ್ರೋಟೋಕಾಲ್ ನೂರಕ್ಕೆ ನೂರರಷ್ಟು ಪಾಲನೆಯಾಗಿದೆ. ಶ್ರಮವಹಿಸಿದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ" ಎಂದರು.
ಇನ್ನು, ಇದೇ ವೇಳೆ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.