ಬೆಂಗಳೂರು : ಸಂಜಯ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮೋಸ್ಟ್ ವಾಂಟೆಡ್ ರೌಡಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಜಯನಗರದ ಪೊಲೀಸ್ ಸ್ಟೇಷನ್ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರೌಡಿಶೀಟರ್ ಶರಣಪ್ಪನನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ. ರೌಡಿಶೀಟರ್ನೊಂದಿಗೆ ಮಾತಿಗಿಳಿದ ಅಲೋಕ್ ಕುಮಾರ್ ಯಾರೋ ನೀನು? ನೀನೇನು ದೊಡ್ಡ ರೌಡಿಯಾ ? ಯಾವ ಊರು ? ಏನ್ ಸಂಜಯನಗರದ ದಾದಾ ಆಗ್ಬೇಕಾ ನೀನು? ಎಷ್ಟು ವಯಸ್ಸು? ಒಳ್ಳೇ ರೀತಿ ಬದುಕಿ, ಇಲ್ಲಾ ಗೊತ್ತಲ್ಲ... ಅಂತಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರೌಡಿ ಶೀಟರ್ ಶರಣಪ್ಪ ಮಾತ್ರ (19) ಸ್ಕೂಲಲ್ಲಿ ಟೀಚರ್ ಕೇಳಿದ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಅಲೋಕ್ ಕುಮಾರ್ ಮಾತಿಗೆ ಉತ್ತರ ನೀಡಿದ್ದಾನೆ. ಪೊಲೀಸ್ ಸಿಬ್ಬಂದಿಗೆ ಮೆಂಟೆನೆನ್ಸ್ ಡೈರಿ ಕೇಳಿ ತರಾಟೆಗೆ ತೆಗೆದುಕೊಂಡು, ಒಳ್ಳೆೇ ರೀತಿ ಕೆಲಸಮಾಡಿ, ನಾವು ಎಕ್ಸ್ಪೆಕ್ಟ್ ಮಾಡಿದ್ದಕ್ಕಿಂತ ಚೆನ್ನಾಗಿ ಕಾರ್ಯನಿರ್ವಹಿಸಿದ್ದೀರಾ, ಒಳ್ಳೇದಾಗ್ಲಿ ಎಂದು ಅಲೋಕ್‌ಕುಮಾರ್ ಠಾಣೆಯಿಂದ ನಿರ್ಗಮಿಸಿದರು.