ನೆಲಮಂಗಲ: ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳ ನೇತೃತ್ವದಲ್ಲಿ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿ ರಾಜಸ್ಥಾನ ಮೂಲದ ವ್ಯಕ್ತಿಯನ್ನ ಬಂಧಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಬೈಯಂಡಳ್ಳಿ ಬಳಿ ತುಪ್ಪ ತಯಾರಿಕ ಘಟಕದಲ್ಲಿ ನಕಲಿ ನಂದಿನಿ ತಯಾರಿಸಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ.
ಕೆಎಂಎಫ್ ಜಾಗೃತ ದಳದ ಅಶೋಕ್, ಜಯರಾಮ್, ಸುರೇಶ್ ತಂಡದೊಂದಿಗೆ ನೆಲಮಂಗಲ ಉಪ ವಿಭಾಗದ ಡಿವೈಎಸ್ಪಿ ಗೌತಮ್, ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ದಾಳಿಯ ನೇತೃತ್ವ ವಹಿಸಿದ್ದರು. ನಕಲಿ ನಂದಿನಿ ತುಪ್ಪದ ಆರೋಪಿ ರಾಜಸ್ಥಾನ ಮೂಲದ ಬಾಬು ಲಾಲ್ (40) ಬಂಧಿಸಲಾಗಿದೆ. 15 ಲಕ್ಷಕ್ಕೂ ಹೆಚ್ಚು ವಸ್ತುಗಳನ್ನ ಜಪ್ತಿ ಮಾಡಲಾಗಿದೆ.
![Fake nandhini packet](https://etvbharatimages.akamaized.net/etvbharat/prod-images/kn-bng-02-ghee-av-ka10057_17022022161051_1702f_1645094451_868.jpg)
ರಾಜಸ್ಥಾನದ ಪಾಲಿ ಜಿಲ್ಲೆಯ ಬಾಬುಲಾಲ್ ಈ ಹಿಂದೆ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರದಲ್ಲಿ ನಷ್ಟ ಆಗಿದ್ದರಿಂದ ಕಲಬೆರಕೆ ತುಪ್ಪ ತಯಾರಿಸಲು ಮುಂದಾಗಿದ್ದ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಹಿಜಾಬ್ ವಿವಾದ: ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ; ಮನವಿ ಪತ್ರ ಸಲ್ಲಿಕೆ