ಬೆಂಗಳೂರು: ಹತ್ತು ಗಂಟೆಯ ನಂತರ ಅತ್ಯಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗೂ ನಿಷೇಧ ಇದ್ದರೂ ಕಟ್ಡೌನ್ ಸಮಯದ ನಂತರ ಬಾರ್ ಓಪನ್ ಮಾಡಿ ಡಬಲ್ ರೇಟ್ಗೆ ಮದ್ಯ ಅಕ್ರಮವಾಗಿ ಮಾರುತ್ತಿರುವವರನ್ನು ರಾಜಧಾನಿಯ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹತ್ತು ಸಾವಿರ ರೂ. ಮೌಲ್ಯದ ಮದ್ಯವನ್ನ 23 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ನಗದು ಹಣ ಜಪ್ತಿ ಮಾಡಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಶಿವಲಿಂಗ್ ಅಲಿಯಾಸ್ ಸಣ್ಣಯ್ಯ (31), ಮನು ಅಲಿಯಾಸ್ ಪುಟ್ಟಸ್ವಾಮಿ (25), ಭಾಸ್ಕರ್ ಅಲಿಯಾಸ್ ಬಸವರಾಜು (28) ಬಂಧಿತ ಆರೋಪಿಗಳಾಗಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.