ETV Bharat / state

36 ಕೇಸ್​ಗಳಲ್ಲಿ ಭಾಗಿ.. ಮೂರು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಇರಾನಿ ಗ್ಯಾಂಗ್ ಸದಸ್ಯ - ಈಟಿವಿ ಭಾರತ ಕನ್ನಡ

36 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇರಾನಿ ಗ್ಯಾಂಗ್​ನ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

irani gang member arrested
ಇರಾನಿ ಗ್ಯಾಂಗ್ ಸದಸ್ಯ ಬಂಧನ
author img

By

Published : Dec 21, 2022, 10:47 PM IST

ಬೆಂಗಳೂರು: ಮೂರು ವರ್ಷಗಳಿಂದ ಪೊಲೀಸರಿಗೆ ಸಿಗದೆ ಬೆಂಗಳೂರಿನಲ್ಲಿ ಸಕ್ರಿಯನಾಗಿದ್ದ ಕುಖ್ಯಾತ ಇರಾನಿ ಗ್ಯಾಂಗ್​ನ ಸದಸ್ಯನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಅಬುಜಾರ್ ಅಲಿ ಬಂಧಿತ ಆರೋಪಿ. 2013-2015ರ ಅವಧಿಯಲ್ಲಿ ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಿಭಾಗದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ವಿರುದ್ಧ ಬರೋಬ್ಬರಿ 36 ಪ್ರಕರಣಗಳು ದಾಖಲಾಗಿದ್ದವು.

2019ರಿಂದಲೂ ಪೊಲೀಸರ ಕೈಗೆ ಸಿಗದೇ ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ, ಬನಶಂಕರಿ ಠಾಣಾ ಇನ್ಸ್​​ಪೆಕ್ಟರ್​ ಸಿ.ಗಿರೀಶ್ ನಾಯ್ಕ್, ಸಬ್ ಇನ್ಸ್​​ಪೆಕ್ಟರ್ ಶ್ರೀನಿವಾಸ ಪ್ರಸಾದ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಯರು ಪೊಲೀಸ್​​​ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.