ETV Bharat / state

ಬರೋಬ್ಬರಿ 563 ಮೊಬೈಲ್​ ಕಳ್ಳತನ ಮಾಡಿದ್ದ ಖತರ್ನಾಕ್​ ಖದೀಮ ಅಂದರ್​ - ಬೆಂಗಳೂರು ಪೊಲೀಸ್​ ಕಾರ್ಯಚರಣೆ

ಕಳೆದ ಎರಡು ದಿನಗಳ ಹಿಂದೆ ಕೇಂದ್ರ ವಿಭಾಗದ ಪೊಲೀಸರು ಕಾರ್ಯಚರಣೆ ನಡೆಸಿ 10 ಜನ ಅಂತಾರಾಜ್ಯ ಕಳ್ಳರ ಗುಂಪೊಂದನ್ನು ಬಂಧಿಸಿತ್ತು. ಪ್ರಕರಣ ಸಂಬಂಧ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 563 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

Police arrested mobile theft
author img

By

Published : Oct 5, 2019, 9:40 AM IST

ಬೆಂಗಳೂರು : ಸಮಾಜ ಸೇವಕ, ರಿಯಲ್​ ಎಸ್ಟೇಟ್​ ಉದ್ಯಮಿಯಾಗಿದ್ದುಕೊಂಡು ಮೊಬೈಲ್​ ಕಳ್ಳತನ ಮಾಡಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್​ ಕಳ್ಳ ಈಗ ಪೊಲೀಸ್​ ಅತಿಥಿಯಾಗಿದ್ದಾನೆ.

ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿದ್ದ ಆರೀಫ್ ಅಫ್ಜಲ್ ಖಾನ್‌ ಬಂಧಿತ ಆರೋಪಿ. ಬಂಧಿತನಿಂದ ವಿವಿಧ ಕಂಪನಿಯ ಸುಮಾರು 563 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೆ.ಜೆ ನಗರದ ನಿವಾಸಿಯಾಗಿರುವ ಅಫ್ಜಲ್ ಖಾನ್ ಕಳೆದ ಆರೇಳು ವರ್ಷಗಳಿಂದ ಈ ಮೊಬೈಲ್​ ಕಳ್ಳತನ ದಂಧೆ ನಡೆಸುತ್ತಿದ್ದು, ತನ್ನ ಸಹಚರರ ಮೂಲಕ ಕಳ್ಳತನ ಮಾಡಿಸಿ ಕದ್ದದಂತಹ ಮೊಬೈಲ್​ಗಳನ್ನು ನೆರೆ ರಾಜ್ಯಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸ್​ ತನಿಖೆಯಿಂದ ಬಯಲಾಗಿದೆ. ಅಷ್ಟೇ ಅಲ್ಲದೆ ಈತನಿಗೆ ಚಾಮರಾಜಪೇಟೆ ಶಾಸಕರ ಜೊತೆ ನಂಟು ಇರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಕೇಂದ್ರ ವಿಭಾಗದ ಪೊಲೀಸರು ಬಂಧಿತಸಿದ್ದ 10 ಜನ ಅಂತಾರಾಜ್ಯ ಮೊಬೈಲ್ ಕಳ್ಳರ ಜಾಲವನ್ನು ಬೇಧಿಸಿದ್ದರು. ಈ ವೇಳೆ, ಪ್ರಕರಣದ ಪ್ರಮುಖ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:Body:

563 ಮೊಬೈಲ್ ಕದ್ದ ಖತರ್ನಾಕ್ ಜಾಲದ ಮುಖ್ಯಸ್ಥ ಯಾರು ಗೊತ್ತಾ‌?

ಬೆಂಗಳೂರು: ಹೆಸರಿಗೆ ಸಮಾಜ ಸೇವಕ, ರಿಯಲ್ ಎಸ್ಟೇಟ್ ಉದ್ಯಮಿ.. ಈತ ಮಾಡ್ತಾ ಇದ್ದದ್ದು ಮಾತ್ರ ಕಳ್ಳತನ‌ ಮಾಡಿದ್ದ ಮೊಬೈಲ್ ಗಳನ್ನು ಅಕ್ರಮವಾಗಿ ಹೊರ ರಾಜ್ಯಗಳಲ್ಲಿ ಮಾರುತ್ತಿದ್ದ ಖತರ್ ನಾಕ್ ಕಳ್ಳ..
ಈತ ಮಾಜಿ ಸಚಿವನ ಆಪ್ತನಾಗಿದ್ದುಕೊಂಡೇ ಬರೋಬ್ಬರಿ 563 ವಿವಿಧ ಕಂಪೆನಿಗಳ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆತ ಬೇರೆ ಯಾರೂ ಅಲ್ಲ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿದ್ದ ಆರೀಫ್ ಅಫ್ಜಲ್ ಖಾನ್‌ ನನ್ನು ಪೊಲೀಸರು ಕೊಳ ತೋಡಿಸಿದ್ದಾರೆ.
ಜೆ.ಜೆ ನಗರದ ನಿವಾಸಿಯಾಗಿರುವ ಆರೀಫ್ ಅಫ್ಜಲ್ ಖಾನ್ ಗೆ ಮೊಬೈಲ್ ಸ್ನ್ಯಾಚಿಂಗ್ ಜಾಲದ ನಂಟು‌ ಬೆಳೆಸಿಕೊಂಡಿದ್ದ ಸಹಚರರ ಮೂಲಕ ಕಳವು ಮಾಡಿಸಿ ಮೊಬೈಲ್ ಸಾಗಾಣಿಕೆಯಲ್ಲಿ ಫಂಟರ್ ಆಗಿದ್ದ. ಈತನಿಗೆ ಚಾಮರಾಜಪೇಟೆ ಶಾಸಕರ ಜೊತೆ ನಂಟು ಇರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಎರಡು ದಿನಗಳ ಹಿಂದೆ ಕೇಂದ್ರ ವಿಭಾಗದ ಪೊಲೀಸರಿಂದ ಬಂಧಿತರಾಗಿರುವ 10 ಜನ ಅಂತಾರಾಜ್ಯ ಮೊಬೈಲ್ ಕಳ್ಳರ ಜಾಲ ಬೇಧಿಸಿದ್ದರು. ಸದ್ಯ ಮಾಡಿದ ತಪ್ಪಿಗೆ ಕೃತ್ಯ ಎಸಗಿರುವ ಆರೋಪಿಗಳು ಜೈಲು ಪಾಲಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.