ETV Bharat / state

ಮೀಟರ್ ಬಡ್ಡಿ ದಂಧೆ ಅಡ್ಡೆ‌ ಮೇಲೆ ಸಿಸಿಬಿ ದಾಳಿ.. ಮೂವರ ಬಂಧನ - Bangalore interest deduction

ಕೊರೊನಾ ಹಾಗೂ ಲಾಕ್​​​​ಡೌನ್​​ ನಡುವೆಯೂ ಮೀಟರ್​ ಬಡ್ಡಿ ಹಾವಳಿ ಹೆಚ್ಚಾಗುತ್ತಿದೆ. ಈ ಸಂಬಂಧ ರಾಜಧಾನಿಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

Police arrested 3 people those who involved in meter interest
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಅಡ್ಡೆ‌ ಮೇಲೆ ಸಿಸಿಬಿ ದಾಳಿ...ಮೂವರ ಬಂಧನ
author img

By

Published : Jul 23, 2020, 11:02 PM IST

ಬೆಂಗಳೂರು: ಲಾಕ್​​​​ಡೌನ್ ನಂತಹ ಪ್ರತಿಕೂಲ ಸಂದರ್ಭದಲ್ಲಿಯೂ ಅಕ್ರಮವಾಗಿ ಮೀಟರ್ ಬಡ್ಡಿ ನಡೆಸುತ್ತಿದ್ದ ಅಡ್ಡೆ ಮೇಲೆ‌ ದಾಳಿ ನಡೆಸಿ ಮೂವರು ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಟನ್​​ಪೇಟೆ‌ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡಿದ್ದ ಬಾಬುಲಾಲ್‌ ಎಂಬುವರು ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊರೊನಾ‌ ಲಾಕ್​​ಡೌನ್ ವೇಳೆ ಪರವಾನಗಿ‌ ಪಡೆದುಕೊಳ್ಳದೆ, ಜನರಿಗೆ ಸಾಲ ನೀಡಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದರು. ಸರಿಯಾಗಿ ಬಡ್ಡಿ ನೀಡದೆ ಹೋದರೆ ರೌಡಿಗಳಿಂದ ಸಾಲಗಾರರಿಗೆ ಧಮಕಿ ಹಾಕಿಸಿ ಹಣ ವಸೂಲಿ ಮಾಡುತ್ತಿದ್ದರು.

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಅಡ್ಡೆ‌ ಮೇಲೆ ಸಿಸಿಬಿ ದಾಳಿ...ಮೂವರ ಬಂಧನ

ಈ ಬಗ್ಗೆ ಕಾಟನ್​ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ವಿವಿ ಪುರದಲ್ಲಿದ್ದ ಬಾಬುಲಾಲ್ ಜೈನ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದಿರುವುದಾಗಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ ಮಾಹಿತಿ‌‌ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.