ETV Bharat / state

ಆನ್​ಲೈನ್​ನಲ್ಲೇ ಸಿಗಲಿದೆ ಪೋಡಿ, ಭೂ ಪರಿವರ್ತನೆ ಸ್ಕೆಚ್.. ಜಮೀನಿನ ಪೋಡಿ ನಕ್ಷೆ ಏಕೆ ಅಗತ್ಯ? - Swavalambi app

ಕಂದಾಯ ಇಲಾಖೆಯು ಸ್ವಾವಲಂಬಿ ಎಂಬ ಹೆಸರಿನ ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಸಹಾಯದಿಂದ ರೈತರು ಜಮೀನಿನ ಪೋಡಿಯನ್ನು ಸ್ವತಃ ತಯಾರಿಸಿಕೊಳ್ಳಬಹುದು.

land conversion sketch will be available online
ಜಮೀನು
author img

By

Published : Oct 26, 2022, 2:53 PM IST

ಬೆಂಗಳೂರು: ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರ ನಕ್ಷೆಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ.

11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರಿಕರು https:// 103,138.196.154/service19/Report/ ವೆಬ್​ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೇ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್‌ಸೈಟ್‌ನಲ್ಲಿ ಆ ನಕ್ಷೆಗಳನ್ನು ಸಾರ್ವಜನಿಕರು ಮುದ್ರಣ ಪ್ರತಿ ಪಡೆದುಕೊಳ್ಳಬಹುದು.

ಹೆಚ್ಚುವರಿ ಹಣ ನೀಡಬೇಕಾಗಿಲ್ಲ: ಅರ್ಜಿ ಸಲ್ಲಿಸುವಾಗ ನಾಗರಿಕರು ಹಣ ಪಾವತಿಸಿರುವ ಕಾರಣ ನಕ್ಷೆ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಣ ಪ್ರತಿ ಪಡೆಯಲು ಯಾವುದೇ ಹೆಚ್ಚುವರಿ ಹಣ ಕೊಡಬೇಕಾಗಿರುವುದಿಲ್ಲ. ಇದರಿಂದ ತಮ್ಮ ನಕ್ಷೆಗಳ ಪ್ರಿಂಟ್‌ ಔಟ್‌ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾಗಿರುವುದಿಲ್ಲ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಾಗರಿಕರು ಯಾವ ನಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೋ ಆ ಅರ್ಜಿ ಸಂಖ್ಯೆ, ಮೊಬೈಲ್‌ ಸಂಖ್ಯೆ, ಸರ್ವೆ ನಂಬರ್‌, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್‌ ಹೀಗೆ ವಿವಿಧ ಮಾಹಿತಿಗಳನ್ನು ದಾಖಲಿಸಿ ತಮ್ಮ ನಕ್ಷೆ ಪಡೆದುಕೊಳ್ಳಬಹುದು ಎಂದು ಸರ್ವೇ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಆ್ಯಪ್​ ಅಭಿವೃದ್ಧಿ: ರೈತರು ತಮ್ಮ ಜಮೀನಿನ ಪೋಡಿ ನಕ್ಷೆಯನ್ನು (ಸ್ಕೆಚ್) ತಾವೇ ತಯಾರಿಸಿಕೊಳ್ಳುವ ಸ್ವಯಂ ಸೇವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ದಪಡಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯು ಸ್ವಾವಲಂಬಿ ಎಂಬ ಹೆಸರಿನ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಸಹಾಯದಿಂದ ರೈತರು ಜಮೀನಿನ ಪೋಡಿಯನ್ನು ಸ್ವತಃ ತಯಾರಿಸಿಕೊಳ್ಳಬಹುದು. ಹಾಗಾದರೆ ಜಮೀನಿನ ಪೋಡಿ ಸ್ಕೆಚ್ ಎಂದರೇನು? ಪೋಡಿ ಯಾವಾಗ ಮಾಡಿಸಬೇಕು? ಪೋಡಿ ಮಾಡುವುದರಿಂದಾಗುವ ಪ್ರಯೋಜನವೇನೆಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.

ಪೋಡಿ ಎಂದರೇನು?: ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಅಂದರೆ ಒಂದೇ ಸರ್ವೇ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಎಲ್ಲಾ ಸದಸ್ಯರ ಹೆಸರಿನ ಮೇಲೆ ಸರ್ವೇ ನಂಬರ್ ಮಾಡುವುದನ್ನೇ ಪೋಡಿ ಎಂದು ಕರೆಯುವರು.

ಜಮೀನಿನ ಪೋಡಿ ನಕ್ಷೆ ಅಗತ್ಯ ಏಕೆ? : ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ಭೂ ಪರಿವರ್ತನೆ ಹೀಗೆ ಹಲವಾರು ಚಟುವಟಿಕೆಗಳಿಗೆ ಪೋಡಿ ನಕ್ಷೆ ತುಂಬಾ ಅವಶ್ಯಕವಾಗಿದೆ. ಒಂದು ಸರ್ವೇ ನಂಬರಿನಲ್ಲಿ ಹಲವರ ಹೆಸರಿದ್ದರೆ ಮುಂದೆ ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕೆ ತೊಂದರಯಾಗುತ್ತದೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯವೂ ಸಿಗುವುದಿಲ್ಲ. ಜಮೀನು ಮಾರಾಟ ಸಂದರ್ಭದಲ್ಲಿಯೂ ತೊಡಕಾಗುವ ಸಾಧ್ಯತೆ ಇರುತ್ತದೆ.

ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಈಗ ಆನ್ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸ್ವತಃ ಅವರೆ ಮೊಬೈಲ್ ನಲ್ಲಿ ಜಮೀನಿನ ಪೋಡಿ ನಕ್ಷೆ ತಯಾರಿಸಿಕೊಳ್ಳಬಹುದು. ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭತ್ತದ ಕೃಷಿ ಇಳಿಮುಖ: ಅನ್ನದ ಕೊರತೆ ಎದುರಾಗುವ ಭೀತಿ

ಉದಾಹರಣೆಗೆ ಹೇಳುವುದಾದರೆ, ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದರೆ ತಮ್ಮ ಐದು ಎಕರೆ ಭೂಮಿಯನ್ನು ಯಾರಿಗೆ ಎಷ್ಟು ಭಾಗ ಎಂಬುದನ್ನು ನಿರ್ಧರಿಸಿ ಸ್ಕೆಚ್ ಸಿದ್ಧಪಡಿಸಬಹುದು. ಎಲ್ಲರೂ ಒಪ್ಪಿದ ನಂತರ ಸ್ಕೆಚ್ ಅನ್ನು ತಹಶಿಲ್ದಾರ್​ ಕಚೇರಿಯ ಭೂ ದಾಖಲೆಗಳ ವಿಭಾಗಕ್ಕೆ ಅಪ್ಲೋಡ್ ಮಾಡಿದರೆ ಸಾಕು, ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್ ನ ಗಡಿಗಳಿಗೆ ಅನುಗುಣವಾಗಿ ನೋಂದಣಿ ಮಾಡಲಾಗುವುದು. ರೈತರಿಗೆ ಸ್ವಾವಲಂಬಿ ಆ್ಯಪ್ ಕೇವಲ ಪೋಡಿ ನಕ್ಷೆ ಅಷ್ಟೇ ಅಲ್ಲದೆ ಜಮೀನಿನ 11 ಇ, ಭೂ ಪರಿವರ್ತನೆ ಮತ್ತು ವಿಭಾಗ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯುವುದೇಗೆ? : ರೈತರು ಆನ್​ಲೈನ್ ಮೂಲಕ ಪೋಡಿ ನಕ್ಷೆ ಪಡೆಯಲು ಈ https://bhoomojini.karnataka.gov.in/Service27 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸ್ವಾವಲಂಬಿ ಆ್ಯಪ್ ಪೇಜ್ ಓಪನ್ ಆಗುತ್ತದೆ. ರೈತರು ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು.

ನಂತರ ಮೊಬೈಲ್ ಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿಯಿದ್ದರೆ ಸಮಸ್ಯೆಯಾಗುವುದಿಲ್ಲ. ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಪೋಡಿ ನಕ್ಷೆ ಸಿಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.