ETV Bharat / state

Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ - ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್​ ಕರ್ನಾಟಕ 2022'ಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

PM Narendra Modi
ಪ್ರಧಾನಿ ನರೇಂದ್ರ ಮೋದಿ
author img

By

Published : Nov 2, 2022, 12:29 PM IST

Updated : Nov 2, 2022, 12:36 PM IST

ಬೆಂಗಳೂರು: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಕರ್ನಾಟಕ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದೆ. ಹೂಡಿಕೆಗೆ ಕರ್ನಾಟಕದಷ್ಟು ಅವಕಾಶ ಮತ್ತೊಂದು ರಾಜ್ಯದಲ್ಲಿ ಇಲ್ಲ. ದೂರದೃಷ್ಟಿ ಇರುವ ರಾಜ್ಯ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.

ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 'ಜಾಗತಿಕ ಹೂಡಿಕೆದಾರರ ಸಮಾವೇಶ' ಆರಂಭಗೊಂಡಿದೆ. ನಗರದ ಅರಮನೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದರು.

'ಇನ್ವೆಸ್ಟ್​ ಕರ್ನಾಟಕ 2022'ಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ

ಕನ್ನಡಿಗರ ಸ್ವಾಭಿಮಾನ ದೊಡ್ಡದು: ನಂತರ ಮಾತನಾಡಿದ ಅವರು, ವೆಲ್ ಕಂ ಟು ನಮ್ಮ ಕರ್ನಾಟಕ. ವೆಲ್ ಕಂ ಟು ನಮ್ಮ ಬೆಂಗಳೂರು ಎಂದು ಉದ್ಯಮಿಗಳಿಗೆ ಸ್ವಾಗತ ಕೋರಿದರು. ನಿನ್ನೆಯಷ್ಟೇ ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಎಲ್ಲ ಕನ್ನಡಿಗರಿಗೂ ನನ್ನ ಅಭಿನಂದನೆಗಳು ಎಂದು ಮೋದಿ ಮಾತು ಆರಂಭಿಸಿದರು.

'ಇದು (ಕರ್ನಾಟಕ) ಸಂಪ್ರದಾಯ ಮತ್ತು ತಂತ್ರಜ್ಞಾನ ಒಳಗೊಂಡ ಪ್ರದೇಶ. ಇದು ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಯೋಚನೆ ಮಾಡಿದರೆ ನಮ್ಮ ಮನಸಿನಲ್ಲಿ ಬರುವ ಮೊದಲ ಚಿತ್ರಣ ಬೆಂಗಳೂರಿನದ್ದಾಗಿದೆ. ಕರ್ನಾಟಕದ ಸಂಸ್ಕೃತಿ ಉನ್ನತ ಮಟ್ಟದ್ದು. ಕನ್ನಡಿಗರ ಸ್ವಾಭಿಮಾನ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ: ಭಾರತದ ಪ್ರಗತಿಯಾಗಲು ರಾಜ್ಯಗಳು ಮೊದಲು ಪ್ರಗತಿ ಹೊಂದಬೇಕಿದೆ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿವೆ. ಸಮಾವೇಶದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಸಾವಿರಾರು‌ ಕೋಟಿ ಹೂಡಿಕೆ ಆಗಲಿದೆ. ಕೋವಿಡ್ ಪರಿಣಾಮದಿಂದ ಈಗಲೂ ಜಗತ್ತು ಹೊಯ್ದಾಡುತ್ತಿದೆ. ಎಲ್ಲೆಲ್ಲೂ ಅನಿಶ್ಚಿತತೆ ಇದೆ. ಭಾರತದಲ್ಲೂ ಕೋವಿಡ್ ಪರಿಣಾಮ ಇದೆ. ಇಂದು ಜಗತ್ತು ಭಾರತದ‌ದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಭಾರತದ ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ ಎಂದರು.

ನವ ಭಾರತದ ನಿರ್ಮಾಣದ ಅಗತ್ಯ: ಉತ್ಪಾದನೆ, ಪೂರೈಕೆಯಲ್ಲಿ ದೇಶ ಭರವಸೆದಾಯಕವಾಗಿದೆ. ಇಂದು ನಾವು ಯಾವ ಸ್ಥಾನದಲ್ಲಿದ್ದೇವೆ, ನಮ್ಮ ಪ್ರಯಾಣ ಎಲ್ಲಿಂದ ಶುರುವಾಯ್ತು ಅನ್ನೋದನ್ನು ನೆನಪಿಸಿಕೊಳ್ಳಬೇಕು. ನಮ್ಮ ಕಾನೂನುಗಳನ್ನು ಉದ್ಯಮಸ್ನೇಹಿ ಮಾಡಬೇಕಿದೆ. ನವ ಭಾರತದ ನಿರ್ಮಾಣದ ಅಗತ್ಯ ಇದೆ. ಕೋವಿಡ್, ಯುಕ್ರೇನ್ ಯುದ್ದದಿಂದ ಇಡೀ ವಿಶ್ವ ಬಳಲುತ್ತಿದೆ. ಭಾರತದ ಮೆಲೆಯೂ ಇದರ ಪರಿಣಾಮ ಬೀರಿದೆ ಎಂದು ಹೇಳಿದರು.

ಭಾರತದ ಅರ್ಥವ್ಯವಸ್ಥೆ ಗಟ್ಟಿಯಾಗಿದೆ. ಕೋವಿಡ್ ಸಮಯದಲ್ಲಿ ಔಷಧಿ, ಲಸಿಕೆಯನ್ನು ವಿಶ್ವಕ್ಕೆ ನೀಡುವಲ್ಲಿ ಕೂಡ ಯಶಸ್ವಿಯಾಗಿದೆ. ವಿಶ್ವಕ್ಕೆ ನಮ್ಮ ತಯಾರಿಯನ್ನು ತೋರಿಸಬೇಕಾಗಿದೆ. ಕೆಲವು ವರ್ಷಗಳ ಮುನ್ನ ನಾವು ಪಾಲಿಸಿ ಮೇಕಿಂಗ್‌ನಲ್ಲಿ ಕಷ್ಟ ಪಡುತ್ತಿದ್ದೆವು. ಆದರೆ ಈಗ ನಮ್ಮ ನಿಲುವುಗಳು ಬದಲಾಗಿವೆ. ನಾವು ಹೊಸ ಕಾನೂನುಗಳನ್ನು ರೂಪಿಸಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಉದ್ಯಮಿಗಳಿಗೆ ಪ್ರಧಾನಿ ಮೋದಿ ತಿಳಿಸಿದರು.

ಪಿಎಂ ಗತಿಶಕ್ತಿ ಕಾರ್ಯಕ್ರಮದಡಿ‌ ಅಭಿವೃದ್ಧಿ: ಆರ್ಥಿಕ ನಿಯಮಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಗಳಾಗಿದೆ. ಯುಪಿಐ ಮೂಲಕ ಟ್ರಾನ್ಸಕ್ಷನ್‌ಗಳು ಇಂದು ಆಗುತ್ತಿದೆ. ನಾವು ಕಾರ್ಪೋರೆಟ್ ಟ್ಯಾಕ್ಸ್ ಕಡಿಮೆ ಮಾಡಿ ಉತ್ತೇಜನ ನೀಡಿದ್ದೇವೆ. ಭಾರತ ವಿದೇಶಿ ನೇರ ಹೂಡಿಕೆಯಲ್ಲಿ ನವೋದ್ಯಮಕ್ಕೆ ರಹದಾರಿ ತೆರೆಯಲಾಗಿದೆ. ಡ್ರೋನ್, ರಕ್ಷಣಾ, ವೈಮಾನಿಕ ಕ್ಷೇತ್ರದಲ್ಲಿ ಕೂಡ ವಿದೇಶಿ ನೇರ ಹೂಡಿಕೆ ತೆರೆದಿದ್ದೇವೆ. ಕಳೆದ 8 ವರ್ಷಗಳಲ್ಲಿ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಹೆಚ್ಚು ನಿರ್ಮಾಣವಾಗಿದೆ. ಪಿಎಂ ಗತಿಶಕ್ತಿ ಕಾರ್ಯಕ್ರಮದಡಿ‌ ಮೂಲಸೌಕರ್ಯಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಮೂರು ಸ್ತರಗಳಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಹಲವಾರು ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕ ಕೈಗಾರಿಕೆಯಿಂದ ಹಿಡಿದು ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದೆ. ಈಸ್ ಆಫ್ ಡೂಯಿಂಗ್, ವಿದೇಶಿ ಹೂಡಿಕೆಯಲ್ಲಿ ಮುಂದಿದೆ. ಕರ್ನಾಟದಲ್ಲಿ ಮಾಹಿತಿ ತಂತ್ರಜ್ಞಾನ ಜೊತೆಗೆ ಸ್ಟಾರ್ಟ್ ಅಪ್, ನ್ಯಾನೋ ಯೂರಿಯಾ, ಹೈಡ್ರೋಜನ ಎನರ್ಜಿ, ಸ್ಪೇಸ್ ಸ್ಯಾಟಲೈಟ್, ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ವಿವರಿಸಿದರು.

ಸೆಮಿಕಂಡಕ್ಟರ್ ನಲ್ಲಿ ಚಿಪ್ ತಯಾರಿಕೆಯಲ್ಲಿ ರಾಜ್ಯ ಕಾಲಿಡುತ್ತಿದೆ. ಕರ್ನಾಟಕದಷ್ಟು ಅವಕಾಶ ಮತ್ತೊಂದು ರಾಜ್ಯದಲ್ಲಿ ಇಲ್ಲ. ನಾವೀಗ ದೇಶದ ಅಮೃತ ಕಾಲದಲ್ಲಿದ್ದೇವೆ. ನವ ಭಾರತ ನಿರ್ಮಾಣದ ಸಂಕಲ್ಪ ತೊಡಬೇಕಿದೆ. ಈ ಸಮಾವೇಶ ಆಯೋಜನೆ ಮಾಡಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿ, ಸಚಿವ ಸಂಪುಟ, ರಾಜ್ಯ ಸರ್ಕಾರ ಹಾಗೂ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದರು.

ಆರ್ಥಿಕ ಚೇತರಿಕೆ: ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೋವಿಡ್ ನಂತರ ಭಾರತದಲ್ಲಿ ಕರ್ನಾಟಕ ರಾಜ್ಯ ಇಷ್ಟು ದೊಡ್ಡ ಹೂಡಿಕೆ ಸಮಾವೇಶ ಮಾಡುತ್ತಿರುವುದಕ್ಕೆ ಖುಷಿ ಇದೆ. ಕರ್ನಾಟಕದ ಪ್ರಗತಿ, ಕರ್ನಾಟಕದ ಕೈಗಾರಿಕೋದ್ಯಮಿಗಳ ಆತ್ಮವಿಶ್ವಾಸ ಸಮಾವೇಶ ನಡೆಯಲು ಕಾರಣ. ಕೋವಿಡ್ ಚೇತರಿಕೆ ಜೊತೆಗೆ ಆರ್ಥಿಕ ಚೇತರಿಕೆ ಕೂಡ ಕರ್ನಾಟಕದಲ್ಲಿ ಆಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಬೆಳಗ್ಗೆ 10:30ಕ್ಕೆ ಮೋದಿ ಭಾಷಣ

Last Updated : Nov 2, 2022, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.