ETV Bharat / state

ಫೋಟೋಗ್ರಾಫರ್, ಅರ್ಚಕ ಸೇರಿ ಐದೇ ಮಂದಿಯ ಉಪಸ್ಥಿತಿ, ಪೈಲೆಟ್ ಮದ್ವೆ ಮುಗೀತು..! - Indigo Pilot Sameer Verma

ಇಂಡಿಗೋ ಪೈಲೆಟ್ ಆಗಿರುವ ಸಮೀರ್ ವರ್ಮಾ, ಆಕ್ಸೆಂಚರ್​ನಲ್ಲಿ ಕೆಲಸ ಮಾಡುವ ಆಯುಷಿ ಕಟಾರಿಯ ಅವರನ್ನು ಗುರುಗ್ರಾಮದಲ್ಲಿ ಮದುವೆಯಾಗಿದ್ದಾರೆ. ಕೇವಲ ಫೋಟೋಗ್ರಾಫರ್, ಅರ್ಚಕ, ಮದುವೆ ಹೆಣ್ಣಿನ ಅಪ್ಪ-ಅಮ್ಮ ಹಾಗೂ ಅಣ್ಣನ ಉಪಸ್ಥಿತಿಯಲ್ಲಿ ಮದುವೆ ನಡೆಸಲಾಗಿದೆ.

Indigo Pilot Sameer Verma Wedding
ಫೋಟೋಗ್ರಾಫರ್, ಅರ್ಚಕ ಸೇರಿ 5 ಜನರೊಂದಿಗೆ ಮದುವೆ ಮುಗಿಸಿದ ಪೈಲೆಟ್
author img

By

Published : May 12, 2020, 11:37 PM IST

ಬೆಂಗಳೂರು: ಅದ್ಧೂರಿಯಾಗಿ ದೆಹಲಿ, ಬೆಂಗಳೂರಲ್ಲಿ ನಡೆಯಬೇಕಾಗಿದ್ದ ಮೂರು ದಿನದ ಮದುವೆ, ಲಾಕ್​ಡೌನ್​ನಿಂದ ಕೇವಲ ಎರಡು ಗಂಟೆಯಲ್ಲಿ ವಧುವಿನ ಮನೆಯಲ್ಲೇ ಸರಳವಾಗಿ ನಡೆಸಲಾಗಿದೆ. ಅವರ ಮನೆಯವರು, ಸಂಬಂಧಿಕರು, ಕುಟುಂಬಸ್ಥರು ಆನ್​ಲೈನ್ ಮೂಲಕ 9 ಸ್ಥಳಗಳಿಂದ ಮದುವೆ ವೀಕ್ಷಿಸಿದ್ದಾರೆ.

ಇಂಡಿಗೋ ಪೈಲೆಟ್ ಆಗಿರುವ ಸಮೀರ್ ವರ್ಮಾ ಎಂಬುವವರು, ಆಕ್ಸೆಂಚರ್​ನಲ್ಲಿ ಕೆಲಸ ಮಾಡುವ ಆಯುಷಿ ಕಟಾರಿಯ ಅವರನ್ನು ಗುರುಗ್ರಾಮದಲ್ಲಿ ಮದುವೆಯಾಗಿದ್ದಾರೆ. ಕೇವಲ ಫೋಟೋಗ್ರಾಫರ್, ಅರ್ಚಕ, ಮದುವೆ ಹೆಣ್ಣಿನ ಅಪ್ಪ-ಅಮ್ಮ ಹಾಗೂ ಅಣ್ಣನ ಉಪಸ್ಥಿತಿಯಲ್ಲಿ ಮದುವೆ ನಡೆಸಲಾಗಿದೆ. ಲಾಕ್​ಡೌನ್​ಗೆ ಮುಂಚಿತವಾಗಿಯೇ ವಿವಾಹ ಸಿದ್ಧತೆಗಳು ನಡೆದಿದ್ದು, ನೂರಾರು ಅತಿಥಿಗಳೊಂದಿಗೆ, ಆಸ್ಟ್ರೇಲಿಯಾ, ಬೆಲ್ಜಿಯಂಗಳಿಂದ ಸಂಬಂಧಿಕರು ಆಗಮಿಸಬೇಕಿತ್ತು.

Indigo Pilot Sameer Verma Wedding
ಫೋಟೋಗ್ರಾಫರ್, ಅರ್ಚಕ ಸೇರಿ 5 ಜನರೊಂದಿಗೆ ಮದುವೆ ಮುಗಿಸಿದ ಪೈಲೆಟ್

ಮೊದಲೇ ಪ್ಲಾನ್ ಮಾಡಿದ್ದಂತೆ, ದೆಹಲಿ ರೆಸಾರ್ಟ್​ನಲ್ಲಿ ಮೇ 6ಕ್ಕೆ ಮದುವೆ ನಿಗದಿ ಮಾಡಲಾಗಿತ್ತು. ಲಾಕ್ ಡೌನ್ ಮುಂದುವರಿದ ಕಾರಣ ವರನ ತಂದೆ ತಾಯಿ, ಅಲ್ಲೇ ಮದುವೆ ನಡೆಸುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆ ಮದುವೆ ನಡೆದಿದ್ದು, 35 ಅತಿಥಿಗಳು ವಿವಿಧ ರಾಜ್ಯಗಳಿಂದ ಆನ್​ಲೈನ್ ಮೂಲಕ ವೀಕ್ಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.