ETV Bharat / state

ಬೆಂಗಳೂರಲ್ಲಿ ಮೇಲ್ಸೇತುವೆ ತಡೆಗೋಡೆಗೆ ಬೈಕ್​ ಡಿಕ್ಕಿ.. ಹಿಂಬದಿ ಸವಾರ ಸಾವು - ಬೆಂಗಳೂರು

ಮೇಲ್ಸೇತುವೆ ತಡೆಗೋಡೆಗೆ ಬೈಕ್​ ಡಿಕ್ಕಿಯಾದ ಪರಿಣಾಮ ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

flyover barrier
ಮೇಲ್ಸೇತುವೆ ತಡೆಗೋಡೆ
author img

By

Published : Jul 9, 2023, 5:22 PM IST

ಬೆಂಗಳೂರು: ತಡರಾತ್ರಿ ಬೈಕ್​​ನಲ್ಲಿ ತೆರಳಿದ್ದ ಯುವಕರಿಬ್ಬರು ವೇಗವಾಗಿ ವಾಹನ ಚಲಾಯಿಸಿ ಮೇಲ್ಸೇತುವೆ ತಡೆಗೋಡೆಗೆ ಬೈಕ್​ ಗುದ್ದಿದೆ. ಪರಿಣಾಮ ಹಿಂಬದಿ ಸವಾರ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಮ್​ ಕುಮಾರ್ (29) ಸಾವನ್ನಪ್ಪಿದ ಹಿಂಬದಿ ಸವಾರ. ಯಶವಂತ (22) ಗಾಯಗೊಂಡಿರುವ ಬೈಕ್​ ಸವಾರ. ಸದ್ಯ ಈತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಬ್ಯಾಟರಾಯನಪುರದ ಪ್ರಮೋದ್ ಲೇಔಟ್ ನಿವಾಸಿಯಾಗಿರುವ ರಾಮ್ ಕುಮಾರ್ ಹಾಗೂ ಯಶವಂತ್ ನಿನ್ನೆ(ಶನಿವಾರ) ರಾತ್ರಿ ಬೈಕ್​ನಲ್ಲಿ ತೆರಳಿದ್ದರು. ರಾತ್ರಿ 12.30ರ ವೇಳೆಗೆ ಕಾಮಾಕ್ಯದಿಂದ ಕದಿರೇನಹಳ್ಳಿಗೆ ಕಡೆ ವೇಗವಾಗಿ ಹೋಗುವಾಗ ನಿಯಂತ್ರಣ ಕಳೆದುಕೊಂಡ ಬೈಕ್ ದೇವೇಗೌಡ ಪೆಟ್ರೋಲ್ ಬಂಕ್ ಮೇಲ್ಸೇತುವೆ ರ‍್ಯಾಂಪ್​​ಗೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರ ರಾಮ್ ಕುಮಾರ್ ತಡೆಗೋಡೆಯಿಂದ ಹಾರಿ ಕೆಳಗೆ ಬಿದ್ದಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನಪ್ಪಿದ್ದಾನೆ.

ರಾಮ್ ಕುಮಾರ್ ಮೃತ ದೇಹವನ್ನು ಕಿಮ್ಸ್ ಅಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಯಶವಂತ ಕಾಲಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಬೈಕ್​ನ್ನು ವಶಕ್ಕೆ ಪಡೆದುಕೊಂಡ ಬನಶಂಕರಿ‌ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಕ್ ಸವಾರರು ಡ್ರಿಂಕ್ ಅಂಡ್ ಡ್ರೈವ್ ಮಾಡಿರುವ ಶಂಕೆ ಹಿನ್ನೆಲೆ ಪೊಲೀಸರು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರು ಸಾವು

ಆಟೋಗೆ ಬೈಕ್ ಡಿಕ್ಕಿ: ಅಡ್ಡರಸ್ತೆಯಿಂದ ಏಕಾಏಕಿ ಮುಖ್ಯರಸ್ತೆಗೆ ಬಂದ ದ್ವಿಚಕ್ರ ವಾಹನ ಸವಾರ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದ. ಇಂದಿರಾ ನಗರದ ಕೃಷ್ಣ ಟೆಂಪಲ್ ಜಂಕ್ಷನ್​​ನ 2ನೇ ಕ್ರಾಸ್​​ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ಡಿಕ್ಕಿಯ ರಭಸಕ್ಕೆ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರಿಬ್ಬರೂ ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರಿಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಆಟೋಗೆ ಬೈಕ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ- ಸಿಸಿಟಿವಿ ದೃಶ್ಯ

ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ..ಮೂವರಿಗೆ ಗಂಭೀರ ಗಾಯ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಘಟನೆ ಯಲಹಂಕ ತಾಲೂಕಿನ ಅನಂತಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅಪಘಾತದ ವಿಡಿಯೋ ಪಕ್ಕದಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಡಿಕ್ಕಿ ಹೊಡೆದ ಬೈಕ್​ನಲ್ಲಿದ್ದವರಿಗೂ ಗಾಯಗಳಾಗಿತ್ತು.

ಇದನ್ನೂ ಓದಿ: Watch Video - ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ.. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.